• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರಣದಂಡನೆ : ಗಲ್ಲಿಗೇರಿಕೆ ಎಂಬ ಡೆಡ್ಲಿ ಪ್ರೊಸಿಜರ್

By Prasad
|

ಬೆಂಗಳೂರು, ನ. 21 : 2008ರ ನವೆಂಬರ್ 26ರಂದು ಮುಂಬೈನಲ್ಲಿ ನೂರಾರು ಅಮಾಯಕ ಜನರನ್ನು ನಿರ್ದಯವಾಗಿ ಗುಂಡಿಕ್ಕಿ ಕೊಂದ ಪಾಪಿ ಅಜ್ಮಲ್ ಕಸಬ್‌ನ ಕುತ್ತಿಗೆಗೆ 21ನೇ ನವೆಂಬರ್ 2012 ಬೆಳಿಗ್ಗೆ ಕುಣಿಕೆ ಬಿದ್ದ ಕ್ಷಣದಿಂದ ಗೆಲುವಿನ ಕೇಕೆ ಹಾಕಿದ ದನಿಗಳೆಷ್ಟೋ, ಪಟಾಕಿ ಹಾರಿಸಿ ಸಂಭ್ರಮಿಸಿದ ಜನರೆಷ್ಟೋ, ಆನಂದಭಾಷ್ಪ ಹರಿಸಿದ ಕಣ್ಣುಗಳೆಷ್ಟೋ, ಮಿಡಿದ ಹೃದಯಗಳೆಷ್ಟೋ.

ಆದರೆ, ಉಗ್ರ ಪಾತಕಿಯನ್ನು ಗಲ್ಲಿಗೇರಿಸಿದ ಆ ಕ್ಷಣ ಆ ಸ್ಥಳದಲ್ಲಿದ್ದ ಜೈಲಿನ ಅಧಿಕಾರಿಗಳು, ಕೆಲವೇ ಸಿಬ್ಬಂದಿಗಳು, ಸ್ಥಳೀಯ ಮ್ಯಾಜಿಸ್ಟ್ರೇಟ್, ನೇಣಿನ ಕುಣಿಕೆ ಎಳೆದ ಗಟ್ಟಿಗುಂಡಿಗೆಯ ಅಧಿಕಾರಿ, ಹಾಗು ಕಡೆಗೆ ನೇಣಿಗೇರಿದ ಅಜ್ಮಲ್ ಕಸಬ್ ಹೃದಯ ಯಾವ ರೀತಿ ಬಡಿಯುತ್ತಿತ್ತು ಬಲ್ಲವರಾರು? ವಿರಳಾತಿ ವಿರಳ ಅಪರಾಧವನ್ನು ಎಸಗಿದ ಅಪರಾಧಿಯನ್ನು ಗಲ್ಲಿಗೇರಿಸುವ ವಿಧಿವಿಧಾನವೇ ಅಂತಹುದು.

ಗಲ್ಲಿಗೇರಿಸುವ ವಿಧಾನ ಹೀಗಿದೆ

* ಗಲ್ಲಿಗೇರಿಸುವುದು ಖಚಿತವಾದ ಮೇಲೆ ನ್ಯಾಯಾಲಯದ ಆದೇಶದ ಪ್ರತಿ ಅಪರಾಧಿಯ ಕುಟುಂಬದವರಿಗೆ ತಿಳಿಸಲಾಗುವುದು

* ಹ್ಯಾಂಗ್‌ಮನ್‌ಗೆ ಕೂಡ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಜೈಲರ್ ತಿಳಿಸುತ್ತಾರೆ.

* ನೇಣಿಗೆ ಹಾಕುವ ದಿನ ಅಪರಾಧಿ ಆರೋಗ್ಯದಿಂದಿರುವಂತೆ ನೋಡಿಕೊಳ್ಳಲಾಗುತ್ತದೆ.

* ಗಲ್ಲಿಗೇರಿಸುವ ಹಿಂದಿನ ದಿನವೇ ಹ್ಯಾಂಗ್‌ಮನ್ ವರ್ಷಗಳಿಂದ ಜಡ್ಡುಗಟ್ಟಿದ ಸಾಧನಕ್ಕೆ ಆರೈಕೆ ಮಾಡಿ ಎಲ್ಲ ಸರಿಯಾಗಿರುವಂತೆ ನೋಡಿಕೊಳ್ಳುತ್ತಾನೆ.

* ಮರಳಿನ ಚೀಲವನ್ನು ಬಳಸಿ ನೇಣುಗಂಬ ಗಟ್ಟಿಯಾಗಿದೆಯಾ ಇಲ್ಲವಾ ಎಂಬುದನ್ನು ಪರೀಕ್ಷಿಸುತ್ತಾನೆ.

* ಮನಿಲಾ ರೋಪ್ ಎನ್ನುವ ಮೇಣಬಳಿದ ವಿಶೇಷವಾದ ನೇಣುಹಗ್ಗವನ್ನು ಬಿಹಾರದ ಬಕ್ಸಾರ್ ಜೈಲಿನಿಂದ ತರಿಸಲಾಗುತ್ತದೆ.

* ಅಪರಾಧಿಯ ಎತ್ತರ, ಕತ್ತಿನ ಸುತ್ತಳತೆ, ಆತನ ತೂಕಕ್ಕೆ ತಕ್ಕಂತೆ ನೇಣುಹಗ್ಗವನ್ನು ಕೂಡ ಅಡ್ಜಸ್ಟ್ ಮಾಡಲಾಗುತ್ತದೆ.

* ನೇಣಿಗೇರಿಸುವ ದಿನ ಮ್ಯಾಜಿಸ್ಟ್ರೇಟ್, ಜೈಲಿನ ಹಿರಿಯ ಅಧಿಕಾರಿಗಳು, ವೈದ್ಯರು ಮತ್ತು ಅಪರಾಧಿಯ ಕುಟುಂಬದವರು ಹಾಜರಿರುತ್ತಾರೆ. ಸಮಾಜದ ಗಣ್ಯರು ಕೂಡ ಹಾಜರಿರಬಹುದು.

* ಗಲ್ಲಿಗೇರಿಸುವ ಕೆಲ ತಾಸುಗಳ ಮೊದಲು ಅಪರಾಧಿಗೆ ಆತ ಮಾಡಿರುವ ಅಪರಾಧದ ಬಗ್ಗೆ ಮತ್ತೆ ಮತ್ತು ಕಡೆಯ ಇಚ್ಛೆ ಏನೆಂದು ಹೇಳಲಾಗುವುದು

* ಅಪರಾಧಿಯನ್ನು ಗಲ್ಲುಗಂಬದ ಮೇಲೆ ನಿಲ್ಲಿಸಿ ಕೈಗಳನ್ನು ಹಿಂದೆ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಲಾಗುವುದು.

* ಆತನ ಕುತ್ತಿಗೆಗೆ ಕಪ್ಪುಬಟ್ಟೆ ತೊಡಿಸಿ ಕುತ್ತಿಗೆಗೆ ನೇಣುಹಗ್ಗವನ್ನು ಹಾಕಲಾಗುವುದು.

* ನೇಣು ಬೀಳುವ ಕೆಲ ಕ್ಷಣ ಮೊದಲು ಹ್ಯಾಂಗ್‌ಮನ್ ಅಪರಾಧಿಯ ಕಿವಿಯಲ್ಲಿ 'ನಾನು ಆಜ್ಞಾಧಾರಕ ಅಷ್ಟೆ. ದಯವಿಟ್ಟು ನನ್ನ ಕ್ಷಮಿಸು. ನಾನು ಹುಕುಂ ಪಾಲಿಸುವ ಗುಲಾಮನಷ್ಟೆ' ಎಂದು ಉಸುರುತ್ತಾನೆ.

* ಮ್ಯಾಜಿಸ್ಟ್ರೇಟ್ ಆಜ್ಞೆ ನೀಡುತ್ತಿದ್ದಂತೆ ಹ್ಯಾಂಗ್‌ಮನ್ ಕಬ್ಬಿಣದ ಲಿವರ್ ಆಪರೇಟ್ ಮಾಡುತ್ತಾನೆ.

* ಅಪರಾಧಿಯ ಜೀವ ಹೋಗುವವರೆಗೆ ಕುಣಿಕೆಯಲ್ಲಿಯೇ ಇಡಲಾಗುವುದು. ಆತ ನಿಶ್ಚೇಷ್ಟಿತನಾಗುತ್ತಿದ್ದಂತೆ ಕೆಳಗಿಳಿಸಿ, ಪ್ರಾಣ ಹೋಗಿದೆಯೋ ಇಲ್ಲವೋ ಎಂಬ ಕುರಿತು ವೈದ್ಯರಿಂದ ಪರೀಕ್ಷೆ ಮಾಡಲಾಗುವುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A deadly procedure called death sentence. A proper procedure has to be followed before hanging a convict. Deadly convict Ajamal Kasab too was hanged following same procedure at Yerwada jail in Pune on 21st November, 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more