ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಕೆಜೆಪಿಗೆ 60 ಸ್ಥಾನ ದಕ್ಕಿದರೆ ಅದೇ ಹಬ್ಬ

By Srinath
|
Google Oneindia Kannada News

yeddyurappa-kjp-will-bag-60-seats-dhananjay-kumar
ಬೆಂಗಳೂರು, ನ.13: ಬಿಜೆಪಿ ತೊರೆದು ಕೆಜೆಪಿ ಪಕ್ಷ ಸ್ಥಾಪನೆ ಹೊಸ್ತಿಲಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ಅವರು ಅದಾಗಲೇ ಪಕ್ಷದ ಪದಾಧಿಕಾರಿಗಳನ್ನು ನೇಮಿಸಿದ್ದಾರೆ. ಮಂಗಳೂರಿನಿಂದ ನಾಲ್ಕು ಬಾರಿ ಸಂಸತ್ತಿಗೆ ಆಯ್ಕೆಗೊಂಡಿರುವ ವಿ ಧನಂಜಯ ಕುಮಾರ್ ಅವರು ಕೆಜೆಪಿ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು Deccan Chronicleಗೆ ಸಂದರ್ಶನ ನೀಡಿದ್ದು, ಅದರ ಸಂಕ್ಷಿಪ್ತ ರೂಪ ಇಲ್ಲಿದೆ:

ಮುಂದಿನ ವಿಧಾಸನಭೆ ಚುನಾವಣೆಗೆ ಸ್ವತಃ ನಾನು ನಿಲ್ಲುವುದಿಲ್ಲ. ಬದಲಿಗೆ, ಕೆಜೆಪಿ ಔಪಚಾರಿಕವಾಗಿ ಚಾಲ್ತಿಗೆ (ಡಿ. 9 ?) ಬರುತ್ತಿದ್ದಂತೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಯಡಿಯೂರಪ್ಪನವರಿಗೆ ವಹಿಸಿ, ಪಕ್ಷ ಗಟ್ಟಿಯಾಗಿ ತಳವೂರಲು ಬೇರುಮಟ್ಟದಿಂದ ಶ್ರಮಿಸುವೆ.

ಪ್ರಸನ್ನ ಕುಮಾರ್ ಅವರು 2011ರಲ್ಲೇ ಚುನಾವಣೆ ಆಯೋಗದಲ್ಲಿ ಪಕ್ಷವನ್ನು ನೋಂದಾಯಿಸಿಕೊಂಡಿದ್ದಾರೆ. ಅವರು ದಿ. ಹೊಟ್ಟೆಪಕ್ಷ ರಂಗಸ್ವಾಮಿ ಅವರ ಸೋದರ ಸಂಬಂಧಿ. KJPಯಲ್ಲಿರುವ 'ಜನತಾ' ಪದ ಯಡಿಯೂರಪ್ಪನವರಿಗೆ ಆಪ್ಯಾಯಮಾನವೆನಿಸಿ, KJPಯನ್ನು ಆಯ್ಕೆ ಮಾಡಿಕೊಂಡರು.

ಸಿದ್ಧಾಂತ ತಳಹದಿಯ BJP ವಿಫಲವಾಗಿರುವಾಗ ವ್ಯಕ್ತಿ ಕೇಂದ್ರಿತ KJPಗೆ ಜನ ಮತ ಹಾಕುವುದು ಖಚಿತ. BJPಯಲ್ಲಿಂದು ಸಿದ್ಧಾಂತಗಳು ಉಳಿದಿಲ್ಲ. ಗುಜರಾತನ್ನೇ ತೆಗೆದುಕೊಳ್ಳಿ. ಮೋದಿ ಇಲ್ಲದ ಸಿದ್ಧಾಂತ ಶೂನ್ಯಕ್ಕೆ ಸಮಾನ. ಆದ್ದರಿಂದ ಪ್ರಾದೇಶಿಕ ಮಟ್ಟದಲ್ಲಿ ವ್ಯಕ್ತಿ ಆಧರಿತ ಪಕ್ಷಕ್ಕೆ ಮನ್ನಣೆ ಸಿಗುತ್ತದೆ ಎಂಬ ಬಲವಾದ ನಂಬಿಕೆಯಿದೆ.

ರಾಜ್ಯ ಬಿಜೆಪಿ ಸರಕಾರದ ಚುಕ್ಕಾಣಿ ಹಿಡಿದಿರುವ ಆರ್ ಎಸ್ಎಸ್ ನ ಸಂತೋಷ್, ಕೆಎಸ್ ಈಶ್ವರಪ್ಪ ಮತ್ತು ಅನಂತ ಕುಮಾರ್ ಅವರನ್ನು BJPಯಿಂದ ಉಚ್ಛಾಟಿಸಿದ್ದರೆ ಬಹುಶಃ ಯಡಿಯೂರಪ್ಪನವರು BJPಯಲ್ಲೆ ಉಳಿಯುತ್ತಿದ್ದರೇನೋ!

ಫೆಬ್ರವರಿಗೆ ಮುಂಚೆ ಚುನಾವಣೆ ನಡೆಯುವ ಸಾಧ್ಯತೆಗಳು ಇಲ್ಲ. ಆ ನಂತರ ನಡೆಯುವ ಚುನಾವಣೆಯಲ್ಲಿ KJP 60 ಸ್ಥಾನ ಗಳಿಸಿದರೆ ಅದೇ ನಮಗೆ ಹಬ್ಬ. KJPಯೇ ಕಿಂಗ್ ಮೇಕರ್.

English summary
BS Yeddyurappa KJP will bag 60 seats in next assembly polls- Dhananjay Kumar. Kumar, who vows not to contest the assembly poll, wants to build KJP from the grassroots, after passing the baton to B.S. Yeddyurappa. He claims his party will get at least 60 seats in the polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X