• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿರನಿದ್ರೆಗೆ ಜಾರಿದ ಮರಾಠಿ ಹುಲಿ ಬಾಳಾ ಠಾಕ್ರೆ

By Prasad
|

ಮುಂಬೈ, ನ. 17 : ಶಿವಸೇನೆ ಮುಖಂಡ, ಪ್ರಖರ ಹಿಂದೂತ್ವವಾದಿ, ಕಟ್ಟಾ ಮರಾಠಿ ಹೋರಾಟಗಾರ ಬಾಳಾ ಕೇಶವ್ ಠಾಕ್ರೆ (86) ಅವರು ತಮ್ಮ ನಿವಾಸ 'ಮಾತೋಶ್ರೀ'ಯಲ್ಲಿ ಶನಿವಾರ ಮಧ್ಯಾಹ್ನ 3.30ರ ಸಮಯದಲ್ಲಿ ಅಸುನೀಗಿದ್ದಾರೆ. ಈ ಸಂಗತಿಯನ್ನು ಒಂದೂವರೆ ಗಂಟೆಯ ನಂತರ ಠಾಕ್ರೆ ಕುಟುಂಬ ಬಹಿರಂಗಪಡಿಸಿದೆ.

ಕಳೆದ ನಾಲ್ಕು ದಿನಗಳಿಂದ ಅವರು ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದರು. ಎರಡು ದಿನಗಳ ಹಿಂದೆ ಅವರಿಗೆ ಅಳವಡಿಸಲಾಗಿದ್ದ ಕೃತಕ ಶ್ವಾಸದ ಸಾಧನವನ್ನು ತೆಗೆಯಲಾಗಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿದ್ದವು.

ಮರಾಠಿ ಹುಲಿ ಬಾಳಾ ಠಾಕ್ರೆ (23 ಜನವರಿ, 1926 - 17 ನವೆಂಬರ್, 2012) ಅವರು ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾದರು. ಅವರ ಅಂತಿಮ ಸಂಸ್ಕಾರವನ್ನು ಹಿಂದೂ ಧರ್ಮದ ಅನ್ವಯ ಭಾನುವಾರ, ನವೆಂಬರ್ 18ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನೆರವೇರಿಸಲಾಗುತ್ತಿದೆ.

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜಕಾರಣಿಗಳು, ನಿನೆಮಾ ತಾರೆಯರು ಸೇರಿದಂತೆ ಗಣ್ಯರು ಅವರ ನಿವಾಸಕ್ಕೆ ದೌಡಾಯಿಸುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಕೂಡ ಧಾವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ನಿವಾಸದ ಸುತ್ತ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ನಗರದಾದ್ಯಂತ ಯಾವುದೇ ಅವಘಡ ಸಂಭವಿಸದಂತೆ ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದೆ.

ಶಿವಸೇನೆಯ ಮುಖವಾಣಿಯಾಗಿದ್ದ 'ಸಾಮ್ನಾ' ಮರಾಠಿ ಪತ್ರಿಕೆಯ ಸಂಪಾದಕರಾಗಿ ಅವರು ಮುಂಬೈನಲ್ಲಿ ವಾಸಿಸುತ್ತಿದ್ದ ಬಾಂಗ್ಲಾದೇಶಿ ಮತ್ತು ಮರಾಠಿ ಕಲಿಯದ ಉತ್ತರ ಭಾರತೀಯರ ವಿರುದ್ಧ ತಮ್ಮ ಪ್ರಖರ ಸಂಪಾದಕೀಯಗಳ ಮೂಲಕ ಹೋರಾಟವನ್ನೇ ನಡೆಸಿದ್ದರು. ಬರಹಗಾರನಷ್ಟೇ ಅಲ್ಲ ಅವರು ವ್ಯಂಗ್ಯ ಚಿತ್ರಕಾರನಾಗಿಯೂ ಹೆಸರು ಗಳಿಸಿದ್ದರು.

ಮುಂಬೈನಲ್ಲಿ ಬಾಳಾ ಠಾಕ್ರೆ ಗೌರವಾರ್ಥ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುತ್ತಿದ್ದಾರೆ. ತಮ್ಮ ಆರಾಧ್ಯ ದೈವವನ್ನು ಕಳೆದುಕೊಂಡ ಅಭಿಮಾನಿಗಳು ರೊಚ್ಚಿಗೇಳಬಹುದೆಂದು ನಗರದಾದ್ಯಂತ 20 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಕರ್ನಾಟಕದ ಬೆಳಗಾವಿಯಲ್ಲಿಯೂ ಕಟ್ಟೆಚ್ಚರದಿಂದ ಇರುವಂತೆ ಪೊಲೀಸರಿಗೆ ಆದೇಶ ನೀಡಲಾಗಿದೆ.

English summary
Shiv Sena patriarch Bal Thackeray passed away on Saturday, Nov 17. 86-year-old Thackeray died around 3:30 PM, informed his doctors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X