ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಂಗ್ ಫಿಷರ್ ಗೆ ನಷ್ಟ ಸ್ಪೈಸ್ ಜೆಟ್ ಗೆ ಲಾಭ

By Mahesh
|
Google Oneindia Kannada News

SpiceJet reduces losses; gains from problems at KF Airline
ಚೆನ್ನೈ, ನ.13: ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಗೆ ಉಂಟಾಗಿರುವ ನಷ್ಟದ ನೇರ ಲಾಭ ಪ್ರತಿಸ್ಪರ್ಧಿ ಸ್ಪೈಸ್ ಜೆಟ್ ಪಡೆದಿದೆ. ಆದರೂ ನಷ್ಟದಲ್ಲಿರುವ ಸ್ಪೈಸ್ ಜೆಟ್ ಸಂಸ್ಥೆ ಎರಡನೇ ತ್ರೈಮಾಸಿಕದಲ್ಲಿ ತನ್ನ ನಷ್ಟದ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಿಕೊಂಡಿದೆ.

ಕಲಾನಿಧಿ ಮಾರನ್ ಒಡೆತನದ ಸ್ಪೈಸ್ ಜೆಟ್ ಸಂಸ್ಥೆ ಎರಡನೇ ತ್ರೈಮಾಸಿಕದಲ್ಲಿ ನಷ್ಟ ಕಡಿಮೆ ಮಾಡಿಕೊಂಡಿರುವ ಜೊತೆಗೆ ಪ್ರಯಾಣಿಕರ ದಟ್ಟಣೆಯನ್ನು ಹೆಚ್ಚಿಸಿಕೊಂಡಿದೆ.

ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಪ್ರಸಕ್ತ ತ್ರೈಮಾಸಿಕದಲ್ಲಿ 163.52 ಕೋಟಿ ರು ಮಾತ್ರ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 240.07 ಕೋಟಿ ರು ನಷ್ಟ ಅನುಭವಿಸಿತ್ತು.

ಸ್ಪೈಸ್ ಜೆಟ್ ಮಾರಾಟ ಶೇ 57 ರಷ್ಟು ಏರಿಕೆ ಕಂಡಿದ್ದು, 1,207 ಕೋಟಿ ರು ನಷ್ಟು ವಹಿವಾಟು ನಡೆಸಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ 766 ಕೋಟಿ ರು ನಷ್ಟು ಮಾರಾಟ ಕಂಡಿತ್ತು.

ಸ್ಪೈಸ್ ಜೆಟ್ ಸಂಸ್ಥೆ ನಷ್ಟಕ್ಕೆ ಹೋಲಿಸಿದರೆ ಕಿಂಗ್ ಫಿಷರ್ ಏರ್ ಲೈನ್ಸ್ ನಷ್ಟ ಇನ್ನಷ್ಟು ಹೆಚ್ಚಿದೆ. ಎರಡನೇ ತ್ರೈಮಾಸಿಕದಲ್ಲಿ 753.55 ನಷ್ಟ ಅನುಭವಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ 468.66 ಕೋಟಿ ರು ನಷ್ಟು ನಷ್ಟ ಅನುಭವಿಸಿತ್ತು.

ಲಾಭ ನಷ್ಟದ ನಡುವೆಯೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಎರಡೂ ಸಂಸ್ಥೆಯ ಷೇರುಗಳು ಸುಸ್ಥಿತಿ ಕಾಯ್ದುಕೊಂಡಿದೆ. ಸೋಮವಾರ ಮಾರುಕಟ್ಟೆ ಅಂತ್ಯಕ್ಕೆ ಸ್ಪೈಸ್ ಜೆಟ್ ಷೇರು ಗಳು 36.35 ರು ನಂತೆ ಶೇ 2.68 ರಷ್ಟು ಏರಿಕೆ ಕಂಡಿತ್ತು. ಕಳೆದ 30 ದಿನಗಳಿಂದ ಎನ್ ಎಸ್ ಇನಲ್ಲಿ ಯಾವುದೇ ಟ್ರೇಡಿಂಗ್ ನಡೆಸಿಲ್ಲ.

ಇದೇ ವೇಳೆ ಕಿಂಗ್ ಫಿಷರ್ ಏರ್ ಲೈನ್ಸ್ ಷೇರುಗಳು ಬಿಎಸ್ ಇನಲ್ಲಿ ಶೇ 4.66 ರಷ್ಟು ಏರಿಕೆ ಕಂಡು 14.16 ರು ನಂತೆ ಪ್ರಗತಿ ಕಂಡಿತ್ತು.

English summary
Kalanithi Maran owned SpiceJet, has managed to lower its losses for Q2 2013, thanks in a large measure to problems at Kingfisher Airlines, which has helped improve rates as well as the load factor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X