ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಡೂಡಲ್ ಸ್ಪರ್ಧೆಯಲ್ಲಿ ಗೆದ್ದ ಕೆವಿ ಬಾಲಕ

By Mahesh
|
Google Oneindia Kannada News

ಬೆಂಗಳೂರು, ನ.13: ತೀವ್ರ ಹಣಾಹಣಿಯಿಂದ ಕೂಡಿದ್ದ ಗೂಗಲ್ ಡೂಡ್ಲ್ ಸ್ಪರ್ಧೆಯಲ್ಲಿ ಚಂದೀಗಢ ಶಾಲೆಯ ವಿದ್ಯಾರ್ಥಿ ಅರುಣ್ ಕುಮಾರ್ ಜಯಭೇರಿ ಬಾರಿಸಿದ್ದಾರೆ ಎಂದು ಗೂಗಲ್ ಪ್ರಕಟಿಸಿದೆ.

ಚಂದೀಗಢದ ಕೇಂದ್ರಿಯ ವಿದ್ಯಾಲಯದ 9ನೇ ತರಗತಿಯ ವಿದ್ಯಾರ್ಥಿ ಅರುಣ್ ಕುಮಾರ್ ಅವರು ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

ಆನ್ ಲೈನ್ ವೋಟಿಂಗ್ 10 ನವೆಂಬರ್ ರಂದು ಕೊನೆಗೊಂಡಿತ್ತು. ನ.11 ರಂದು ಮತ ಎಣಿಕೆ ನಡೆಸಲಾಗಿತ್ತು. ಅಂತಿಮ ವಿಜೇತ ಅರುಣ್ ರನ್ನು ನ.12 ರಂದು ಡೂಡ್ಲ್4 ಗೂಗಲ್ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ.

ಭಾರತದ 'ವಿವಿಧತೆಯಲ್ಲಿ ಐಕ್ಯತೆ' ಯನ್ನು ರೇಖೆಗಳ ಮೂಲಕ ಸುಂದರವಾಗಿ ಚಿತ್ರಿಸಿದ ವಿದ್ಯಾರ್ಥಿಗಳು ಅಂತಿಮವಾಗಿ ಗೆಲುವು ಸಾಧಿಸುತ್ತಾರೆ. ಬೆಂಗಳೂರಿನ ಮಿತ್ರ ಅಕಾಡೆಮಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಶ್ರಾವ್ಯ ಮಂಜುನಾಥ್ ಫೈನಲ್ ಹಂತ ತಲುಪಿದ್ದರು..

Chandigarh KV student wins 'Doodle4Google' contest

ಈ ಬಾರಿ ಸುಮಾರು 200,000 ಅರ್ಜಿಗಳು ಬಂದಿತ್ತು. 13 ಜನ ಫೈನಲ್ ಹಂತ ತಲುಪಿದ್ದಾರೆ. ಫೈನಲ್ ಹಂತ ತಲುಪಿರುವ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. ಗೂಗಲ್ ಸಂಸ್ಥೆ ಡೂಡ್ಲರ್ ಡೆನ್ನಿಸ್ ಹ್ವಾಂಗ್, ನಟ ಬೋಮನ್ ಇರಾನಿ ಹಾಗೂ ಕಾರ್ಟೂನಿಸ್ಟ್‌ ಅಜಿತ್ ನಿನಾನ್ ಅವರು ಅಂತಿಮ ವಿಜೇತರನ್ನು ಆಯ್ಕೆ ಮಾಡಿದ್ದಾರೆ. [ಅಂತಿಮ ಹಂತದಲ್ಲಿ ಸ್ಥಾನ ಪಡೆದಿದ್ದ ಎಲ್ಲಾ 13 ಚಿತ್ರಗಳನ್ನು ಇಲ್ಲಿ ನೋಡಿ]

ಆಯ್ಕೆಯಾದ ಡೂಡ್ಲ್ ನವೆಂಬರ್ 14 ರ ಮಕ್ಕಳ ದಿನಾಚರಣೆ ದಿನದಂದು ಗೂಗಲ್ ಇಂಡಿಯಾ ಪೇಜ್ ನಲ್ಲಿ ಕಾಣಿಸಿಕೊಳ್ಳಲಿದೆ. ಫೈನಲ್ ಹಂತ ತಲುಪಿದ ವಿದ್ಯಾರ್ಥಿಗಳಿಗೆ ಗೂಗಲ್ ಕಿಟ್ ಹಾಗೂ ಸನ್ಮಾನ ಪತ್ರ ದೊರೆತಿದೆ.

ಕಳೆದ ವರ್ಷ 155,000 ಅರ್ಜಿಗಳು ಬಂದಿತ್ತು. ನೋಯ್ಡಾದ ವಿದ್ಯಾರ್ಥಿನಿ ವರ್ಷಾ ಗುಪ್ತಾ ರಚಿಸಿದ ಸಂಗೀತ ಸಾಧನಗಳಿದ್ದ ಗೂಗಲ್ ಡೂಡ್ಲ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿತ್ತು.

English summary
Arun Kumar Yadav, a ninth standard student of Kendriya Vidyalaya, Chandigarh, has won the contest to design a 'Doodle4Google' for the Children's Day this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X