ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಠಾಕ್ರೆ ವಿರುದ್ಧ ಕಾಮೆಂಟ್ ಮಾಡಿದ ಮಹಿಳೆ ಜೈಲಿಗೆ

By Mahesh
|
Google Oneindia Kannada News

ಮುಂಬೈ, ನ.19: ಮರಾಠಿ ನಾಯಕ ಶಿವ ಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಅವರ ನಿಧನದ ಬಗ್ಗೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್ಡೇಡ್ ಮಾಡಿದ ಯುವತಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ.

ಬಾಳಾಠಾಕ್ರೆ ಅಂತಿಮ ಯಾತ್ರೆಯಿಂದ ಬಹುತೇಕ ಮುಂಬೈ ಜನ ಜೀವನ ಸ್ತಬ್ದಗೊಂಡಿರುವ ಬಗ್ಗೆ ಆಕ್ಷೇಪಾರ್ಹವಾಗಿ 21 ವರ್ಷದ ಮಹಿಳೆ ಸ್ಟೇಟಸ್ ಹಾಕಿದ್ದಳು.

Woman held for posting anti-Thackeray comment on FB: Report

ಶನಿವಾರ ನಿಧನರಾದ 86 ವರ್ಷ ವಯಸ್ಸಿನ ಬಾಳಾ ಠಾಕ್ರೆ ಅವರ ಅಂತಿಮ ಯಾತ್ರೆ ಭಾನುವಾರ ಬೆಳಗ್ಗೆ 7.30ಕ್ಕೆ ಆರಂಭಗೊಂಡು ದಾದರ್ ನ ಶಿವಾಜಿ ಪಾರ್ಕ್ ನಲ್ಲಿ ಸಂಜೆ 6.30 ರ ಸುಮಾರಿಗೆ ಅಂತ್ಯಗೊಂಡಿತು.

ಈ ಅಂತಿಮ ಯಾತ್ರೆಯಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಜನ ಭಾಗಿಯಾಗಿದ್ದರು. 1 ಲಕ್ಷ ಆಟೋ, 30 ಸಾವಿರ ಟ್ಯಾಕ್ಸಿಗಳು ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಉಂಟಾಗಿತ್ತು.

ಇದನ್ನು ಖಂಡಿಸಿ 21 ವರ್ಷದ ಯುವತಿ ಫೇಸ್ ಬುಕ್ ನಲ್ಲಿ "Thackeray are born and die daily and one should not observe a bandh for that",ಎಂದು ಸ್ಟೇಟಸ್ ಹಾಕಿದ್ದಳು. ಇದನ್ನು ಆಕೆ ಗೆಳತಿಯೊಬ್ಬಳು ಲೈಕ್ ಮಾಡಿದ್ದಳು. ಈಗ ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.

ಇಬ್ಬರು ಯುವತಿಯರ ಮೇಲೆ ಐಪಿಸಿ ಸೆಕ್ಷನ್ 295(a) ಹಾಗೂ 2000ರ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 649(a) ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಯುವತಿ ನಂತರ ತನ್ನ ತಪ್ಪಿನ ಅರಿವಾಗಿ ಕಾಮೆಂಟ್ ತೆಗೆದು ಹಾಕಿ, ಕ್ಷಮೆ ಕೋರಿದ್ದಾಳೆ. ಆದರೆ, ಇದಕ್ಕೂ ಮುನ್ನ ವಿಷಯ ತಿಳಿದ 2000ಕ್ಕೂ ಅಧಿಕ ಶಿವಸೇನಾ ಕಾರ್ಯಕರ್ತರು ಯುವತಿಯ ಮನೆ ಮೇಲೆ ದಾಳಿ ನಡೆಸಿ ದಾಂಧಲೆ ಎಬ್ಬಿಸಿದ್ದಾರೆ. ಆಕೆ ಸಂಬಂಧಿಕರೊಬ್ಬರ ಕ್ಲಿನಿಕ್ ಮೇಲೂ ದಾಳಿ ನಡೆದಿದೆ.

English summary
A 21-year-old woman was reportedly arrested for questioning complete shutdown in Mumbai for the funeral of Bal Thackeray, the Shiv Sena patriarch who passed away on Saturday at the age of 86. Another girl who 'liked' the comment was also arrested, said the report published in a popular English newspaper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X