ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರವಿಂದ್ ಕೇಜ್ರಿವಾಲ ಪಕ್ಷಕ್ಕೆ 'ಆಮ್' ಚಿನ್ಹೆ?

By Mahesh
|
Google Oneindia Kannada News

Will Arvind Kejriwal use mango (aam) as his party symbol?
ನವದೆಹಲಿ, ನ.15: ಜನ ಸಾಮಾನ್ಯರ ಆಶಾಕಿರಣವಾಗಿ ಬೆಳೆಯುತ್ತಿರುವ ಅರವಿಂದ್ ಕೇಜ್ರಿವಾಲ ಅವರ ಪಕ್ಷಕ್ಕೆ ಹೊಸ ಚುನಾವಣಾ ಚಿನ್ಹೆ ಹುಡುಕಾಟ ನಡೆದಿದೆ. ಲಭ್ಯ ಮಾಹಿತಿ ಪ್ರಕಾರ 'ಆಮ್ ಆದ್ಮಿ' ಪರ ನಿಂತಿರುವ ಪಕ್ಷ ಆಮ್ (ಮಾವು) ಪಕ್ಷದ ಚಿನ್ಹೆಯಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ನ.26 ರಂದು ಅರವಿಂದ್ ಕೇಜ್ರಿವಾಲ ಅವರು ಹೊಸ ಪಕ್ಷ ಘೋಷಿಸಲಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ಉದ್ಯಮಿ ರಾಬರ್ಟ್ ವದ್ರಾ ಅವರು ಇತ್ತೀಚೆಗೆ ಭಾರತದ ಜನ ಸಾಮಾನ್ಯರ ಹೇಳಿಕೆ ನೀಡುತ್ತಾ 'mango people in a banana republic' ಎಂದಿದ್ದರು.

ಫೇಸ್ ಬುಕ್ ಕಾಮೆಂಟ್ ನಲ್ಲಿ ಕಾಣಿಸಿದ ಈ ಹೇಳಿಕೆ ದೇಶ ದೆಲ್ಲೆಡೆ ಕಿಚ್ಚು ಹಬ್ಬಿಸಿತ್ತು. ಹೀಗಾಗಿ ಮ್ಯಾಂಗೋ(ಆಮ್) ಬಳಸಲು ಅರವಿಂದ್ ಚಿಂತಿಸಿದ್ದಾರೆ ಎನ್ನಲಾಗಿದೆ.

ಭ್ರಷ್ಟಾಚಾರ ವಿರೋಧಿ ಭಾರತ ಸಂಘಟನೆಯ ಕಾರ್ಯಕರ್ತ ಆರವಿಂದ್ ಕೇಜ್ರಿವಾಲ ಅವರು ತಮ್ಮ ಹೊಸ ಪಕ್ಷಕ್ಕೆ ಆಮ್ ಜನತಾ ಪಕ್ಷ ಅಥವಾ ಎಜೆಪಿ ಎಂದು ಹೆಸರಿಡುವ ಸಾಧ್ಯತೆಯಿದೆ.

ಅಣ್ಣಾ ಹಜಾರೆ ಟೀಂ ನಿಂದ ಹೊರಬಿದ್ದ ಮೇಲೆ ಅರವಿಂದ್ ಕೇಜ್ರಿವಾಲ ಅವರು ಸರಣಿ ಸುದ್ದಿಗೋಷ್ಠಿಗಳನ್ನು ನಡೆಸಿ ಭ್ರಷ್ಟಾಚಾರಿಗಳ ಬಣ್ಣ ಬಯಲಿಗೆಳೆದಿದ್ದರು.

ಆದರೆ, ಅಣ್ಣಾ ಬಯಸಿದರೆ ಭ್ರಷ್ಟಾಚಾರ ವಿರುದ್ಧ ಭಾರ(IAC) ಹೆಸರನ್ನು ಬಳಸುವುದಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಅರವಿಂದ್ ಕೇಜ್ರಿವಾಲ್ ಅವರು ರಾಜಕೀಯ ರಂಗ ಪ್ರವೇಶಿಸುವುದಾಗಿ ಘೋಷಿಸಿದ ಮೇಲೆ ಟೀಂ ಅಣ್ಣಾದಿಂದ ಅರವಿಂದ್ ಅವರನ್ನು ಹೊರಗಿಡಲಾಗಿತ್ತು.

ಮಾವು ಸಿಗಬಹುದೇ? : ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಹಣ್ಣುಗಳ ರಾಜ ಮಾವು ಅರವಿಂದ್ ಅವರ ಪಕ್ಷದ ಚಿನ್ಹೆಯಾದರೆ ಅದರಲ್ಲಿ ಆಶ್ಚರ್ಯವೇನಿಲ್ಲ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಪುದುಚೇರಿಯಲ್ಲಿ ಮಾವು ಚಿನ್ಹೆಯನ್ನು ಅಲ್ಲಿನ ಪ್ರಾದೇಶಿಕ ಪಕ್ಷವೊಂದು ಬಳಕೆ ಮಾಡುತ್ತಿದೆ. ಪಟ್ಟಾಲಿ ಮಕ್ಕಳ್ ಕಚ್ಚಿ ಚುನಾವಣಾ ಚಿನ್ಹೆ ಕೂಡಾ ಮಾವು ಆಗಿದೆ. ಹೀಗಾಗಿ ಚುನಾವಣಾ ಆಯೋಗದಿಂದ ಅರವಿಂದ್ ಅವರ ಪಕ್ಷಕ್ಕೆ ಮಾವು ಸಿಗುವ ಕಮ್ಮಿ ಎನ್ನಲಾಗಿದೆ.

ಒಂದು ವೇಳೆ ಮಾವು ಸಿಗದಿದ್ದರೆ, ಗಾಂಧಿ ತತ್ವ ಸಿದ್ಧಾಂತವನ್ನು ಪಾಲಿಸುವ ಅರವಿಂದ್ ಕೇಜ್ರಿವಾಲ ಹಾಗೂ ಬೆಂಬಲಿಗರು ಗಾಂಧಿ ಟೋಪಿ ಯನ್ನು ಚುನಾವಣೆ ಚಿನ್ಹೆಯನ್ನಾಗಿ ಬಳಸುವ ಸಾಧ್ಯತೆ ಹೆಚ್ಚಿದೆ.

English summary
As activist-turned-politician Arvind Kejriwal is all set to form his political party on Nov 26, speculations are rife that he might use Mango (the popular fruit, which is known as Aam in Hindi) as his party symbol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X