ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವಜೀವನಕ್ಕಾಗಿ ಜೀವನಭೀಮಾನಗರಕ್ಕೆ ಹೋಗಿ

By Shami
|
Google Oneindia Kannada News

APD celebrating Silver Jubilee
ಬೆಂಗಳೂರು, ನ. 14 : ಬೆಳ್ಳಿ ಮಹೋತ್ಸವಕ್ಕೂ ತೋಟಗಾರಿಕೆಗೂ ಏನು ಸಂಬಂಧ? ಅಂಥದೊಂದು ಸಂಬಂಧವನ್ನು ಕಲ್ಪಿಸಿರುವ ಸಂಸ್ಥೆ ಬೆಂಗಳೂರಿನ ಎಪಿಡಿ. ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸ್ ಅಬಿಲಿಟಿ. ವಿಕಲಚೇತನರ ಜತೆಗೆ ಒಡನಾಟ ಇಟ್ಟುಕೊಂಡ ಖಾಸಗಿ ಇನ್ಸ್ಟಿಟ್ಯೂಷನ್!

ಸಸ್ಯಗಳ ಮಾರಾಟ, ಹಣ್ಣಿನ ಗಿಡಗಳು ಮತ್ತು ಹಲವು ಜಾತಿ ಮರಗಳ ಸಸ್ಯಗಳು, ಅಲಂಕಾರಿಕ ಗಿಡಗಳು ಮತ್ತು ಔಷಧಿ ಗಿಡಗಳ ಮಾರಾಟ ಮತ್ತು ಪ್ರದರ್ಶನವನ್ನು ಎಪಿಡಿ ಇದೇ 16 ರಿಂದ 25ರ ವರೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದೆ. ಆಸಕ್ತರು ಇಲ್ಲಿಗೆ ಭೇಟಿಕೊಟ್ಟು ಸಂಸ್ಥೆಯ ಚಟುವಟಿಕೆಗಳನ್ನು ಖುದ್ದಾಗಿ ನೋಡಬಹುದು.

ಸ್ಥಳ : ಹಾರ್ಟಿಕಲ್ಚರ್ ಟ್ರೈನಿಂಗ್ ಸೆಂಟರ್. 9 ನೇ ಬಿ ಮೇನ್, 10 ನೇ ಕ್ರಾಸ್, ಎಲ್ ಐ ಸಿ ಕಾಲೋನಿ, ಜೀವನ್ ಭೀಮಾನಗರ. ಎಚ್ ಎ ಎಲ್ 3 ಸ್ಟೇಜ್. ಬೆಂಗಳೂರು - 560 075. ದೂರವಾಣಿ : 080- 2528 8672. ಸಮಯ ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆ.

ಎಪಿಡಿ ಬಗ್ಗೆ : ನಾನಾ ಕಾರಣಗಳಿಂದಾಗಿ ಅಂಗ ವೈಕಲ್ಯಕ್ಕೆ ತುತ್ತಾದ ಮಕ್ಕಳು, ಯುವಕರು ಮತ್ತು ಹಿರಿಯರ ಯೋಗಕ್ಷೇಮಕ್ಕಾಗಿ 1959 ರಲ್ಲಿ ಸಂಸ್ಥೆ ಜನ್ಮ ತಾಳಿತು. ವಿಕಲ ಚೇತನರಲ್ಲಿ ಮುಖ್ಯವಾಗಿ ಅಂಗ ಊನತೆ, ಮಿದುಳಿನ ಲಕ್ವ, ಬೆನ್ನುಹುರಿಗೆ ಗಾಯ, ಕುಂಠಿತ ಬೆಳವಣಿಗೆ ಮುಂತಾದ ತೊಂದರೆಗಳಿಂದ ಬಳಲುವವರ ಯೋಗಕ್ಷೇಮ ನೋಡಿಕೊಳ್ಳುತ್ತದೆ.

ಎಪಿಡಿಯ ಕಾರ್ಯ ವ್ಯಾಪ್ತಿ ತುಮಕೂರು, ಕೋಲಾರ, ಕೊಪ್ಪಳ, ಹಾವೇರಿ ಜಿಲ್ಲೆ. ಇದು ದಕ್ಷಿಣ ಭಾರತದಲ್ಲಿ ಕಾರ್ಯೋನ್ಮುಖವಾಗಿರುವ ಹಲವು ಹತ್ತು ಸ್ವಯಂಸೇವಾ ಸಂಘ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿರುವ ಸಂಸ್ಥೆ ಆಗಿದೆ. ಅಷ್ಟೇ ಅಲ್ಲ, ಬೆಂಗಳೂರಿನ ಸುತ್ತಮುತ್ತ ಹೇರಳವಾಗಿರುವ ಬಡವರು, ನಿರ್ಭಾಗ್ಯರು, ನಿರ್ಗತಿಕರೊಂದಿಗೆ ಸಹಾನುಭೂತಿಯ ಒಡನಾಟ ಇಟ್ಟುಕೊಂಡಿದೆ.

ಇಂಥ ಸಂಸ್ಥೆಯಿಂದ ಪ್ರಯೋಜನ ಪಡೆಯಲು ಅನೇಕರು ಸಿದ್ಧರಿದ್ದಾರೆ. ಆದರೆ ಅವರ ವಿಳಾಸ ಗೊತ್ತಿರುವುದಿಲ್ಲ. ಅದಕ್ಕಾಗಿ, ಎಪಿಡಿಯ ವೆಬ್ ವಿಳಾಸ ನಿಮಗಾಗಿ ಇಲ್ಲಿದೆ. http://www.apd-india.org/content/gallery ಈ ಪುಟವನ್ನು ನಿಮ್ಮ ಫೇಸ್ ಬುಕ್ಕಿಗೆ ಲಗತ್ತಿಸಿದರೆ ಯಾರೋ ಒಬ್ಬರಿಗೆ ಅನುಕೂಲವಾಗುವುದು ಖಂಡಿತ.

English summary
The Association of People with Disability ( APD) celebrating its Silver Jubilee with a Garden fair in Jeevanbheema Nagar, Bangalore. Whoa! a disabled person needs what? plants and trees? Yes, people wanting to move away from passive existence to a meaningful life may even understand it better.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X