ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ವೈಗೆ ಸೈಕಲ್ ಬೇಡ್ವಂತೆ 'ಉಳುವ ರೈತ' ಬೇಕಂತೆ

By Srinath
|
Google Oneindia Kannada News

yeddyurappa-wants-ploughing-farmer-as-kjp-symbol
ಬೆಂಗಳೂರು, ನ.16: ಮಾಜಿ ಸಿಎಂ ಯಡಿಯೂರಪ್ಪ ಅವರು ತಮ್ಮ ನೂತನ ಪಕ್ಷ KJPಗೆ ಗಟ್ಟಿನೆಲೆ ಒದಗಿಸಲು ಸರ್ವಪ್ರಯತ್ನ ನಡೆಸಿದ್ದಾರೆ.

ಕರ್ನಾಟಕ ಜನತಾ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಧನಂಜಯ ಕುಮಾರ್‌ ಅವರನ್ನು ದೆಹಲಿಗೆ ಕಳಿಸಿರುವ ಯಡಿಯೂರಪ್ಪ, ಕೇಂದ್ರ ಚುನಾವಣಾ ಕಚೇರಿಗೆ ಭೇಟಿ ನೀಡಿ, ಪಕ್ಷದ ಚಿಹ್ನೆಯ ಸಂಬಂಧ ಮಾತುಕತೆ ನಡೆಸುವಂತೆ ಸೂಚಿಸಿದ್ದಾರೆ.

'ಉಳುವ ರೈತ' ಚಿಹ್ನೆ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಒಲವು ತೋರಿದ್ದಾರೆ. KJPಗೆ ಈಗಿರುವ ಸೈಕಲ್ ಚಿಹ್ನೆ ತಮಗೆ ಬೇಡ. ಅದರ ಬದಲಿಗೆ ಉಳುವ ರೈತನ ಚಿಹ್ನೆ ಪಡೆಯುವ ಬಗ್ಗೆ ಆಯೋಗದ ಜತೆ ಮಾತನಾಡುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜತೆಗೆ ಕೆಜೆಪಿಯ ನೂತನ ಕಾರ್ಯಕಾರಿ ಸಮಿತಿ ರಚನೆಯಾಗಿರುವ ಬಗ್ಗೆಯೂ ಅಧಿಕೃತ ದಾಖಲೆಯನ್ನು ಧನಂಜಯಕುಮಾರ್‌ ಇದೇವೇಳೆ ಆಯೋಗಕ್ಕೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಕೆಜೆಪಿಗೆ ಬನ್ನಿ ಇಲ್ಲವೆ ಕಾಂಗ್ರೆಸ್‌ಗೆ ಹೋಗಿ:
ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಯಡಿಯೂರಪ್ಪ ಅವರು ಬುಧವಾರ ರಾಯಚೂರು ಜಿಲ್ಲೆಯಲ್ಲಿ ತಮ್ಮ ಬೆಂಬಲಿಗ ಶಾಸಕರು ಮತ್ತು ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ಹೊಸ ಪ್ರಾದೇಶಿಕ ಪಕ್ಷ ಕೆಜೆಪಿಗೆ ಬನ್ನಿ, ಇಲ್ಲವೇ ಕಾಂಗ್ರೆಸ್‌ಗೆ ಹೋಗಿ ಎಂದು ಅವರಿಗೆಲ್ಲ ಉಚಿತ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ದಿನಗಳಲ್ಲಿ ಕೆಜೆಪಿ ಹಾಗೂ ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಯಡಿಯೂರಪ್ಪ ಹೇಳಿದ್ದಾಗಿ ಪಕ್ಷದ ಮುಖಂಡರು ತಿಳಿಸಿದ್ದು, ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

English summary
The former chief minister BS Yeddyurappa now wants ploughing farmer as KJP symbol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X