ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ಕೊಡುಗೆ: ಪೆಟ್ರೋಲ್ ದರದಲ್ಲಿ ಇಳಿಕೆ

By Mahesh
|
Google Oneindia Kannada News

Petrol price cut by 95 paise: sources
ಬೆಂಗಳೂರು, ನ.15: ಪೆಟ್ರೋಲ್ ಬೆಲೆ ಏರಿಕೆ ಬಿಸಿಗೆ ತುತ್ತಾಗಿದ್ದ ಜನತೆಗೆ ದೀಪಾವಳಿ ನಂತರ ಯುಪಿಎ ಸರ್ಕಾರ ಕೊಂಚ ಸಂತಸ ತಂದಿದೆ. ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರಿಗೆ 95 ಪೈಸೆ (ತೆರಿಗೆ ರಹಿತ) ಇಳಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ನ.11ರ ಮಧ್ಯರಾತ್ರಿಯಿಂದ ಹೊಸ ದರ ಜಾರಿಗೆ ಬರಲಿದೆ. ಹೊಸ ದರ ಪರಿಷ್ಕರಣೆಗೆ ಸರ್ಕಾರಿ ಸ್ವಾಮ್ಯ ಪ್ರಮುಖ ತೈಲ ಕಂಪನಿಗಳು ಸಮ್ಮತಿಸಿದೆ ಎಂದು ತಿಳಿದು ಬಂದಿದೆ.

ಜೂನ್ 3ರಂದು ಪೆಟ್ರೋಲ್ ಬೆಲೆಯನ್ನು ರು.2ನಷ್ಟು ಇಳಿಸಲಾಗಿತ್ತು. ಕೆಲ ದಿನಗಳ ಹಿಂದೆ ರು.4ರಷ್ಟು ಇಳಿಸಲಾಗುವುದು ಎಂದು ಹೇಳಲಾಗಿತ್ತಾದರೂ ಜೂನ್ ನಲ್ಲಿ ಕೇವಲ ರು.2.46 ಪೈಸೆಯಷ್ಟು ಇಳಿಸಲಾಗಿದೆ.

ಪೆಟ್ರೋಲ್ ಪಂಪ್ ಡೀಲರ್ ಗಳ ಕಮೀಷನ್ ಹೆಚ್ಚಳ ಮಾಡಿರುವುದರಿಂದ ಅಕ್ಟೋಬರ್ 27 ರಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 29 ಪೈಸೆ ಹೆಚ್ಚಳ ಮಾಡಿತ್ತು. ಪರಿಷ್ಕೃತ ದರ ಪಟ್ಟಿಯಂತೆ

ದೆಹಲಿಯಲ್ಲಿ ಬೆಲೆ 67.24 ರು, ಮುಂಬೈನಲ್ಲಿ 73.53 ರು, ಚೆನ್ನೈ 70.57 ರು, ಕೋಲ್ಕತ್ತಾ 74.55 ರು, ಹೈದರಾಬಾದ್ 73.73 ರು ಹಾಗೂ ಬೆಂಗಳೂರಿನಲ್ಲಿ 74.22 ರಿಂದ 75 ರು ತನಕ ಇದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತೀವ್ರವಾಗಿ ಕುಸಿದಿರುವುದರಿಂದ ಮತ್ತು ಡಾಲರ್‌ಗೆ ಪ್ರತಿಯಾಗಿ ಇರುವ ರುಪಾಯಿ ಮೌಲ್ಯದ ಆಧಾರದ ಮೇಲೆ ಪೆಟ್ರೋಲ್ ಬೆಲೆಯನ್ನು ನಿಗದಿಪಡಿಸಲಾಗಿದೆ. ಆಯಾ ರಾಜ್ಯದಲ್ಲಿ ಮೌಲ್ಯವರ್ಧಿತ ತೆರಿಗೆ ಮತ್ತು ಪ್ರವೇಶ ತೆರಿಗೆ ವಿಭಿನ್ನವಾಗಿರುವುದರಿಂದ ಪೆಟ್ರೋಲ್ ಬೆಲೆ ಇಳಿಕೆಯಲ್ಲಿಯೂ ಏರಿಳಿತ ಕಂಡುಬರುತ್ತದೆ.

ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಪೆಟ್ರೋಲ್ ಮಾರಾಟ ಮಾಡಿದ ಪರಿಣಾಮ ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಿನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆ ಸುಮಾರು 1,167 ಕೋಟಿ ರು ನಷ್ಟ ಅನುಭವಿಸಿದೆ ಎಂದು ಐಒಸಿ ಚೇರ್ಮನ್ ಬುಟೋಲಾ ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಈ ನಷ್ಟ ಭರಿಸಲು ಬಜೆಟ್ ನಲ್ಲೂ ಯಾವುದೇ ಅನುದಾನ ಘೋಷಣೆಯಾಗಿಲ್ಲ ಎಂದು ಬುಟೋಲಾ ಹೇಳಿದ್ದಾರೆ.

English summary
State-owned oil marketing companies today cut the price of petrol by 95 paise per litre (without tax), effective midnight Nov.11, sources
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X