ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ ಪಿಯಲ್ಲಿ 8.8 ಬಿಲಿಯನ್ ಡಾಲರ್ ವಂಚನೆ

By Mahesh
|
Google Oneindia Kannada News

HP takes $8.8 bn hit, alleges accounting fraud in Autonomy
ನ್ಯೂಯಾರ್ಕ್, ನ.20: ಸಾಫ್ಟ್ ವೇರ್ ಹಾಗೂ ಹಾರ್ಡ್ ವೇರ್ ಕ್ಷೇತ್ರದ ಅಗ್ರಗಣ್ಯ ಸಂಸ್ಥೆ ಎಚ್ ಪಿಯಲ್ಲಿ ಸುಮಾರು 8.8 ಬಿಲಿಯನ್ ಡಾಲರ್ ವಂಚನೆಯಾಗಿರುವುದು ಪತ್ತೆಯಾಗಿದೆ. 2011ರಲ್ಲಿ ಬ್ರಿಟಿಷ್ ಮೂಲದ ಸಾಫ್ಟ್ ವೇರ್ ಸಂಸ್ಥೆ autonomy ಖರೀದಿ ಸಂದರ್ಭದಲ್ಲಿ ಅವ್ಯವಹಾರ ನಡೆದಿದೆ ಎಂದು ಎಚ್ ಪಿ ಸಂಸ್ಥೆ ಬುಧವಾರ(ನ್ಅ.21) ಹೇಳಿಕೊಂಡಿದೆ.

ಕಾರ್ಪೋರೇಟ್ ವಲಯದ ಅತಿ ದೊಡ್ಡ ವಂಚನೆ ಇದಾಗಿದ್ದು, ಮಾಜಿ ಉದ್ಯೋಗಿಗಳಿಂದ ಎಚ್ ಪಿ ಸಂಸ್ಥೆಗೆ ಭಾರಿ ನಷ್ಟ ಉಂಟಾಗಿದೆ. ಕಂಪನಿ ಸ್ವಾಯುತ್ತತೆ ನೀಡುವ ಮ್ಯಾನೇಜ್ಮೆಂಟ್ ಸಮಿತಿಯಲ್ಲಿದ್ದ ಸದಸ್ಯರು autonomy ಕಂಪನಿ ಲೆಕ್ಕಾಚಾರ ದಾಖಲೆಗಳನ್ನು ತಪ್ಪಾಗಿ ನೀಡಿದ್ದು ಭಾರಿ ವಂಚನೆಗೆ ದಾರಿ ಮಾಡಿದೆ ಎಂದು ಎಚ್ ಪಿ ಹೇಳಿದೆ.

2012ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಈ ವಂಚನೆ ಬಗ್ಗೆ ಎಚ್ ಪಿ ಸಂಸ್ಥೆಗೆ ಗೊತ್ತಾಗಿದೆ. autonomy ಸಂಸ್ಥೆ ವಿರುದ್ಧ ತನಿಖೆಗೆ ಎಚ್ ಪಿ ಸಂಸ್ಥೆ ಆಗ್ರಹಿಸಿದೆ.

ಸುದ್ದಿ ಹಬ್ಬುತ್ತಿದ್ದಂತೆ ಎಚ್ ಪಿ ಸಂಸ್ಥೆ ಷೇರುಗಳು ಶೇ 12 ರಷ್ಟು ಕುಸಿತ ಕಂಡಿದ್ದು, ಇನ್ನಷ್ಟು ಕುಸಿಯುವ ಭೀತಿ ಎದುರಿಸುತ್ತಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಹೊರಹಾಕಲು ಎಚ್ ಪಿ ವಿಫಲವಾಗಿತ್ತು.

ಅಕ್ಟೋಬರ್ 31ಕ್ಕೆ ಅನ್ವಯವಾಗುವಂತೆ 6.9 ಬಿಲಿಯನ್ ಡಾಲರ್ ನಷ್ಟು ನಿವ್ವಳ ನಷ್ಟ ಅನುಭವಿಸಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 0.2 ಬಿಲಿಯನ್ ಡಾಲರ್ ನಷ್ಟ ಉಂಟಾಗಿತ್ತು.

ಯುಎಸ್ ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಕಮೀಷನ್ ಎನ್ ಫೋರ್ಸ್ ಮೆಂಟ್ ಡಿವಿಷನ್ ಹಾಗೂ ಯುಕೆಯ ಸೀರಿಯಸ್ ಫ್ರಾಡ್ ಆಫೀಸ್ -ಸಿವಿಲ್ ಹಾಗೂ ಕ್ರಿಮಿನಲ್ ವಿಭಾಗಕ್ಕೆ ದೂರು ನೀಡಿರುವುದಾಗಿ ಎಚ್ ಪಿ ಸಂಸ್ಥೆ ಹೇಳಿದೆ. ಅಲ್ಲದೆ, ಆಂತರಿಕ ತನಿಖೆ ಕೂಡಾ ಮುಂದುವರೆದಿದೆ.

ನೆಲಕಚ್ಚಿದ ಎಂಫಾಸಿಸ್ ಷೇರು: ಎಚ್ ಪಿ ಹಿಡಿತದಲ್ಲಿರುವ ಎಂಫಾಸಿಸ್ ಸಂಸ್ಥೆ ಷೇರುಗಳು ಶೇ 2.8ರಷ್ಟು ಕುಸಿತ ಕಂಡಿದೆ. ಬ್ರಿಟಿಷ್ ಮೂಲದ ಸಾಫ್ಟ್ ವೇರ್ ಸಂಸ್ಥೆ ಅಟಾನಮಿ ಸಂಸ್ಥೆ ಮಾಡಿದ ವಂಚನೆ ಪರಿಣಾಮ ಎಂಫಾಸಿಸ್ ಮೇಲೂ ಆಗಿದೆ.

ಬಿಎಸ್ ಇನಲ್ಲಿ 386 ರು ನಂತೆ ಮಂಗಳವಾರ ತನ್ನ ವಹಿವಾಟು ನಿಲ್ಲಿಸಿತ್ತು. ಬುಧವಾರ(ನ.21) ಮಧ್ಯಾಹ್ನದ 3.25ರ ವೇಳೆಗೆ 395 ರು ನಂತೆ ಶೇ 3 ರಷ್ಟು ಇಳಿಕೆ ಕಂಡಿದೆ ಎಂಫಾಸಿಸ್ ಸಂಸ್ಥೆ ಅಪ್ಲಿಕೇಷನ್ ಸರ್ವೀಸಸ್, ಮೂಲಸೌಕರ್ಯ ಸೇವೆ, ಬಿಪಿಒ ಹೊರಗುತ್ತಿಗೆ ಸೇವೆಗಳನ್ನು ಜಾಗತಿಕವಾಗಿ ನೀಡುತ್ತಿದೆ.

(ಪಿಟಿಐ)

English summary
In what could be one of the biggest corporate frauds, HP today said it has taken a $8.8 billion ’charge’ on Autonomy, the British software firm it had bought in 2011, as some former executives of the acquired company had wilfully misrepresented accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X