ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಸ್ ಕಪ್ಪು ಹಣ ಪಟ್ಟಿಯಲ್ಲಿ ಕ್ರಿಕೆಟರ್, ಪುಢಾರಿಗಳು

By Mahesh
|
Google Oneindia Kannada News

'Politicians, cricketers on black money list'
ಬೆಂಗಳೂರು, ನ.11: ಸ್ವಿಸ್ ಬ್ಯಾಂಕಿನ ಮಾಜಿ ಉದ್ಯೋಗಿಯೊಬ್ಬರು ಹೊರಹಾಕಿರುವ ಸತ್ಯ ಎಲ್ಲರ ಕುತೂಹಲ ಕೆರಳಿಸಿದೆ. ಸ್ವಿಸ್ ಬ್ಯಾಂಕಿನಲ್ಲಿ ಕಪ್ಪು ಹಣ ತೊಡಗಿಸಿರುವವರಲ್ಲಿ ಭಾರತದ ರಾಜಕಾರಣಿಗಳು, ಕ್ರಿಕೆಟರ್ ಗಳು ಇದ್ದಾರೆ. ಇಷ್ಟರಲ್ಲೇ ಹೆಸರುಗಳು ಹೊರಬೀಳಲಿದೆ ಎಂದು ಮಾಜಿ ಉದ್ಯೋಗಿ ರುಡಾಲ್ಫ್ ಎಲ್ಮಾರ್ ಹೇಳಿದ್ದಾರೆ.

ಸ್ವಿಸ್ ಬ್ಯಾಂಕಿನಲ್ಲಿ ಭಾರತದ ಪ್ರಮುಖ ವ್ಯಕ್ತಿಗಳು ಹೊಂದಿರುವ ಖಾತೆ ವಿವರಗಳನ್ನು ಎಲ್ಮಾರ್ ಈಗಾಗಲೇ ವಿಕಿಲೀಕ್ಸ್ ಗೆ ರವಾನಿಸಿದ್ದಾರೆ.

ಆದರೆ, ಕಪ್ಪು ಹಣದ ಬಗ್ಗೆ ಮಾಹಿತಿ ಕೋರಿ ಭಾರತ ಸರ್ಕಾರದಿಂದ ಯಾವುದೇ ಕೋರಿಕೆ ಬಂದಿಲ್ಲ ಹಾಗೂ ತಾನು ಯಾವುದೇ ಮಾಹಿತಿಯನ್ನು ಯುಪಿಎ ಸರ್ಕಾರಕ್ಕೆ ನೀಡಿಲ್ಲ ಎಂದು ಎಲ್ಮಾರ್ ಹೇಳಿದ್ದಾರೆ.

ಪ್ರಮುಖ ಸುದ್ದಿವಾಹಿನಿ ಸಿಎನ್ ಎನ್ ಐಬಿಎನ್ ರೊಂದಿಗೆ ಸ್ಕೈಪ್ ಮೂಲಕ ಮಾತನಾಡಿದ ಎಲ್ಮಾರ್ ಈ ವಿಷಯ ಹೊರ ಹಾಕಿದ್ದಾರೆ.

ಯಾರಿತ ರುಡಾಲ್ಫ್ ಎಲ್ಮಾರ್ : ಜ್ಯೂರಿಚ್ ನಲ್ಲಿರುವ ಜ್ಯೂಲಿಯಸ್ ಬಾರ್ ಎಂಬ ಖಾಸಗಿ ಸ್ವಿಸ್ ಬ್ಯಾಂಕ್ ನಲ್ಲಿ ಸುಮಾರು ಎರಡು ದಶಕಗಳ ಕಾಲ ಉದ್ಯೋಗಿಯಾಗಿದ್ದರು.

2008ರಲ್ಲಿ ವಿಕಿಲೀಕ್ಸ್ ಗೆ ಬ್ಯಾಂಕಿನ ರಹಸ್ಯ ದಾಖಲೆಗಳನ್ನು ಒದಗಿಸಿ ಬೆಳಕಿಗೆ ಬಂದರು. ಒಬ್ಬ ಬ್ಯಾಂಕರ್ ಆಗಿ ನಾನು ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ತೆರಿಗೆ ವಂಚಕರ ವಿರುದ್ಧ ದಾಖಲೆ ಸಂಗ್ರಹಿಸಿ ಅದನ್ನು ಜುಲಿಯನ್ ಅಸ್ಸಾಂಜೆಗೆ ಕೈಗಿತ್ತಿದ್ದೇನೆ ಇದರಲ್ಲಿ ತಪ್ಪೇನಿಲ್ಲ. ಇಲ್ಲಿರುವ ವ್ಯವಸ್ಥೆಯಿಂದ ಇಡೀ ಸಮಾಜ ಹಾಳಾಗುವುದನ್ನು ತಡೆಗಟ್ಟು ಈ ಕ್ರಮ ಕೈಗೊಂಡೆ ಎಂದು 17 ಜನವರಿ, 2011 ರಂದು ಬಹಿರಂಗವಾಗಿ ಎಲ್ಮಾರ್ ಹೇಳಿಕೆ ನೀಡಿದ್ದರು.

ಮಾಹಿತಿ ಹೊರ ಹಾಕಿದ್ದಕ್ಕಾಗಿ 7,200 ಸ್ವಿಸ್ ಫ್ರಾಂಕ್ ದಂಡ ಹಾಗೂ 240 ದಿನ ಜೈಲುವಾಸ ಕಂಡಿದ್ದ ಎಲ್ಮಾರ್ 25 ಜುಲೈ 2011ರಂದು ಬಿಡುಗಡೆ ಹೊಂದಿದ್ದರು. ಒಂದು ಅಂದಾಜಿನ ಪ್ರಕಾರ 2011ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿರುವ ಒಟ್ಟಾರೆ ಭಾರತದ ಹಣ 11,673 ಕೋಟಿ ರು ಇತ್ತು ಎನ್ನಲಾಗಿದೆ.

ಎಚ್ ಎಸ್ ಬಿಸಿಗೆ ಯುಪಿಎ ಶ್ರೀರಕ್ಷೆ: ಸುಮಾರು 6 ಸಾವಿರ ಕೋಟಿ ರು ಕಪ್ಪು ಹಣದ ಬಗ್ಗೆ ಮಾಹಿತಿ ಹೊರ ಹಾಕಿದ ಭ್ರಷ್ಟಾಚಾರ ವಿರೋಧಿ ಭಾರತ(IAC) ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ಯುಪಿಎ ವಿರುದ್ಧ ಕಿಡಿ ಕಾರಿದ್ದಾರೆ.

ಸರ್ಕಾರ ಎಚ್ ಎಸ್ ಬಿಸಿ ಬ್ಯಾಂಕ್ ಅನ್ನು ರಕ್ಷಿಸುತ್ತಿರುವುದೇಕೆ? ಎಚ್ಎಸ್ ಬಿಸಿ ಬ್ಯಾಂಕ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ. ಆದರೆ, ತೆರಿಗೆ ವಂಚಕರ ಪಟ್ಟಿ ಹೊರ ಹಾಕಲು ಹೆದರುತ್ತದೆ. ವಿದೇಶಿ ಬ್ಯಾಂಕ್ ಗಳಲ್ಲಿರುವ ಖಾತೆ ವಿವರಗಳು ಕೈಗೆ ಸಿಕ್ಕರೂ ಸುಮ್ಮನೆ ಕುಳಿತಿದೆ.

ಎಚ್ ಎಸ್ ಬಿಐ ವಿರುದ್ಧ ಜಾಗತಿಕವಾಗಿ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಯುಪಿಎ ಗಮನಿಸುವುದು ಒಳ್ಳೆಯದು. ಕಪ್ಪು ಹಣದ ಬಗ್ಗೆ ಯುಎಸ್ ತೆಗೆದುಕೊಂಡ ಕ್ರಮಗಳನ್ನು ಅವಲೋಕಿಸಲಿ ಎಂರು ಕೇಜ್ರಿವಾಲ ಹೇಳಿದ್ದಾರೆ.

ಸ್ವಿಸ್ ಬ್ಯಾಂಕ್ ಖಾತೆದಾರರ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರೆದಿದೆ. ಸದ್ಯಕ್ಕೆ ಫ್ರೆಂಚ್ ಸರ್ಕಾರದಿಂದ ಸಿಕ್ಕಿರುವ ಮಾಹಿತಿ ಆಧರಿಸಿ ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಂಡಿದೆ ಎಂದು ಯುಪಿಎ ಸರ್ಕಾರ ಹೇಳಿಕೆ ನೀಡಿದೆ.

ರಿಲಯನ್ಸ್ ಸಮೂಹದ ಮುಖೇಶ್ ಅಂಬಾನಿ, ಅನಿಲ್ ಅಂಬಾನಿ, ಜೆಟ್ ಏರ್ ವೇಸ್ ನ ಚೇರ್ಮನ್ ನರೇಶ್ ಗೋಯಲ್, ಕಾಂಗ್ರೆಸ್ ಸಂಸದ ಅನ್ನು ಥಂಡನ್ ಅವರು ಸ್ವಿಸ್ ಬ್ಯಾಂಕಿನಲ್ಲಿ ಕಪ್ಪು ಹಣ ಹೊಂದಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಫ್ರೆಂಚ್ ಸರ್ಕಾರದಿಂದ ಸುಮಾರು 700ಕ್ಕೂ ಅಧಿಕ ಖಾತೆ ವಿವರಗಳು ಯುಪಿಎ ಸರ್ಕಾರಕ್ಕೆ ಸಿಕ್ಕಿದೆ. ಈ ಪಟ್ಟಿಯೊಂದಿಗೆ ಐಎಸಿ ನೀಡಿದ ಉದ್ಯಮಿಗಳ ಹೆಸರುಳ್ಳ ಪಟ್ಟಿಯನ್ನು ಹೋಲಿಸಿ ಸರ್ಕಾರ ಒಂದು ಹೇಳಿಕೆ ನೀಡಲಿ ಎಂದು ಕೇಜ್ರಿವಾಲ ಹೇಳಿದ್ದಾರೆ.

English summary
A former Swiss bank employee Rudolf Elmer has claimed that several politicians, cricketers and internationally well-known people have black money in the Swiss banks. He was speaking to CNN-IBN via Skype.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X