ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನರಾ ಬ್ಯಾಂಕ್ ಲಾಭ ಶೇ 22 ರಷ್ಟು ಕುಸಿತ

By Mahesh
|
Google Oneindia Kannada News

Canara Bank
ಬೆಂಗಳೂರು, ಅ.6: ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕೆನರಾ ಬ್ಯಾಂಕ್ ನ ನಿವ್ವಳ ಲಾಭ ಶೇ 22 ರಷ್ಟು ಕುಸಿತ ಕಂಡು 661 ಕೋಟಿ ರು ಮಾತ್ರ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ನಿವ್ವಳ ಲಾಭ ಸುಮಾರು 852 ಕೋಟಿ ರು ಬಂದಿತ್ತು. ವ್ಯವಹಾರಿಕ ಲಾಭ 1,282 ಕೋಟಿ ರು. ಆಗಿದೆ.

ಸೆಪ್ಟೆಂಬರ್ 30,2012ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 5.52 ಲಕ್ಷ ಕೋಟಿ ರು. ವ್ಯವಹಾರ ನಡೆಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್ 5.27 ಲಕ್ಷ ಕೋಟಿ ರು. ವ್ಯವಹಾರ ನಡೆಸಿತ್ತು.

ಎರಡನೇ ತ್ರೈಮಾಸಿಕದಲ್ಲಿ ಬ್ಯಾಂಕಿನ ಒಟ್ಟು ಆದಾಯ 9,204 ಕೋಟಿ ರು. ತಲುಪಿದೆ. ಈ ತ್ರೈಮಾಸಿಕದಲ್ಲಿ ಆದಾಯ ಶೇ 9 ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 8,437 ಕೋಟಿ ರು ಆದಾಯ ಗಳಿಸಲಾಗಿತ್ತು.

ಸಾಲ ಮತ್ತು ಮುಂಗಡಗಳ ಮೇಲಿನ ವರಮಾನ 6,121 ಕೋಟಿ ರು. ಆಗಿದೆ. ಬ್ಯಾಂಕಿನ ಬಡ್ಡಿಯೇತರ ಆದಾಯ 608 ಕೋಟಿ ರು. ತಲುಪಿದೆ.

ಬ್ಯಾಂಕಿನ ಒಟ್ಟಾರೆ ವೆಚ್ಚ 7992 ಕೋಟಿ ರೂ. ತಲುಪಿದ್ದು, ಬಡ್ಡಿಯೇತರ ವೆಚ್ಚ 1283 ಕೋಟಿ ರು. ಆಗಿದೆ ಎಂದು ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಅರ್ಚನಾ ಭಾರ್ಗವ್ ಹೇಳಿದ್ದಾರೆ.

ಬ್ಯಾಂಕಿನ ಚಾಲ್ತಿ ಮತ್ತು ಉಳಿತಾಯ ಠೇವಣಿಗಳ ಮೊತ್ತ 83,556 ಕೋಟಿ ರು. ಆಗಿದೆ. ಬ್ಯಾಂಕಿನ ಒಟ್ಟು ಠೇವಣಿ ಶೇ.25.65 ರಷ್ಟಿದೆ.

ಅದರಲ್ಲಿ ಉಳಿತಾಯ ಠೇವಣಿಗಳು ಆರ್ಥಿಕ ವರ್ಷ ಅಂತ್ಯಕ್ಕೆ 70,494 ಕೋಟಿ ರು. ಏರಿಕೆಯಾಗಲಿದ್ದು, 2013ರ ಮೊದಲಾರ್ಧದಲ್ಲಿ 19.5 ಲಕ್ಷಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಉಳಿತಾಯ ಖಾತೆ ಠೇವಣಿಗಳಾಗಲಿವೆ ಎಂದು ಅರ್ಚನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಡ್ಡಿ ಆದಾಯ 1975 ಕೋಟಿ ರು. ಆರ್ಥಿಕ ವರ್ಷದ ಅಂತ್ಯಕ್ಕೆ ಮುಂಗಡಗಳು 2,15,751 ಕೋಟಿ ರು. ತಲುಪಲಿದ್ದು, ಸಾಲ ಮತ್ತು ಠೇವಣಿಗಳ ಅನುಪಾತ ಶೇ.64 ರಷ್ಟಾಗಿದೆ.

ರೈತರಿಗೆ ಆದ್ಯತೆ: ಕೃಷಿ ಸಾಲದ ಮೊತ್ತ 33,267 ಕೋಟಿ ರೂ. ಆಗಿದ್ದು, ಆರ್ಥಿಕ ವರ್ಷದ ಮೊದಲಾರ್ಧ ವಾರ್ಷಿಕದಲ್ಲಿ 13,944 ಕೋಟಿ ರೂ.ಗಳನ್ನುರೈತರಿಗೆ ಸಾಲ ನೀಡಲಾಗಿದೆ.

ಕಿಸಾನ್ ಕಾರ್ಡು ಗಳಡಿಯಲ್ಲಿ 5,363 ಕೋಟಿ ರೂ. ಬಾಕಿಯಿರುವ ಸಾಲದ ಮೊತ್ತ. ರೈತರ ಅನುಕೂಲಕ್ಕಾಗಿ ನೂತನ ತಂತ್ರಜ್ಞಾನಗಳನ್ನು ಒಳಗೊಂಡ ಎಟಿಎಂಗಳಲ್ಲಿ ಉಪಯೋಗಿಸಲು ಎನ್‌ಪಿಸಿಐ ಚಿಹ್ನೆವುಳ್ಳ ನೂತನ ಕಿಸಾನ್ ಕಾಡ್ ಗಳನ್ನು ನೀಡಲಾಗಿದೆ.

English summary
Canara bank net profit fell 22% to Rs 661 crore for the quarter ended September 2012 when compared to Rs 852 crore in the corresponding quarter of last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X