ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ಧಮಾಕಾ, ಬಸ್ ರೇಟ್ ಒನ್ ಟು ಡಬಲ್

|
Google Oneindia Kannada News

Private buses hike fares Diwali Festival travel
ಬೆಂಗಳೂರು, ನ 8: ಸಾಲುಸಾಲು ದೀಪಾವಳಿ ರಜೆಯ ಮೇಲೆ ಊರಿಗೆ ಅಥವಾ ಪ್ರವಾಸಕ್ಕೆ ತೆರಳುವವರ ಗಮನಕ್ಕೆ ತರುವುದೇನಂದರೆ ಖಾಸಗಿ ಬಸ್ಸುಗಳು ಅವ್ಯಾಹತವಾಗಿ ನಿಮ್ಮ ಜೇಬಿಗೆ ಕತ್ತರಿ ಹಾಕಲಿವೆ ಎಚ್ಚರವಾಗಿರಿ.

ಶನಿವಾರದಿಂದ ಆರಂಭವಾಗುವ ಐದು ದಿನಗಳ ದೀಪಾವಳಿ ರಜೆಯ ಭರಪೂರ ಲಾಭ ಪಡೆದುಕೊಂಡಿರುವ ಖಾಸಗಿ ಬಸ್ಸುಗಳು ಲಂಗುಲಗಾಮಿಲ್ಲದೆ ಟಿಕೆಟ್ ದರವನ್ನು ಹೆಚ್ಚಿಸಿವೆ.

ದಸರಾ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಖಾಸಗಿ ಬಸ್ಸುಗಳು ಟಿಕೆಟ್ ದರವನ್ನು ಮಾಮೂಲಿ ದಿನಗಳಿಗಿಂತ ಶೇ.40 ರಿಂದ ಶೇ.50 ಹೆಚ್ಚಿಸುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಬಾರಿ ಟಿಕೆಟ್ ದರವನ್ನು ಮನ ಬಂದಂತೆ ಹೆಚ್ಚಿಸಿ ಪ್ರಯಾಣಿಕರ ಜೇಬಿಗೆ ಲಕ್ಷ್ಮಿ ಪಟಾಕಿ ಇಟ್ಟಿದೆ.

ಬೆಂಗಳೂರಿನಿಂದ ಹೊರಡುವ ಖಾಸಗಿ ಬಸ್ಸುಗಳು ಪ್ರಯಾಣಿಕರ ಬೇಡಿಕೆಯ ಅನುಸಾರ ಟಿಕೆಟ್ ದರವನ್ನು ಮನಬಂದಂತೆ ನಿಗದಿ ಮಾಡಿವೆ. ಯಾವ ಮಟ್ಟಿಗೆ ಟಿಕೆಟ್ ದರ ಹೆಚ್ಚಿಸಿವೆ ಅಂದರೆ ಬಸ್ ಖರೀದಿಗೆ ಬ್ಯಾಂಕಿನಿಂದ ಪಡೆದ ಸಾಲದ ಒಂದು ವರ್ಷದ ಇಎಂಐ ಕಂತು ದೀಪಾವಳಿ ಮುಗಿಯುವುದರೊಳಗೆ ತೀರಿಸ ಬೇಕೆನ್ನುವಷ್ಟರ ಮಟ್ಟಿಗೆ.

ಬೆಂಗಳೂರಿನಿಂದ ಹುಬ್ಬಳ್ಳಿಗೆ ಮಾಮೂಲಿ ದಿನಗಳಲ್ಲಿ ಟಿಕೆಟ್ ದರ ರೂ. 550 ಇದ್ದರೆ 3400 ರೂಪಾಯಿ ವರೆಗೆ ಹೆಚ್ಚಿಸಿ ದರೋಡೆ ಮಾಡುತ್ತಿವೆ. ಒಂದು ಟಿಕೆಟ್ ಮೇಲೆ ಈ ಮಟ್ಟಿನ ಲಾಭವಾದರೆ ಒಂದು ಟ್ರಿಪ್ ನಲ್ಲಿ ಅವರು ಮಾಡುವ ಲಾಭದ ಮೊತ್ತ ಎಷ್ಟಾಗಬಹದು!!

ಬೆಂಗಳೂರಿನಿಂದ ರಾಜ್ಯದ ಆಯ್ದ ಕೆಲ ನಗರಗಳಿಗೆ ಖಾಸಗಿ ಬಸ್ಸುಗಳ ದೀಪಾವಳಿ 2012 ಟಿಕೆಟ್ ದರ ಇಂತಿದೆ:

ಬೆಂಗಳೂರು - ಹುಬ್ಬಳ್ಳಿ - ರೂ. 2200 ರಿಂದ 3400 (ಮಾಮೂಲಿ ದರ ರೂ. 400 ರಿಂದ 550)
ಬೆಂಗಳೂರು - ಉಡುಪಿ - ರೂ. 850 ರಿಂದ 1100 (ಮಾಮೂಲಿ ದರ ರೂ. 375 ರಿಂದ 500)
ಬೆಂಗಳೂರು - ಮೈಸೂರು - ರೂ. 250 ರಿಂದ 400 (ಮಾಮೂಲಿ ದರ ರೂ. 110 ರಿಂದ 180)
ಬೆಂಗಳೂರು - ರಾಯಚೂರು - ರೂ. 850 ರಿಂದ 1050 ( ಮಾಮೂಲಿ ದರ ರೂ.400 ರಿಂದ 650)
ಬೆಂಗಳೂರು - ಶಿವಮೊಗ್ಗ - ರೂ 750 ರಿಂದ 900 (ಮಾಮೂಲಿ ದರ ರೂ.230 ರಿಂದ 400)

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

English summary
Private Bus operators hike fare for long distance travel in Karnataka. Diwali Dhamaka of the Private order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X