ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡರು ಗುಡುಗಿದ್ರು, ನೈಸ್ ಪ್ರಕರಣ ಅಸ್ತವ್ಯಸ್ತ

By Mahesh
|
Google Oneindia Kannada News

HD Deve Gowda demands CAG, CBI probe
ಬೆಂಗಳೂರು, ನ.9 : ಬಿಎಂಐಸಿ ನೈಸ್ ಪ್ರಕರಣದಲ್ಲಿ ಕಳೆದ ಎರಡು ದಿನಗಳಲ್ಲಿ ಭಾರಿ ಬದಲಾವಣೆಗಳು ಕಂಡು ಬಂದಿದೆ. ಅಕ್ರಮ ಭೂ ಸ್ವಾದೀನ ಆರೋಪ ಹೊತ್ತಿರುವ ದೇವೇಗೌಡರು ನೈಸ್ ತನಿಖೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಪ್ರಕರಣ ವಿಚಾರಣೆ ಕೈಗೆತ್ತಿಕೊಳ್ಳಬೇಕಿದ್ದ ನ್ಯಾ. ನಾಗಮೋಹನ್ ದಾಸ್ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.

ಲೋಕಾಯುಕ್ತ ಪೊಲೀಸರಿಂದ ಬೆಂಗಳೂರು ಮೈಸೂರು ಇನ್ಫ್ರಾ ಸ್ಟಕ್ಚರ್ ಕಾರಿಡಾರ್ (ಬಿಎಂಐಸಿ) ನೈಸ್ ಪ್ರಕರಣದ ತನಿಖೆ ಸಾಧ್ಯವಿಲ್ಲ. ಸಿಬಿಐ ಅಥವಾ ಸಿಎಜಿ ತಂಡದಿಂದ ತನಿಖೆ ನಡೆಸಬೇಕು ಎಂದು ದೇವೇಗೌಡರು ಇತ್ತೀಚೆಗೆ ಗುಡುಗಿದ್ದರು.

ಕರ್ನಾಟಕದ ಮಾಜಿ ಸಿಎಂ ದೇವೇಗೌಡ ಅವರನ್ನೊಳಗೊಂಡಂತೆ ಅನೇಕರ ಮೇಲೆ ತನಿಖೆ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿತ್ತ್ತು.

ನೈಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಗೂ ಸಿದ್ಧ ಅದರೆ, ಪ್ರಕರಣದ ತನಿಖೆಯನ್ನು ಸಿಬಿಐ ತಂಡಕ್ಕೆ ವಹಿಸುವುದು ಉತ್ತಮ. 1990ರಲ್ಲಿ ಲೋಕೋಪಯೋಗಿ ಸಚಿವ ಆಗಿದ್ದಾಗಲೂ ಕೋರ್ಟಿಗೆ ಹಾಜರಾಗಿದ್ದೆ. ಕೋರ್ಟಿಗೆ ಹಾಜರಾಗಲು ಸಿದ್ಧ ಎಂದು ದೇವೇಗೌಡ ಹೇಳಿದ್ದರು.

ಹಿಂದೆ ಸರಿದ ನ್ಯಾಯಾಧೀಶ : ನ್ಯಾ. ನ್ಯಾಯಾಧೀಶ ನಾಗಮೋಹನ್ ದಾಸ್ ಅವರು ಹಿಂದೆ ಸರಿದಿರುವುದು ಭಾರಿ ಕುತೂಹಲ ಮೂಡಿಸಿದೆ. ನೈಸ್ ಅಕ್ರಮದ ವಿಚಾರಣೆಯನ್ನು ರದ್ದುಗೊಳಿಸಬೇಕೆಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಅಬ್ರಾಹಂ ಪರ ನಾಗಮೋಹನದಾಸ ವಕೀಲರಾದ ಸಂದರ್ಭದಲ್ಲಿ ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ದರು.

ಈಗ ಇದೇ ಕಾರಣ ನೀಡಿ, ವಕೀಲರಾದ ಸಂದರ್ಭದಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ್ದೆ. ಈ ಹಿನ್ನೆಲೆಯಲ್ಲಿ ವಿಚಾರಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ನಾಗಮೋಹನ ದಾಸ್ ಹೇಳಿದ್ದಾರೆ.

ಬಿಎಂಐಸಿ ಯೋಜನೆಯಲ್ಲಿ ನೈಸ್ ಸಂಸ್ಥೆ ಅಕ್ರಮಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ಯೋಜನೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಹಾಗೂ ತನಿಖೆಯಾಗಬೇಕು ಎಂದು ಸಾಮಾಜಿಕ ಹಕ್ಕುಗಳ ಹೋರಾಟಗಾರ ಅಬ್ರಾಹಂ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮಾಜಿ ಮುಖ್ಯಮಂತ್ರಿಗಳಾದ ಕೃಷ್ಣ, ಯಡಿಯೂರಪ್ಪ, ದೇವೇಗೌಡ ಹಾಗೂ ಅಂದಿನ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿ ಎರಡು ವರ್ಷಗಳಲ್ಲಿ ಸಂಗ್ರಹಿಸಿರುವ ಟೋಲ್ ಜಪ್ತಿ ಮಾಡಿಕೊಳ್ಳುವಂತೆ ಆದೇಶ ನೀಡಿದ್ದರು.

English summary
Former prime minister HD Deve Gowda demanded CBI probe in to the Bangalore Mysore Infrastructure Corridor (BMIC) project and said this fraud will come under the scanner of the Comptroller and Auditor General (CAG). Judge Nagmohandas has withdrawn from BMIC NICE scam case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X