ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಗಾ ತೀರದಲ್ಲಿ ಕಾಲ್ತುಳಿತಕ್ಕೆ ಕನಿಷ್ಠ 20 ಜನರು ಬಲಿ

By Prasad
|
Google Oneindia Kannada News

Stampede at Ganga ghat several killed
ಪಟ್ನಾ, ನ. 19 : ಮುಳುಗುವ ಸೂರ್ಯನಿಗೆ ಪೂಜೆ ಸಲ್ಲಿಸುವ 'ಛತ್' ಉತ್ಸವ ನಡೆಯುತ್ತಿದ್ದ ಸಮಯದಲ್ಲಿ ಗಂಗಾ ನದಿ ತೀರದಲ್ಲಿರುವ ಅದಲತ್‌ಗಂಜ್ ಘಾಟ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 20 ಭಕ್ತರು ಅಸುನೀಗಿ, ಹಲವಾರು ಜನರು ಗಾಯಗೊಂಡ ದುರಂತ ಸೋಮವಾರ ಸಂಜೆ ನಡೆದಿದೆ.

ವಿಪರೀತ ಜನಸಂದಣಿ ಇದ್ದದ್ದರಿಂದ ಬಾಂಬೂನಿಂದ ತಯಾರಿಸಿದ ಸೇತುವೆ ಕುಸಿದುಬಿದ್ದಿದೆ. ವಿದ್ಯುತ್ ತಂತಿಗಳು ಕಡಿತಗೊಂಡಿದ್ದರಿಂದ ಗಾಬರಿಗೊಂಡ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದ್ದಾರೆ. ಆಗ ಸಂಭವಿಸಿದ ಕಾಲ್ತುಳಿದಿಂದಾಗಿ ದುರಂತ ಸಂಭವಿಸಿದೆ.

ಸತ್ತವರಲ್ಲಿ ಹೆಂಗಸರು, ಹಿರಿಯರು ಮತ್ತು ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ. ಈ ಘಟನೆಯಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರನ್ನು ಹತ್ತಿರದ ಪಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಆದರೆ, ಇಂದು ರಜಾ ಘೋಷಿಸಲಾಗಿದ್ದರಿಂದ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಕಂಡುಬಂದಿತು.

ಅಸ್ತಂಗತನಾಗುತ್ತಿರುವ ಸೂರ್ಯನನ್ನು ಆರಾಧಿಸುವ 'ಛತ್' ಉತ್ಸವ ಬಿಹಾರದಲ್ಲಿ ಅತ್ಯಂತ ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಒಂದು. ದೀಪಾವಳಿ ಮುಗಿದ ಆರು ದಿನಗಳ ನಂತರ ಸಂಜೆಯ ಸಮಯದಲ್ಲಿ ನದಿತೀರಕ್ಕೆ ಹೋಗಿ ಸೂರ್ಯದೇವನಿಗೆ ಅರ್ಘ್ಯ ನೀಡುತ್ತಾರೆ. ಮರುದಿನ ಬೆಳಗಿನ ಜಾವ ಕೂಡ ಸೂರ್ಯನಿಗೆ ನಮನ ಸಲ್ಲಿಸುತ್ತಾರೆ. ಈ ಉತ್ಸವ ಶನಿವಾರವೇ ಆರಂಭವಾಗಿದೆ.

ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆಂದು ತಿಳಿದಿದ್ದರೂ ಜನರ ಸುರಕ್ಷತೆಗಾಗಿ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿರಲಿಲ್ಲ. ಆಡಳಿತಾಧಿಕಾರಿಗಳು ಕೂಡಲೆ ಸಹಾಯಕ್ಕೆ ಧಾವಿಸಿದ್ದರೆ ಇಷ್ಟೊಂದು ಪ್ರಾಣಹಾನಿ ಆಗುತ್ತಿರಲಿಲ್ಲ. ಪೊಲೀಸರು ಕೂಡ ಕರೆ ಮಾಡಿದರೂ ನೆರವಿನ ಹಸ್ತ ಚಾಚಲಿಲ್ಲ. ಸಾರ್ವಜನಿಕರೇ ಸಹಾಯಕ್ಕೆ ಧಾವಿಸಬೇಕಾಯಿತು ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

English summary
20 devotees killed and more than 50 injured in a stampede on the banks of Ganga river during Chhath festival at Adalatganj ghat in Patna on Monday, 19th November, 2012. Chhath is a hindu festival dedicated to sun god. The Sun will be worshipped after Deepavali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X