ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಷ್ಟು ಬೇಕಾದ್ರೂ ಸಿಲಿಂಡರ್ ತಗೋಳ್ಳಿ, ಆದ್ರೆ ಬೆಲೆ?

By Srinath
|
Google Oneindia Kannada News

lpg-cylinder-cap-may-be-removed-but-price-hike-for-sure
ನವದೆಹಲಿ, ನ.7: ಅಡುಗೆ ಅನಿಲ ಸಿಲಿಂಡರ್ ಸಂಖ್ಯೆಯನ್ನು 6/12ಕ್ಕೆ ಸೀಮಿತಗೊಳಿಸಿ, ಮಹಿಳೆಯರಿಗೆ ಸಂಕಷ್ಟ ತಂದಿತ್ತಿರುವ ಕೇಂದ್ರ ಸರಕಾರ ಈಗ ಸಿಲಿಂಡರ್ ಸಂಖ್ಯೆ ಮೇಲಿನ ಮಿತಿ ತೆಗೆದುಹಾಕಿ, ಎಷ್ಟು ಬೇಕಾದರೂ ತೆಗೆದುಕೊಳ್ಳಿ ಆದರೆ ತುಸು ಹೆಚ್ಚಿನ ಬೆಲೆ ನೀಡಿ ಖರೀದಿಸಿ ಎನ್ನುವಂತಿದೆ.

ಎಲ್ಲ ಲೋಕಸಭಾ ಚುನಾವಣಾ ಕಾಲೇ ... ಹಿಂದೆಮುಂದೆ ನೋಡದೆ, ಗ್ರಾಹಕರ ಅಳಲನ್ನು ಕೇಳದೆ ಯುಪಿಎ ಸರ್ಕಾರ ಸಬ್ಸಿಡಿ ದರದಲ್ಲಿ ವರ್ಷವೊಂದಕ್ಕೆ ಕೇವಲ ಆರು ಸಿಲಿಂಡರ್‌ಗಳನ್ನು ನೀಡುವ ನೀತಿಯನ್ನೇನೋ ಜಾರಿಗೆ ತಂದುಬಿಟ್ಟಿದೆ. ಆದರೆ ಈಗ ತನ್ನ ನಿರ್ಧಾರದ ಬಗ್ಗೆ ತಾನೇ ಪರಿತಪಿಸುವಂತಾಗಿದೆ.

ಮುಂದಿನ ಅಕ್ಟೋಬರ್‌ ಹೊತ್ತಿಗೆ ಬಹುತೇಕ ನಿವಾಸಿಗಳ ಸಬ್ಸಿಡಿ ಸಿಲಿಂಡರ್‌ ಕೋಟಾ ಮುಗಿದಿರುತ್ತದೆ. 2014ರ ಮಾರ್ಚ್‌ ವೇಳೆಗೆ ಮಾರುಕಟ್ಟೆ ದರದಲ್ಲಿ ಜನರು ಸಿಲಿಂಡರ್‌ ಖರೀದಿಸಬೇಕಾಗುತ್ತದೆ. ಹೀಗಾಗಿ ಇದು ಚುನಾವಣೆ ವಿಷಯವಾಗುವ ಸಾಧ್ಯತೆ ಇದೆ ಎಂಬ ಆತಂಕ ಕೇಂದ್ರ ಸರಕಾರಕ್ಕಿದೆ.

2014ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಯುಪಿಎ ಸರ್ಕಾರ ಆ ವೇಳೆಗೆ ಸರಿಯಾಗಿ ಈ ನೀತಿ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಭೀತಿಯಲ್ಲಿದೆ. ಹಾಗಾಗಿ, ಸಬ್ಸಿಡಿ ಸಿಲಿಂಡರ್‌ಗಳಿಗೆ ಇರುವ (6/12) ಮಿತಿಯನ್ನೇ ರದ್ದುಪಡಿಸಿದರೆ ಹೇಗೆ? ಅದರ ಬದಲಿಗೆ ಸಿಲಿಂಡರ್‌ ಬೆಲೆಯನ್ನು ತಲಾ 100 ರೂ. ನಷ್ಟು ಏರಿಸಿದರೆ ಹೇಗೆ ಎಂಬ ಗಂಭೀರ ಚಿಂತನೆಯಲ್ಲಿ ತೊಡಗಿದೆ.

ಹೊಸ ಲೆಕ್ಕಾಚಾರ ಹೀಗಿದೆ: ಪೆಟ್ರೋಲಿಯಂ ಸಚಿವಾಲಯದ ಅಂದಾಜಿನ ಪ್ರಕಾರ ಸಬ್ಸಿಡಿ ಸಿಲಿಂಡರ್‌ಗಳಿಗೆ 6ರ ಮಿತಿ ಹೇರಿ, ಉಳಿದ ಸಿಲಿಂಡರುಗಳನ್ನು ಮಾರುಕಟ್ಟೆ ದರದಲ್ಲಿ ಮಾರುವುದರಿಂದ ತೈಲ ಕಂಪನಿಗಳಿಗೆ 12 ಸಾವಿರ ಕೋಟಿ ರೂ. ಉಳಿತಾಯವಾಗುತ್ತದೆ. ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು 9ಕ್ಕೆ ಏರಿಸಿಬಿಟ್ಟರೆ ಉಳಿತಾಯದ ಮೊತ್ತ 2,500 ಕೋಟಿ ರೂ.ಗೆ ಕುಸಿಯುತ್ತದೆ.

ಇದರ ಬದಲು ಸಬ್ಸಿಡಿ ಸಿಲಿಂಡರುಗಳಿಗೆ ಇರುವ ಮಿತಿಯನ್ನೇ ರದ್ದುಗೊಳಿಸಿ ಎಷ್ಟು ಬಾರಿ ಬೇಕಾದರೂ ಮರುಭರ್ತಿ ಮಾಡಿಸಿಕೊಳ್ಳಲು ಅವಕಾಶ ನೀಡಿ ಸಿಲಿಂಡರ್‌ ಬೆಲೆಯನ್ನು 100 ರೂ. ಹೆಚ್ಚಿಸಿದರೆ ತೈಲ ಕಂಪನಿಗಳಿಗೆ 6 ಸಿಲಿಂಡರುಗಳ ಮಿತಿ ಹೇರಿದಾಗ ಉಳಿಯುತ್ತಿದ್ದಷ್ಟೇ ಹಣ ಮಿಗುತ್ತದೆ. ಹೀಗಾಗಿ ಈ ಅವಕಾಶ ಆಯ್ದುಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ.

English summary
According to petroleum Ministry sources the present limit on domestic LPG cylinders supply may be removed and unlimited supply will be in place but the price of of each such cylinders will be hiked by Rs 100 for sure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X