ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕ ಚುನಾವಣೆಗೆ ಕಾಂಗ್ರೆಸ್ ರೆಡಿ; ರಾಹುಲ್‌ ಗೆ ಪಟ್ಟ

By Srinath
|
Google Oneindia Kannada News

ನವದೆಹಲಿ,ನ.16: ರಾಜ್ಯ ವಿಧಾನಸಭೆ ಚುನಾವಣೆಗೆ 170 ದಿನವಷ್ಟೇ ಬಾಕಿಯಿದೆ. ಆದ್ರೂ ಭಿನ್ನಮತ ಬಿಟ್ಟಿಲ್ಲ. ನಿಮ್ಮ ಶತ್ರು ನಾನಲ್ಲ- ಬದಲಿಗೆ BJP ಮತ್ತು JDS ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ವರ್ಷಾನುಗಟ್ಟಲೆಯಿಂದ ಹೊಗೆಯಾಡುತ್ತಿರುವ ಕಾಂಗ್ರೆಸ್ ಭಿನ್ನಮತದ ಮೇಲೆ ಗಾಳಿ ಬೀಸಿರುವಾಗ ಅತ್ತ ...

ಕೇಂದ್ರ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಗಾಗಿ ರಾಹುಲ್‌ ಗಾಂಧಿಯನ್ನು ಪಟ್ಟಕ್ಕೇರಿಸಿ, ಕೈ ತೊಳೆದುಕೊಂಡಿದೆ. ಹರಿಯಾಣದ ಸೂರಜ್‌ಕುಂಡ್‌ನಲ್ಲಿ ಮೊನ್ನೆ ನಡೆದ ಹಿರಿಯ ಮುಖಂಡರ ಚಿಂತನ-ಮಂಥನ ಸಭೆಯಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಆದರೆ ಪ್ರಮುಖ ಚುನಾವಣೆ ವಿಷಯವಾಗಬಹುದಾದ 6/12 ಸಬ್ಸಿಡಿ ಅಡುಗೆ ಅನಿಲ ಸಿಲಿಂಡರುಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಪಕ್ಷ ದಿವ್ಯಮೌನವಹಿಸಿದೆ.

congress-lok-sabha-elections-2014-rahul-gandhi-to-lead

2014ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಚಿಸಲಾಗಿರುವ ಪಕ್ಷದ ಸಮನ್ವಯ ಸಮಿತಿಯ ಅಧ್ಯಕ್ಷರನ್ನಾಗಿ ರಾಹುಲ್‌ ಗಾಂಧಿಯನ್ನು ನೇಮಿಸಲಾಗಿದೆ. ತನ್ಮೂಲಕ, ಕಾಂಗ್ರೆಸ್ಸಿನ ಯುವರಾಜ ರಾಹುಲ್‌ ಗಾಂಧಿಗೆ ಕೊನೆಗೂ ಮಹತ್ವದ ಹುದ್ದೆ ನೀಡಲಾಗಿದೆ.

ಮುಂದಿನ ಲೋಕಸಭಾ ಚುನಾವಣೆಯನ್ನು ರಾಹುಲ್‌ ನೇತೃತ್ವದಲ್ಲಿ ಎದುರಿಸಲು ನಿರ್ಧರಿಸಿರುವ ಕಾಂಗ್ರೆಸ್, ಪಕ್ಷ ಅಧಿಕಾರಕ್ಕೆ ಬಂದರೆ ರಾಹುಲ್‌ ಗಾಂಧಿಯನ್ನು ಪ್ರಧಾನಿ ಪಟ್ಟಕ್ಕೆ ಏರಿಸಲು ವೇದಿಕೆ ಸಿದ್ಧಪಡಿಸಿದೆ. ಚುನಾವಣೆಯ ಸಾರಥ್ಯವನ್ನು ರಾಹುಲ್‌ ಗಾಂಧಿಗೆ ವಹಿಸುವ ಮೂಲಕ ಅವರನ್ನು ಭವಿಷ್ಯದ ಪ್ರಶ್ನಾತೀತ ನಾಯಕ ಎಂದು ಬಿಂಬಿಸುವ ಯತ್ನವೂ ಇದಾಗಿದೆ ಎಂದು ಗಾಂಧಿ ಕುಟುಂಬದ ಆಪ್ತ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಸಮನ್ವಯ ಸಮಿತಿಯ ಆರು ಮಂದಿ: 2014ರ ಲೋಕಸಭಾ ಚುನಾವಣೆ ಸಮನ್ವಯ ಸಮಿತಿಯಲ್ಲಿ ಜನಾರ್ದನ ದ್ವಿವೇದಿ, ದಿಗ್ವಿಜಯ್‌ ಸಿಂಗ್‌, ಜೈರಾಂ ರಮೇಶ್‌, ಕರ್ನಾಟಕದ ಕಾಂಗ್ರೆಸ್‌ ಪ್ರಭಾರಿ ಮಧುಸೂಧನ್‌ ಮಿಸ್ತ್ರಿ ಮತ್ತು ಅಹಮದ್‌ ಪಟೇಲ್‌ ಸ್ಥಾನ ಪಡೆದಿದ್ದಾರೆ.

ಮೈತ್ರಿ ಸಿದ್ಧ'ಹಸ್ತ' ಮೊಯ್ಲಿಗಷ್ಟೇ ಮಣೆ:
ಮೈತ್ರಿ ವಿಚಾರದಲ್ಲಿ ಸಿದ್ಧ'ಹಸ್ತ'ರಾಗಿರುವ ಕರ್ನಾಟಕದ ವೀರಪ್ಪ ಮೊಯ್ಲಿ ಅವರನ್ನು ಚುನಾವಣಾ ಪೂರ್ವ ಮೈತ್ರಿ ಕುರಿತ ಉಪಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಆದರೆ, ಸಚಿವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಎಸ್ಎಂ ಕೃಷ್ಣ, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಆಸ್ಕರ್ ಫರ್ನಾಂಡಿಸ್ ಮತ್ತು ಬಿಕೆ ಹರಿಪ್ರಸಾದ್ ಸೇರಿದಂತೆ ಯಾರಿಗೂ ಚುನಾವಣಾ ಸಮಿತಿಗಳಲ್ಲಿ ಸ್ಥಾನ ಸಿಕ್ಕಿಲ್ಲ.

English summary
Congress gets ready for Lok Sabha elections 2014 - Rahul Gandhi to lead the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X