• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭ್ರಷ್ಟಾಚಾರ: ಅರವಿಂದ್ ಕೇಜ್ರಿವಾಲಾ ಸುದ್ದಿಗೋಷ್ಠಿ ವಿವರ

By Srinath
|

ನವದೆಹಲಿ, ನ.9: ಭ್ರಷ್ಟಾಚಾರದ ವಿರುದ್ಧ ಸಮರವ ಸಾರಿರುವ ಇಂಡಿಯಾ ಅಗನೆಸ್ಟ್ ಕರಪ್ಷನ್ ಸಂಘಟನೆಯ ಅರವಿಂದ್ ಕೇಜ್ರಿವಾಲಾ ಅವರು ಇಂದು ಮತ್ತೊಂದು ಸುತ್ತಿನ ಭ್ರಷ್ಟಾಚಾರ ಕಡತಗಳನ್ನು ಹೊರಹಾಕಿದ್ದಾರೆ.

ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆಯುತ್ತಿರುವ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು ಹೀಗಿವೆ:

ಅರವಿಂದ್ ಕೇಜ್ರಿವಾಲಾ ಅವರ ಆರು ಬೇಡಿಕೆಗಳು:

1. HSBC ಉನ್ನತಾಧಿಕಾರಿಗಳನ್ನು ಬಂಧಿಸಿ.

2. HSBC ಬ್ಯಾಂಕಿನ ಭಾರತೀಯ ವ್ಯವಹಾರಗಳನ್ನು ಸ್ಥಗಿತಗೊಳಿಸಬೇಕು

3. 700 ಸ್ವಿಸ್ ಬ್ಯಾಂಕ್ ಖಾತೆಗಳ ವಿವರವನ್ನು ಭಾರತ ತಕ್ಷಣ ಪಡೆಯಬೇಕು.

4. ಸ್ವಿಸ್ ಬ್ಯಾಂಕ್ ಖಾತಾದಾರರು ತಮ್ಮ ಆದಾಯದ ಮೂಲಗಳನ್ನು ಘೋಷಿಸಬೇಕು.

5. 700 ಸ್ವಿಸ್ ಬ್ಯಾಂಕ್ ಖಾತಾದಾರರ ಮೇಲೆ ತನಿಖೆ ನಡೆಯಬೇಕು.

6. ಮೇಲ್ನೋಟಕ್ಕೆ ಯಾರೆಲ್ಲ ತಪ್ಪಿತಸ್ಥರೆಂದು ಕಂಡುಬಂದಿದ್ದಾರೋ ಅವರನ್ನೆಲ್ಲ ಬಂಧಿಸಿ.

* ಮುಕೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಸ್ವಿಸ್ ಬ್ಯಾಂಕಿನಲ್ಲಿ ತಲಾ 100 ಕೋಟಿ ರೂ ಇಟ್ಟಿದ್ದಾರೆ.

* HSBC ಬ್ಯಾಂಕಿನ ಜಿನಿವಾ ಶಾಖೆಯ ಉನ್ನತಾಧಿಕಾರಿಯ ಹೆಸರು ಮೊಬೈಲ್ ಸಂಖ್ಯೆ ಬಿಡುಗಡೆ. ಈತನ ಬಳಿ ಕಪ್ಪು ಹಣ ಅಪಾರ ಪ್ರಮಾಣದಲ್ಲಿದೆ. HSBC ಬ್ಯಾಂಕಿನ ಜಾತಕವನ್ನು ತೆರೆದಿಡುತ್ತಿರುವ ಅರವಿಂದ್.

* ಸ್ವಿಸ್ ಬ್ಯಾಂಕ್ ಖಾತೆಗಳನ್ನು ಹೊಂದಿರುವ 700 ಮಂದಿಯ ವಿವರ ಸರಕಾರದ ಬಳಿಯಿದೆ. ಆದರೆ ಇದುವರೆಗೂ ಕೇವಲ 170 ಮಂದಿಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ, ಕೈತೊಳೆದುಕೊಂಡಿದೆ.

* ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಭಾರತೀಯರು 25 ಲಕ್ಷ ಕೋಟಿ ರೂಪಾಯಿ ಇಟ್ಟಿದ್ದಾರೆ.

* ಆದಾಯ ತೆರಿಗೆ ಇಲಾಖೆಯ (IRS) ಮಾಜಿ ಅಧಿಕಾರಿ ಸಂದೀಪ್ ಟಂಡನ್ ಮತ್ತು ಅವರ ಪತ್ನಿ ಅನು ಟಂಡನ್ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 250 ಕೋಟಿ ರೂ. ಕಪ್ಪು ಹಣ ಇಟ್ಟಿದ್ದಾರೆ.

* ಅನು ಟಂಡನ್ ಈಗ ಕಾಂಗ್ರೆಸ್ ಸಂಸದೆ. ಅದಕ್ಕೂ ಮುನ್ನ one fine day ಆಕೆಯ ಪತಿರಾಯ IRS ಅಧಿಕಾರಿ ಸಂದೀಪ್ ಟಂಡನ್ ಮುಕೇಶ್ ಅಂಬಾನಿಯ RIL ಮೇಲೆ ದಾಳಿ ನಡೆಸಿದ್ದರು. ಅದಾದ ನಂತರ ಅವರು ಮುಕೇಶ್ ಗೆ ತುಂಬಾ ಖಾಸಾ ವ್ಯಕ್ತಿಯಾಗಿಬಿಟ್ಟರು. ಅದಾದ ನಂತರ ಇಲಾಖೆಯಿಂದ ನಿವೃತ್ತಿ ಪಡೆದು RILನಲ್ಲಿ ದುಡಿಯತೊಡಗಿದರು.

* ಜೆಟ್ ಏರ್ ವೇಸ್ ಕಂಪನಿಯ ನರೇಶ್ ಗೋಯಲ್ ಸಹ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಕಪ್ಪು ಹಣ ಇಟ್ಟಿದ್ದಾರೆ.

* ಬರ್ಮನ್ ಸೋದರರು, ಯಶೋವರ್ಧನ ಬಿರ್ಲಾ ಮುಂತಾದವರ ಮೇಲೂ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ದಾಳಿ ನಡೆಸಬೇಕು.

English summary
IACs 4th expose : HSBC Geneva branch has 700 Indian accounts, Mukesh Ambani of Reliance has 100 crore of black money . Government of India conceals Information alleges Arvind Kejriwal in NewDelhi press meet, 9th Nov
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more