ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

700 ಟನ್ ಚಿನ್ನ ಅದಿರು ಇದ್ದ ಹಡಗು ನಾಪತ್ತೆ

By Mahesh
|
Google Oneindia Kannada News

Russian vessel carrying 700 tonnes of gold ore missing
ಮಾಸ್ಕೋ, ನ.6: ರಷ್ಯಾದ ಕಾರ್ಗೋ ಹಡಗು 'ಅಮುರ್ಸ್ಕ್ಯ' ಓಖೋಟಾಕ್ಸ್ ಸಮುದ್ರದಿಂದ ನಾಪತ್ತೆಯಾಗಿದೆ. ಈ ಹಡಗು ಸುಮಾರು 700 ಟನ್ ಚಿನ್ನದ ಅದಿರು ಸಾಗಿಸುತ್ತಿತ್ತು.

ಕಿರಣ್ ಎಂಬ ಬಂದರಿನಿಂದ ಓಖೋಟ್ಸಕ್ ತೀರಕ್ಕೆ 700 ಟನ್ ಚಿನ್ನದ ಅದಿರನ್ನು ಸಾಗಿಸುತ್ತಿದ್ದ ಅಮೂರ್ಸ್ ಕಾಯ ಹಡಗು ಸಮುದ್ರದಿಂದ ನಿಗೂಢವಾಗಿ ಕಣ್ಮರೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುಮಾರು 9 ಜನ ನಾವಿಕರು ಸೇರಿದಂತೆ ಒಟ್ಟು 11 ಜನರನ್ನು ಹೊಂದಿದ್ದ ಹಡಗಿನ ಚಲನವಲನದ ಬಗ್ಗೆ ಸುಳಿವು ಕೂಡಾ ಸಿಗದಂತೆ ಸಿನಿಮೀಯ ರೀತಿಯಲ್ಲಿ ಮಾಯವಾಗಿದೆ.

ಕೋಟ್ಯಂತರ ರುಪಾಯಿ ಮೌಲ್ಯದ ಚಿನ್ನದ ಅದಿರನ್ನು ಹೊತ್ತು ತರುತ್ತಿದ್ದ ಹಡಗು ಶಾಂತಾರ್ ದ್ವೀಪದ ಸಮೀಪದಲ್ಲಿ ನಾಪತ್ತೆಯಾಗಿದೆ.

ಅಧಿಕಾರಿಗಳು ವೈಮಾನಿಕ ತಪಾಸಣೆ ಮುಂದುವರೆಸಿದ್ದಾರೆ. ಕಡಲ್ಗಳ್ಳರು ಹಡಗನ್ನು ಅಪಹರಿಸುವ ಸಾಧ್ಯತೆ ಹೆಚ್ಚಾಗಿದೆ ಅಥವಾ ಹವಾಮಾನ ವೈಪರೀತ್ಯದಿಂದಾಗಿ ಹಡಗು ಮುಳುಗಡೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಶಾಂತಾರ್ ದ್ವೀಪದಲ್ಲಿ ಹವಾಮಾನ ವೈಪರೀತ್ಯ ವಿಪರೀತವಾಗಿರುವ ಕಾರಣ ವೈಮಾನಿಕ ತಪಾಸಣೆ ಕೂಡಾ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಾಪತ್ತೆಯಾಗಿದ್ದ 750 ಮೆಟ್ರಿಕ್ ಟನ್ ಬಂಗಾರದ ಅದಿರು ತುಂಬಿದ್ದ ಅಮುರ್‌ಸ್ಕಾಯಾ ಸರಕು ಸಾಗಣೆ ಹಡಗಿನ ಮಾಲೀಕನನ್ನು ಬಂಧಿಸಲಾಗಿದೆ ಎಂದು ರಷ್ಯಾದ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಅ.28ರಂದು ಒಖೊಟ್ಸ್ ಸಮುದ್ರದ ಶಾಂತಾರ್ ದ್ವೀಪದ ಬಳಿ ಅಪಾಯದ ಎಚ್ಚರಿಕೆ ದೀಪ ಬೆಳಗಿದ ನಂತರ ಹಡಗು ನಾಪತ್ತೆಯಾಗಿತ್ತು. ವಾತಾವರಣ ಸೂಕ್ತವಿಲ್ಲದ ಸಮಯದಲ್ಲಿ ನಡೆಸಿದ ರಕ್ಷಣಾ ಕಾರ್ಯದ ನಂತರ ಸಮುದ್ರ ತೀರದ ಬಳಿ ಹಡಗಿನ ಭಾಗವೊಂದು ಪತ್ತೆಯಾಗಿದ್ದು ಇದನ್ನು ನಾಪತ್ತೆಯಾಗಿರುವ ಹಡಗಿನ ಭಾಗವೆಂದು ನಂಬಲಾಗಿದೆ.

ಬಂಗಾರದ ಗಟ್ಟಿಯನ್ನು ಕಿರನ್ ಸಮುದ್ರದ ಬಂದರಿನಿಂದ ಒಖೊಟ್ಸ್ ಸಮುದ್ರದ ಬಂದರಿಗೆ ಸಾಗಿಸಲಾಗುತ್ತಿತ್ತು. ತಾಂತ್ರಿಕ ದೋಷ ಹೊಂದಿದ್ದ ಹಡಗು
ಚಂಡಮಾರುತದ ವಾತಾವರವಣವನ್ನು ಗಣನೆಗೆ ತೆಗೆದುಕೊಳ್ಳದೇ ಹಾಗೂ ಅನುಮತಿ ಪಡೆಯದೇ ಸಮುದ್ರಯಾನ ಪ್ರಾರಂಭಿಸಿದ್ದೇ ಅನಾಹುತಕ್ಕೆ ಕಾರಣ ಎನ್ನಲಾಗಿದೆ.

ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿ ಹಡಗಿನಲ್ಲಿದ್ದ ಜನರ ಸಾವಿಗೆ ಕಾರಣನಾಗಿರಬಹುದೆಂದು ಶಿಲ್‌ಟ್ಸಿನ್‌ನನ್ನು ಶಂಕಿಸಲಾಗಿದ್ದು, ಅಪರಾಧ ಸಾಬೀತಾದಲ್ಲಿ ಏಳು
ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ.

ಹಡಗಿನಲ್ಲಿದ್ದ ಸುಮಾರು 750 ಟನ್ ಬಂಗಾರದ ಅದಿರಿನ ಮೊತ್ತ 1 ಕೋಟಿ 21 ಲಕ್ಷ ರು ಮೌಲ್ಯ ಎಂದು ತಜ್ಞರು ಅಂದಾಜಿಸಿದ್ದಾರೆ. ಖಬೊರ್‌ವಸ್ಕ್ ಪ್ರದೇಶದ ಪೂರ್ವ ಹಾಗೂ ಜಪಾನ್‌ನ ಹೊಕ್ಕೈಡೊ ದ್ವೀಪದ ಉತ್ತರಕ್ಕಿರುವ ಒಖೊಟ್ಸ್ ಸಮುದ್ರದ ಶಾಂತಾರ್ ದ್ವೀಪದ ಬಳಿ ಹಡಗು ನಾಪತ್ತೆಯಾಗಿತ್ತು.

ಭಾರಿ ಮಳೆಯ ನಡುವೆಯೇ ಹಡಗಿನ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಸಮುದ್ರದಲ್ಲಿ ಮುಳುಗಿದ್ದ ವಸ್ತುವೊಂದು ಹಾಗೂ ಸಮುದ್ರದ ಮೇಲ್ಮೈನಲ್ಲಿ ತೈಲ ತೇಲುತ್ತಿರುವುದನ್ನು ರಕ್ಷಣಾ ಹಡಗು ಪತ್ತೆ ಮಾಡಿದೆ.

ಆದರೆ ಹವಾಮಾನ ಸೂಕ್ತವಾಗಿಲ್ಲದ ಕಾರಣ ಈಜುಗಾರರನ್ನು ಸಮುದ್ರಕ್ಕೆ ಇಳಿಸಲಾಗದ್ದರಿಂದ
ಇದು ಅಮುರ್‌ಸ್ಕಾಯಾ ಹಡಗೇ ಅಥವಾ ಅಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ

English summary
A Russian cargo vessel, the Amurskaya, went missing in the Sea of Okhotsk with 700 metric tonnes of gold ore, the far eastern transportation supervising department said in a statement on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X