ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಂಗ್ ಫಿಷರ್ ಏರ್ ಲೈನ್ಸ್ ಗೆ 754 ಕೋಟಿ ರು ನಷ್ಟ

By Mahesh
|
Google Oneindia Kannada News

Kingfisher Q2 loss widens to Rs. 754 cr
ಬೆಂಗಳೂರು, ನ.8: ಸಾಲದ ಸುಳಿಯಲ್ಲಿ ಸಿಲುಕಿರುವ ಕಿಂಗ್ ಫಿಷರ್ ಏರ್ ಲೈನ್ಸ್ ಎರಡನೇ ತ್ರೈಮಾಸಿಕದಲ್ಲಿ ಭಾರಿ ನಷ್ಟ ಅನುಭವಿಸಿದೆ. ಸೆಪ್ಟೆಂಬರ್ 30,2012ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 754 ಕೋಟಿ ರು ನಷ್ಟು ನಿವ್ಚಳ ನಷ್ಟ ಅನುಭವಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 469 ಕೋಟಿ ರು ನಷ್ಟ ಹೊಂದಿತ್ತು.

ಕಿಂಗ್ ಫಿಷರ್ ಕಂಪನಿ ಷೇರುಗಳು ಬಿಎಸ್ ಇನಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ 12.52 ರು. ನಂತೆ ಶೇ 2.42 ರಷ್ಟು ಕುಸಿತ ಕಂಡಿತ್ತು. ಈ ತ್ರೈಮಾಸಿಕದಲ್ಲಿ ಒಂದು ಅವಧಿಯ ನಷ್ಟ 448 ಕೋಟಿ ರು ಹಾಗೂ ನಿರ್ವಹಣಾ ವೆಚ್ಚ 220 ಕೋಟಿ ರು ನಷ್ಟು ನಷ್ಟ ಉಂಟಾಗಿದೆ.

ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆಗೆ ಸಿಕ್ಕಾಪಟ್ಟೆ ಸಾಲ ಕೊಟ್ಟಿರುವ ಎಸ್ ಬಿಐ ಕಠಿಣ ಕ್ರಮಕ್ಕೆ ಮುಂದಾಗಿದೆ. ನವೆಂಬರ್ 30ರೊಳಗೆ ಸಾಲ ತೀರಿಸದಿದ್ದರೆ ಕಿಂಗ್ ಫಿಷರ್ ವಿಮಾನ ಹಾರಾಡಲು ಬಿಡುವುದಿಲ್ಲ ಎಂದು ಎಸ್ ಬಿಐ ಎಚ್ಚರಿಸಿತ್ತು.

ಸುಮಾರು 7,524 ಕೋಟಿ ರು ಸಾಲದ ಹೊರೆ ಹೊಂದಿರುವ ಕಿಂಗ್ ಫಿಷರ್ ಸಂಸ್ಥೆ ಸುಮಾರು 8000 ಕೋಟಿ ರು ನಷ್ಟು ನಷ್ಟ ಅನುಭವಿಸಿದೆ. 17 ಬ್ಯಾಂಕ್ ಗಳಿಂದ ಸಾಲ ಪಡೆದಿದೆ. ಎಸ್ ಬಿಐನಿಂದಲೇ ಅರ್ಧದಷ್ಟು ಸಾಲದ ಮೊತ್ತ ವಿಜಯ್ ಮಲ್ಯ ಪಡೆದಿದ್ದಾರೆ.

ಈ ಮೊದಲು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿತ್ತು. ಡಿಜಿಸಿಎ ಕಿಂಗ್ ಫಿಷರ್ ಹಾರಾಟ ಪರವಾನಿಗೆ ರದ್ದು ಮಾಡಿತ್ತು.

ಈ ವರ್ಷದ ಡಿಸೆಂಬರೊಳಗೆ ನಾಲ್ಕು ತಿಂಗಳ ಸಂಬಳವನ್ನು ಎಲ್ಲ ಸಿಬ್ಬಂದಿಗಳಿಗೆ ನೀಡುವುದಾಗಿ ಅ.25 ರಂದು ಕಿಂಗ್ ಫಿಷರ್ ಸಂಸ್ಥೆ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ತನ್ನ 4000 ಉದ್ಯೋಗಿಗಳ ಪೈಕಿ 2000 ಉದ್ಯೋಗಿಗಳಿಗೆ ಈ ವರ್ಷದ ಮಾರ್ಚ್ ತಿಂಗಳಿನ ತನಕ ಸಂಬಳ ನೀಡಿದೆ. ನಂತರ ಯಾರೊಬ್ಬರಿಗೂ ಸಂಬಳ ನೀಡಿರಲಿಲ್ಲ.

ಪೈಲಟ್ ಗಳ ಮುಷ್ಕರ, ವಿಮಾನ ಹಾರಾಟ ರದ್ದು, ವಿಮಾನಯಾನ ಸಂಸ್ಥೆ ಉಳಿಸಲು ಇತರೆ ಆಸ್ತಿ ಮಾರಾಟ ಮುಂತಾದ ಕಷ್ಟಕರ ಪರಿಸ್ಥಿತಿಯನ್ನು ಮಲ್ಯ ಎದುರಿಸಿದ್ದಾರೆ. ಬ್ಯಾಂಕು ಗಳ ಅಂದಾಜಿನ ಪ್ರಕಾರ 'ಕಿಂಗ್ ಫಿಷರ್' ಬ್ರಾಂಡ್ ಮೌಲ್ಯ ಸುಮಾರು 4,100 ಕೋಟಿ ಇದೆ. ವಿಜಯ್ ಮಲ್ಯ ಸಂಸ್ಥೆ ವೈಯಕ್ತಿಕ ಗ್ಯಾರಂಟಿಯಾಗಿ 248.97 ಕೋಟಿ ರು ತೂಗುತ್ತಿದ್ದಾರೆ.

English summary
Debt-ridden Kingfisher Airlines on Thursday reported net loss of Rs. 754 crore for the July-September quarter, a sharp increase from Rs.469 crore in the year-ago period, and said it is working on a plan to resume services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X