ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಡೂಡ್ಲ್ ಫೈನಲ್ ನಲ್ಲಿ ಬೆಂಗಳೂರಿನ ಶ್ರಾವ್ಯ

By Mahesh
|
Google Oneindia Kannada News

ಬೆಂಗಳೂರು, ನ.8 : ಪ್ರತಿ ವರ್ಷದಂತೆ ಈ ವರ್ಷ ಕೂಡಾ ಗೂಗಲ್ ಡೂಡ್ಲ್ ಸ್ಪರ್ಧೆ ತೀವ್ರ ಹಣಾಹಣಿಯಿಂದ ಕೂಡಿದೆ. ಬೆಂಗಳೂರಿನ ವಿದ್ಯಾರ್ಥಿನಿಯೊಬ್ಬಳು ಕರ್ನಾಟಕದಿಂದ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾಳೆ.

ಯಾರಿಗೆ ಹೆಚ್ಚು ಆನ್ ಲೈನ್ ಮತ ಸಿಗುತ್ತದೆಯೋ ಅವರು ಅಂತಿಮವಾಗಿ ಸ್ಪರ್ಧೆಯಲ್ಲಿ ವಿಜೇತರು ಎಂದು ಘೋಷಿಸಲಾಗುತ್ತದೆ.

ಆನ್ ಲೈನ್ ವೋಟಿಂಗ್ 10 ನವೆಂಬರ್ ರಂದು ಕೊನೆಗೊಳ್ಳಲಿದೆ. ನ.11 ರಂದು ಮತ ಎಣಿಕೆ ಆಗಲಿದೆ. ಬೆಂಗಳೂರಿನ ಶ್ರಾವ್ಯಗೆ ವೋಟ್ ಮಾಡಲು ಇಲ್ಲಿ ಕ್ಲಿಕ್ ಮಾಡಿ. ಜೊತೆಗೆ ಇತರೆ ವಿಭಾಗದ ಚಿತ್ರಗಳಿಗೂ ವೋಟ್ ಮಾಡಬಹುದು.

ಕ್ಲಾಸ್ 1-3(4 ಜನ ಫೈನಲಿಸ್ಟ್), ಕ್ಲಾಸ್ 4-7(4 ಜನ ಫೈನಲಿಸ್ಟ್) ಹಾಗೂ ಕ್ಲಾಸ್ 8-10 (5 ಜನ ಫೈನಲಿಸ್ಟ್) ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗಿದೆ. ಕ್ಲಾಸ್ 4-7 ವಿಭಾಗದಲ್ಲಿ ಬೆಂಗಳೂರಿನ ಮಿತ್ರ ಅಕಾಡೆಮಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಶ್ರಾವ್ಯ ಮಂಜುನಾಥ್ ಫೈನಲ್ ಹಂತ ತಲುಪಿದ್ದಾರೆ.

ಅಂತಿಮ ವಿಜೇತರನ್ನು ನ.12 ರಂದು ನಡೆಯಲಿರುವ ಡೂಡ್ಲ್4 ಗೂಗಲ್ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ. ಭಾರತದ 'ವಿವಿಧತೆಯಲ್ಲಿ ಐಕ್ಯತೆ' ಯನ್ನು ರೇಖೆಗಳ ಮೂಲಕ ಸುಂದರವಾಗಿ ಚಿತ್ರಿಸಿದ ವಿದ್ಯಾರ್ಥಿಗಳು ಅಂತಿಮವಾಗಿ ಗೆಲುವು ಸಾಧಿಸುತ್ತಾರೆ.

ಈ ಬಾರಿ ಸುಮಾರು 200,000 ಅರ್ಜಿಗಳು ಬಂದಿತ್ತು. 13 ಜನ ಫೈನಲ್ ಹಂತ ತಲುಪಿದ್ದಾರೆ. ಫೈನಲ್ ಹಂತ ತಲುಪಿರುವ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. ಗೂಗಲ್ ಸಂಸ್ಥೆ ಡೂಡ್ಲರ್ ಡೆನ್ನಿಸ್ ಹ್ವಾಂಗ್ ಅವರು ಅಂತಿಮ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ.

ಆಯ್ಕೆಯಾದ ಡೂಡ್ಲ್ ನವೆಂಬರ್ 14 ರ ಮಕ್ಕಳ ದಿನಾಚರಣೆ ದಿನದಂದು ಗೂಗಲ್ ಇಂಡಿಯಾ ಪೇಜ್ ನಲ್ಲಿ ಕಾಣಿಸಿಕೊಳ್ಳಲಿದೆ. ಫೈನಲ್ ಹಂತ ತಲುಪಿದ ವಿದ್ಯಾರ್ಥಿಗಳಿಗೆ ಗೂಗಲ್ ಕಿಟ್ ಹಾಗೂ ಸನ್ಮಾನ ಪತ್ರ ದೊರೆಯಲಿದೆ.

ಕಳೆದ ವರ್ಷ 155,000 ಅರ್ಜಿಗಳು ಬಂದಿತ್ತು. ನೋಯ್ಡಾದ ವಿದ್ಯಾರ್ಥಿನಿ ವರ್ಷಾ ಗುಪ್ತಾ ರಚಿಸಿದ ಸಂಗೀತ ಸಾಧನಗಳಿದ್ದ ಗೂಗಲ್ ಡೂಡ್ಲ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿತ್ತು.

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಶ್ರಾವ್ಯ ಮಂಜುನಾಥ್, ಮಿತ್ರ ಅಕಾಡೆಮಿ, ಬೆಂಗಳೂರು

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಎಂ ಪ್ರನ್ಶು ತನಾಯಾ, ಡಿಎವಿ ಪಬ್ಲಿಕ್ ಸ್ಕೂಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ವಾಸುದೇವನ್ ದೀಪಕ್, ದೇವಗಿರಿ ಸಿಎಂಐ ಪಬ್ಲಿಕ್ ಸ್ಕೂಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ವಾಸುದೇವನ್ ದೀಪಕ್, ದೇವಗಿರಿ ಸಿಎಂಐ ಪಬ್ಲಿಕ್ ಸ್ಕೂಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಸೌಭಾಗ್ಯ ಕಾಲಿಯಾ, ಶ್ರೀಅರಬಿಂದೋ ಸ್ಕೂಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಕಾಜಲ್ ಸಿ ಸೋನಿ, ಕ್ವೀನ್ ಮೇರಿ ಸ್ಕೂಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಅದಿತಿ ತಿವಾರಿ, ಅಮಿಟಿ ಇಂಟರ್ ನ್ಯಾಷನಲ್ ಸ್ಕೂಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಪ್ರಸೂನ್ ಜೈನ್, ಆನಂದ್ ವಿಹಾರ್ ಹೈಸ್ಕೂಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಮಹಮ್ಮದ್ ಅಫ್ತಾಬ್ ಅಲಂ, ಅಲ್ಬಾನಿ ಹಾಲ್ ಪಬ್ಲಿಕ್ ಸ್ಕೂಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಪ್ರೀತಂ ಪೌಲ್, ಶ್ರೀ ಪ್ರಕಾಶ್ ವಿದ್ಯಾನಿಕೇತನ್, ಟಿಪಿಟಿ ಬ್ರಾಂಚ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಅರುಣ್ ಕುಮಾರ್ ಯಾದವ್ ಕೇಂದ್ರಿಯ ವಿದ್ಯಾಲಯ

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಸಮೀಕ್ಷಾ ಗೋಯಲ್, ಕೇಂದ್ರಿಯ ವಿದ್ಯಾಲಯ

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಫೈನಲ್ ನಲ್ಲಿ ಆಯ್ಕೆಗೊಂಡ ಗೂಗಲ್ ಡೂಡ್ಲ್

ಗುಲಫ್ಶಾ ಬಾನೊ, ಸೈಂಟ್ ಅಂಟೋನಿಸ್ ಡೇ ಸ್ಕೂಲ್


ಕಳೆದ 14ಕ್ಕೂ ಅಧಿಕ ವರ್ಷಗಳಿಂದ ಶಿಕ್ಷಣ ಹಾಗೂ ಮನರಂಜನೆಯ ಆಗರವಾಗಿರುವ ಗೂಗಲ್, ವಿದ್ಯಾರ್ಥಿಗಳಿಗೆ ಅನೇಕ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿದೆ. ಖ್ಯಾತನಾಮರ ಹುಟ್ಟುಹಬ್ಬ, ಹಬ್ಬ ಹರಿದಿನ, ವಾರ್ಷಿಕೋತ್ಸವ ದಿನಗಳಲ್ಲಿ ಗೂಗಲ್ ಲೋಗೋವನ್ನು ಅಲಂಕರಿಸಿ ಪ್ರದರ್ಶಿಸಲಾಗುತ್ತದೆ.

ಗೂಗಲ್ ಲೋಗೋವನ್ನು ಕಲಾತ್ಮಕವಾಗಿ ರೂಪಿಸುವುದಕ್ಕೆ ಡೂಡಲ್ಸ್ ಎನ್ನಲಾಗುತ್ತದೆ. ಮಂಗಳೂರು ಸೇಂಟ್ ಅಲೋಶಿಯಸ್ ಹೈಸ್ಕೂಲಿನ 9ನೇ ತರಗತಿಯ ವಿದ್ಯಾರ್ಥಿ ಅಕ್ಷಯ್‌ರಾಜ್ 2010ರಲ್ಲಿ ಈ ಸ್ಪರ್ಧೆಯಲ್ಲಿ ಗೆದ್ದಿದ್ದ.

English summary
Doodle4Google 2012 Competition : Mitra Academy 6th Std student Shravya Manjunath is one of the finalist in the ongoing competition. online voting till 10th November. 11th will be the results based on the online votes.Google has announced 13 finalists for this years 'Doodle 4 Google' contest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X