ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನ ಏನನ್ತಾರೆ? ಓದಿ

By Srinath
|
Google Oneindia Kannada News

what-indian-think-on-6-national-parties-insighto-dotcom
ಬೆಂಗಳೂರು,ನ.14: ಮುಂದಿನ ಲೋಕಸಭಾ ಚುನಾವಣೆಗೆ ಪ್ರಮುಖ ರಾಷ್ಟ್ರೀಯ ಪಕ್ಷಗಳು ಈಗಾಗಲೇ ಸಜ್ಜಾಗುತ್ತಿವೆ. ಇದರಿಂದ 2014ರ ಮಹಾ ಚುನಾವಣೆ ಇನ್ನೇನು ಬಂದೇಬಿಟ್ಟಿದೆ ಅನ್ನುವಂತಿದೆ. Congress, BJP ಅಂತಲ್ಲ. BSPಯಿಂದ ಹಿಡಿದು NCP ವರೆಗೂ ಎಲ್ಲ ಪಕ್ಷಗಳೂ ಚುನಾವಣೆ ಪೂರ್ವ ತಯಾರಿ ನಡೆಸುತ್ತಿವೆ.

ಚುನಾವಣೆ ಮುಗಿದು, ಸರಕಾರವೊಂದು ಅಧಿಕಾರಕ್ಕೆ ಬರುತ್ತಿದ್ದಂತೆ ಈ ಪಕ್ಷಗಳ ಭವಿಷ್ಯವೂ ನಿರ್ಧಾರವಾಗಲಿದೆ. Congress ನೇತೃತ್ವದ UPA ಸರಕಾರ ಅಧಿಕಾರಕ್ಕೆ ಮರಳಲು ಯತ್ನಿಸಿದರೆ BJP ನೇತೃತ್ವದ NDA ಮೈತ್ರಿಕೂಟವು UPA ಸರಕಾರವನ್ನು ಕಿತ್ತೊಗೆದು ಅಧಿಕಾರಕ್ಕೆ ಬರಲು ಶತಪ್ರಯತ್ನ ನಡೆಸಲಿದೆ. ಇನ್ನು BSP, CPI, CPI(M) ಸಹ ರಣಕಹಳೆ ಊದಲಿದೆ.

ಈ ಸಂದರ್ಭದಲ್ಲಿ ಎಲ್ಲ ಪಕ್ಷಗಳೂ ಜನಸಾಮಾನ್ಯ/ಮತದಾರನ ಓಲೈಕೆಗೆ ಮುಂದಾಗಲಿವೆ. ಆದರೆ Insighto.com ನಡೆಸಿರುವ ಸಮೀಕ್ಷೆಯನ್ನು ಪರಾಮರ್ಶಿಸಿದಾಗ ಈ ರಾಜಕೀಯ ಪಕ್ಷಗಳ ನೇತಾರರಿಗೆ ನಿದ್ದೆ ಹೊರಟುಹೋಗುವುದು ಖಚಿತ. ಅದೇ ಮನೆಹಾಳ ಹಗರಣಗಳು/ಭ್ರಷ್ಟಾಚಾರದ ಮಹಾವೃಕ್ಷಗಳು ಈ ಪಕ್ಷಗಳಲ್ಲಿ ಬೇರು ಬಿಟ್ಟಿರುವುದರಿಂದ ಜನ ರೋಸಿ ಹೋಗಿದ್ದಾರೆ.

ಈ ಹಿನ್ನೆಲೆಯಲ್ಲಿ ಚುನಾವಣೆ ಸಮ್ಮುಖದಲ್ಲಿ ಮತದಾರನ ಒಲವು ಗಳಿಸುವುದಕ್ಕೆ ರಾಜಕೀಯ ಪಕ್ಷಗಳು ಈ ಬಾರಿ ತಿಪ್ಪರಲಾಗ ಹಾಕಬೇಕಾದೀತು. Insighto.com ಒಂದು interesting ಸಮೀಕ್ಷೆ ನಡೆಸಿ, ಒಂದೇ ಮಾತಿನಲ್ಲಿ 6 ಪ್ರಮುಖ ರಾಜಕೀಯ ಪಕ್ಷಗಳ ಬಗ್ಗೆ ಅಭಿಪ್ರಾಯ ತಿಳಿಸಿ ಎಂದು ಕೇಳಿತ್ತು. ಆ ಆರೂ Congress, BJP, BSP, NCP, CPI, CPI(M) ಬಗ್ಗೆ ಜನ ಏನನ್ನುತ್ತಾರೆ. ಮುಂದೆ ಓದಿ.

ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವುದು ಕಾಂಗ್ರೆಸ್ಸೇ

ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವುದು ಕಾಂಗ್ರೆಸ್ಸೇ

ದೇಶದ ಜನಸಾಮಾನ್ಯರಿಗೆ ಕಾಂಗ್ರೆಸ್ ಅಂದರೆ ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಎಂದಾಗಿದೆ. ಗಾಂಧಿ ಕುಟುಂಬದ ಕಾಂಗ್ರೆಸ್ ಪಕ್ಷ ತನ್ನ ಜನಖ್ಯಾತಿಯನ್ನು ಕಳೆದುಕೊಂಡು ಅಪಖ್ಯಾತಿ ಸಂಪಾದಿಸಿದೆ. ಸೋನಿಯಾ ಗಾಂಧಿ, 2ಜಿ ಹಗರಣದ ಹೆಸರುಗಳ ಬಗ್ಗೆ ಜನ ಕ್ರೋಧ ವ್ಯಕ್ತಪಡಿಸಿದ್ದಾರೆ.

ಭಾರತೀಯರಿಗೆ ಭಾಜಪ ಅಂದ್ರೆ ಮೋದಿಯ ಜಪ

ಭಾರತೀಯರಿಗೆ ಭಾಜಪ ಅಂದ್ರೆ ಮೋದಿಯ ಜಪ

ಭಾರತೀಯರಿಗೆ ಭಾಜಪ ಅಂದರೆ ಅದು ನರೇಂದ್ರ ಮೋದಿಯ ಜಪವೇ ಆಗಿದೆ. ಆ ಪಕ್ಷದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅತಿ ಹೆಚ್ಚು ಜನಪ್ರಿಯ ನಾಯಕ. ಬಿಜೆಪಿ ಬಗ್ಗೆ ಒಂದೇ ಪದದಲ್ಲಿ ಏನು ಹೇಳುತ್ತೀರಿ ಎಂದು ಕೇಳಿದ್ದಕ್ಕೆ ಜನ ನರೇಂದ್ರ ಮೋದಿ ಎಂದಿದ್ದಾರೆ. ಆದರೂ ಬಿಜೆಪಿಗೂ ಭ್ರಷ್ಟಾಚಾರದ ರಾಡಿ ಮೆತ್ತಿಕೊಂಡಿದೆ. ಆಡ್ವಾಣಿ, ವಾಜಪೇಯಿ ಮತ್ತು ಹಿಂದುತ್ವ ಹೆಸರುಗಳು ಇನ್ನೂ ಜನಮಾನಸದಲ್ಲಿವೆ.

ಬಿಎಸ್ ಪಿ ಬಗ್ಗೆ ಏನನ್ತಾರೆ?

ಬಿಎಸ್ ಪಿ ಬಗ್ಗೆ ಏನನ್ತಾರೆ?

ಬಿಎಸ್ ಪಿ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದ್ದಕ್ಕೆ ಸಾಕಷ್ಟು ಜನ ಬಹುಜನ ಸಮಾಜವಾದಿ ಪಕ್ಷ ಎಂದು ಪೂರ್ಣ ಹೆಸರು ಹೇಳುತ್ತಾ... ಅದೂ ಅಷ್ಟೇ ಆನೆ, ಮಾಯಾವತಿ, ಜಾತಿ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿದೆ ಎನ್ನುತ್ತಾರೆ. ಇದರಿಂದ ಆ ಪಕ್ಷದ ವರ್ಚಸ್ಸಿಗೆ ಧಕ್ಕೆಯೊದಗಿದೆ ಎಂಬುದು ಇವರ ಅಭಿಮತ.

ಎನ್ ಸಿಪಿ ಅಂದ್ರೆ ಭ್ರಷ್ಟಾಚಾರ, ಪವಾರ್, ಹಗರಣ

ಎನ್ ಸಿಪಿ ಅಂದ್ರೆ ಭ್ರಷ್ಟಾಚಾರ, ಪವಾರ್, ಹಗರಣ

ಭಾರತೀಯರಿಗೆ ಎನ್ ಸಿಪಿ ಅಂದರೆ ಭ್ರಷ್ಟಾಚಾರ ಮತ್ತು ಪವಾರ್ ಎಂದಾಗಿದೆ. ಭ್ರಷ್ಟಾಚಾರ, ಪವಾರ್, ಹಗರಣಗಳು ಮತ್ತು ಕಾಂಗ್ರೆಸ್ ಎಂದು ಚುಟುಕಾಗಿ ಉತ್ತರಿಸಿದ್ದಾರೆ ಜಾಣ ಮತದಾರರು. ಇದು ಶರದ್ ಪವಾರ್ ನೇತೃತ್ವದ ಎನ್ ಸಿಪಿ- ಯುಪಿಎ ಮೈತ್ರಿಗೆ ಸಿಕ್ಕ ಪ್ರತಿಕ್ರಿಯೆಯಾಗಿದೆ.

ಸಿಪಿಐ ಅಂದರೆ ಅದು ಅಪ್ರಯೋಜಕ, ವ್ಯರ್ಥವಾದ

ಸಿಪಿಐ ಅಂದರೆ ಅದು ಅಪ್ರಯೋಜಕ, ವ್ಯರ್ಥವಾದ

ಭಾರತೀಯರಿಗೆ ಸಿಪಿಐ ಅಂದರೆ ಅದು ಅಪ್ರಯೋಜಕ, ವ್ಯರ್ಥವಾದ ಆಗಿದೆ. ಮುಷ್ಕರ, ಕಮ್ಯುನಿಸಂ, ಭ್ರಷ್ಟಾಚಾರ ಪದಗಳೂ ಸಿಪಿಐ ಜತೆ ತಳುಕು ಹಾಕಿಕೊಂಡಿದೆ.

ಮಾರ್ಕ್ಸಿಸ್ಟ್ ಸಿಪಿಐ ಅಂದ್ರೆ ನಿರುಪಯುಕ್ತ, ನಿಸ್ಸಾರ

ಮಾರ್ಕ್ಸಿಸ್ಟ್ ಸಿಪಿಐ ಅಂದ್ರೆ ನಿರುಪಯುಕ್ತ, ನಿಸ್ಸಾರ

ಇನ್ನು, ಮಾರ್ಕ್ಸಿಸ್ಟ್ ಸಿಪಿಐ ಅಂದರೆ ಭಾರತೀಯರಿಗೆ ನಿರುಪಯುಕ್ತ, ನಿಸ್ಸಾರ ಎಂದೆನಿಸಿದೆ. 2011ರ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಲ ಮತ್ತು ಕೇರಳದಲ್ಲಿಯೂ ತನ್ನ ನೆಲೆಯನ್ನು ಕಳೆದುಕೊಂಡಿದೆ.

English summary
What Indians think about 6 national parties -Insighto dotcom. Political parties in India have already started their pre-poll campaigns all around the country as Lok Sabha elections-2014 are knocking at the door. A survey conducted by Insighto.com has not sent a message which could impress our political leaders whose images have been tarnished over several scams, corruption cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X