ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈನಲ್ಲಿ ಗರ್ಭಿಣಿಗೆ ಚಿಕಿತ್ಸೆ ಅಲಭ್ಯ: ಮಗು ಸಾವು

By Srinath
|
Google Oneindia Kannada News

dubai-hospitals-say-no-to-pregnant-woman-baby-died
ಲಂಡನ್, ನ.19: ಗರ್ಭಪಾತಕ್ಕೆ ಅವಕಾಶ ನೀಡದ ಕ್ಯಾಥೊಲಿಕ್ ಸಂಪ್ರದಾಯದ ಐರ್ಲೆಂಡ್ ನಲ್ಲಿ ಬೆಳಗಾವಿಯ ದಂತ ವೈದ್ಯೆ ಸವಿತಾ ಹಾಲಪ್ಪನವರ್ ಮೃತಪಟ್ಟ ಪ್ರಕರಣ ಇನ್ನೂ ಜಿವಂತವಾಗಿರುವಾಗಲೇ ದುಬೈನಲ್ಲಿ ಮಂಗಳೂರು ಮೂಲದ ಗರ್ಭಿಣಿಯೊಬ್ಬರು ಇದೇ ರೀತಿ ಅನಾಹುತಕ್ಕೀಡಾಗಿದ್ದಾರಾದರೂ, ಮಗು ಮಾತ್ರ ಮೃತಪಟ್ಟಿದೆ.

27 ವಾರಗಳ ಗರ್ಭಿಣಿಯೊಬ್ಬರು ಕಳೆದ ವಾರ 6 ಖಾಸಗಿ ಆಸ್ಪತ್ರೆಗಳ ಅಂಗಳದಲ್ಲಿ ಮಲಗಿ, ತನಗೆ ತಕ್ಷಣ ಚಿಕಿತ್ಸೆ ನೀಡಿ ಎಂದು ಅಂಗಾಲಾಚಿದ್ದಾರೆ. ಆದರೆ ಯಾವೊಬ್ಬ ವೈದ್ಯನೂ ಆಕೆಯ ನೋವಿಗೆ ಸ್ಪಂದಿಸಿಲ್ಲ. ಕೊನೆಗೊಂದು ಆಸ್ಪತ್ರೆ ಆಕೆಯ ಚಿಕಿತ್ಸೆಗೆ ಮುಂದಾಯಿತು. ಆದರೆ ನವಜಾತ ಶಿಶು ಜನಿಸಿದ ಕೆಲವೇ ಗಂಟೆಗಳಲ್ಲಿ ಅಸುನೀಗಿತು. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತಿದ್ದರೆ ಮಗು ಉಳಿಯುತ್ತಿತ್ತು ಎಂದು ಕೊನೆಗೂ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಗಮನಾರ್ಹವೆಂದರೆ, ಆ ಆರೂ ಆಸ್ಪತ್ರೆಗಳು ನೀಡಿದ ಕ್ಷುಲ್ಲಕ ಕಾರಣವೆಂದರೆ 'ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ. ಮೊದಲೇ ಬುಕ್ಕಿಂಗ್ ಮಾಡಿಸಬೇಕಿತ್ತು!' ಎಂದು. 'ಬೆಡ್ ಇಲ್ಲದಿದ್ದರೇನಂತೆ ಖಾಲಿ ನಿಂತಿರುವ ಆಂಬುಲೆನ್ಸ್ ವಾಹನವನ್ನಾದರೂ ಕಳುಹಿಸಿಕೊಡಿ' ಎಂದು ಕೇಳಿದರೂದರೆ ಅಷ್ಟೂ ಆಸ್ಪತ್ರೆಗಳು ಅವರ ಮನವಿಯನ್ನು ನಿರ್ಲಕ್ಷ್ಯಿಸಿವೆ.

ಬಾಧಿತ ಗರ್ಭಿಣಿಯ ಹೆಸರು ಪುಷ್ಪಾ ಕೆ ಜಾಯ್. ಶಾರ್ಜಾದಲ್ಲಿ ಶಿಕ್ಷಕಿಯಾಗಿಯಾಗಿರುವ 34 ವರ್ಷದ ಈ ಮಹಿಳೆ ನವೆಂಬರ್ 8 ರಂದು ರಾತ್ರಿ 10 ಗಂಟೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅದಕ್ಕೂ ಮುನ್ನ ಸುಮಾರು 10 ಗಂಟೆಗಳ ಕಾಲ 'ಲೇಬರ್ ಪೈನ್' ಅನುಭವಿಸುತ್ತಾ ದುಬೈನಲ್ಲಿರುವ 6 ಆಸ್ಪತ್ರೆಗಳನ್ನು ಪುಷ್ಪಾ ಎಡತಾಕಿದ್ದರು.

English summary
Dubai Six hospitals say no to pregnant woman Pushpa K Joy, baby died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X