ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಫ್ಟ್ ವೇರ್ ಇಂಜಿನಿಯರುಗಳಿಗೆ ಐಟಿ ಕೆಲಸ ಖಾಲಿಯಿಲ್ಲ

By Srinath
|
Google Oneindia Kannada News

no-information-technology-jobs-for-techies
ಬೆಂಗಳೂರು, ನ.7: ಆರಂಭದಿಂದಲೂ ಒಂದೇ ಸಮನೆ ನೇಮಕಗಳನ್ನು ಮಾಡಿಕೊಳ್ಳುತ್ತಾ ಅಸಂಖ್ಯಾತ ಮಂದಿಗೆ ಉದ್ಯೋಗದಾಸರೆ ನೀಡುತ್ತಿದ್ದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಈಗ ಉದ್ಯೋಗಾವಕಾಶಗಳು ಖಾಲಿಯಾಗಿವೆಯಾ? ಟೆಕ್ಕಿಗಳಿಗೆ ಉದ್ಯೋಗಗಳು ಸಿಗುತ್ತಿಲ್ಲವಾ?

ಪರಿಸ್ಥಿತಿ ಹಾಗೇನೂ ಇಲ್ಲ. ಆದರೆ ಆರ್ಥಿಕ ಹಿಂಜರಿತ ಮತ್ತು ತೀವ್ರ ಸ್ಪರ್ಧಾತ್ಮಕತೆಯಿಂದಾಗಿ ಟೆಕ್ಕಿಗಳಿಗೆ ಗಂಭೀರ ಪರಿಸ್ಥಿತಿ ಎದುರಾಗಿದೆ. ಐಟಿ ದಿಗ್ಗಜ ಕಂಪನಿಗಳಾದ TCS ಮತ್ತು Infosys ಪ್ರಸಕ್ತ ಸಾಲಿನಲ್ಲಿ ಕಾಲೇಜು ಕ್ಯಾಂಪಸ್ ಸೆಲೆಕ್ಷನ್ ಅವಕಾಶಗಳನ್ನು ತಗ್ಗಿಸಿದೆ.

ಕಳೆದ ವರ್ಷ ಅನುಕ್ರಮವಾಗಿ 43 ಸಾವಿರ ಮತ್ತು 19 ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳುವ ಭರವಸೆ ನೀಡಿದ್ದ TCS ಮತ್ತು Infosys ಆ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಿದ್ದು, 25 ಸಾವಿರ ಮತ್ತು 6 ಸಾವಿರಕ್ಕೆ ಕುಗ್ಗಿಸಿವೆ.

HCL Technologies ಕಂಪನಿಯದ್ದೂ ಇದೇ ಕಥೆ. ಇನ್ನು, ಬಹುರಾಷ್ಟ್ರೀಯ ಕಂಪನಿಗಳು ಡಿಸೆಂಬರ್ ವೇಳೆಗೆ ನೇಮಕಾತಿಗಳನ್ನು ಕಡಿಮೆ ಮಾಡುತ್ತವೆ. ಆದರೆ ಭಾರತೀಯ ಕಂಪನಿಗಳು ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಹಣಕಾಸು ಸ್ಥಿತಿಗಳನ್ನು ನೋಡಿಕೊಂಡು ಮುಂದಿನ ಆರ್ಥಿಕ ವರ್ಷಕ್ಕೆ ಹೊಂದಿಕೊಂಡಂತೆ ನೇಮಕಾತಿಗಳನ್ನು ಮಾಡಿಕೊಳ್ಳುತ್ತವೆ ಎಂದು HeadHunters India ಮಾನವ ಸಂಪನ್ಮೂಲ ಸಂಸ್ಥೆಯ ಕ್ರಿಸ್ ಲಕ್ಷ್ಮಿಕಾಂತ್ ವ್ಯಾಖ್ಯಾನಿಸಿದ್ದಾರೆ.

ಆದರೆ ಈ ಬಾರಿ ಜನವರಿ-ಮಾರ್ಚ್ ತ್ರೈಮಾಸಿಕಕ್ಕೂ ಮೊದಲೇ ನೇಮಕಾತಿ ವಿಚಾರಗಳ ಬಗ್ಗೆ ನಮ್ಮ ಕಂಪನಿಗಳು ಹಿಂಜರಿದಿವೆ ಎನ್ನುತ್ತಾರೆ ಲಕ್ಷ್ಮಿಕಾಂತ್. ಹಾಗಾದರೆ ಮಾಹಿತಿ ತಂತ್ರಜ್ಞಾನದ ಫ್ರೆಷರ್ಸ್ ಗೆ ಉದ್ಯೋಗಾವಕಾಶಗಳೇ ಇಲ್ವಾ ಅಂದರೆ...

IT ಹೊರತಾಗಿ ಇತರೆ ಕ್ಷೇತ್ರಗಳು ನೇಮಕಾತಿಗಳನ್ನು ನಿಲ್ಲಿಸಿಲ್ಲ. ಇತರೆ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಇವೆ. ಆದರೆ IT ಮಂದಿ ಅದಕ್ಕೆ ಹೊಂದಿಕೊಂಡು ಉದ್ಯೋಗಗಳನ್ನು ದಕ್ಕಿಸಿಕೊಳ್ಳಬೇಕಾಗಿದೆ.

ರೀಟೇಲ್, ಹಾಸ್ಪಿಟಲ್, ಹೋಟೆಲ್, ಬ್ಯಾಂಕಿಂಗ್, ಮೂಲಸೌಕರ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಇವೆ. ಉದಾಹರಣೆಗೆ State Bank of India ಈ ಬಾರಿ 20 ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳಲು ಸನ್ನದ್ದವಾಗಿದೆ. ಇನ್ನು, ವಾರ್ಷಿಕ ಶೇ. 35ರಷ್ಟು ಪ್ರಗತಿ ಕಾಣುತ್ತಿರುವ ಈ-ಕಾಮರ್ಸ್ ಕ್ಷೇತ್ರದಲ್ಲಿ ಹೇರಳ ಉದ್ಯೋಗಾವಕಾಶಗಳು ಇವೆ.

IT ಹೊರತಾಗಿ ಇತರೆ ಕ್ಷೇತ್ರಗಳಲ್ಲಿ ನೇಮಕಗೊಂಡವರಿಗೆ ಪಗಾರ ಅಷ್ಟೊಂದು ಆಕರ್ಷಕವಾಗಿರುವುದಿಲ್ಲವಾದರೂ ಅಲ್ಲಿ ಗಳಿಸುವ ಅನುಭವ ಅಮೂಲ್ಯವಾಗಿರುತ್ತದೆ ಎಂದು ಹುರಿದುಂಬಿಸುತ್ತಾರೆ ಕ್ರಿಸ್ ಲಕ್ಷ್ಮಿಕಾಂತ್.

English summary
No Information technology jobs for techies but others hiring. But, software Engineers can look at opportunities in retail, hospitality, public sector banking, infrastructure, healthcare and education spaces, say job consultants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X