ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ ಪಟಾಕಿ ಮಾರಾಟ ನಿಷೇಧಿಸಿ ಹೈಕೋರ್ಟ್ ಆದೇಶ

|
Google Oneindia Kannada News

Karnataka High Court refuse to stay order of cancellation of cracker licenses
ಬೆಂಗಳೂರು, ನ 6: ಸುರಕ್ಷತೆಯ ಉದ್ದೇಶದಿಂದ ಬೆಂಗಳೂರು ಪೊಲೀಸರು ಎನ್ಓಸಿ (NOC) ವಾಪಸ್ ಪಡೆದ ಹಿನ್ನಲೆಯಲ್ಲಿ ನಗರದ ಜನನಿಬಿಡ ಐದು ಪ್ರದೇಶಗಳಲ್ಲಿ ಪಟಾಕಿ ಮಾರಾಟ ಮಾಡುವುದನ್ನು ನಿಷೇಧಿಸಿ ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದೆ.

ಅವೆನ್ಯೂ ರಸ್ತೆ, ಸುಲ್ತಾನ್ ಪೇಟೆ, ಮಾಮೂಲ್ ಪೇಟೆ, ಚಿಕ್ಕಪೇಟೆ ಮತ್ತು ಶಿವಾಜಿನಗರ ವ್ಯಾಪ್ತಿ ಪ್ರದೇಶಗಳಲ್ಲಿ ಪಟಾಕಿ ಮಾರಾಟ ಮಾಡುವುದನ್ನು ಹೈಕೋರ್ಟ್ ನಿರ್ಬಂಧಿಸಿದೆ.

ಈ ಪ್ರದೇಶದಲ್ಲಿ ಪಟಾಕಿ ಮಾರಾಟ ಮಾಡಲು ಅನುಮತಿ ಕೋರಿ ವರ್ತಕರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿ ಈ ಆದೇಶ ನೀಡಿದೆ.

ಬೆಂಗಳೂರು ಮಹಾನಗರ ಪೋಲೀಸ್ ಆಯುಕ್ತರು ಮತ್ತು ಚೆನ್ನೈನಲ್ಲಿರುವ ದಕ್ಷಿಣ ವಲಯ ಸ್ಪೋಟಕ ನಿಯಂತ್ರಕ ಕಚೇರಿ ಪಟಾಕಿ ಮಾರುವ ಲೈಸೆನ್ಸ್ ರದ್ದು ಪಡಿಸಿದ್ದ ಹಿನ್ನಲೆಯಲ್ಲಿ ವರ್ತಕರು ಕೋರ್ಟ್ ಮೆಟ್ಟಲೇರಿದ್ದರು.

ಮೈದಾನದಲ್ಲಿ ಬೇಕಿದ್ದರೆ ಪಟಾಕಿ ಮಾರಾಟಕ್ಕೆ ಅನುಮತಿ ನೀಡುತ್ತೇವೆ ಆದರೆ ಜನನಿಬಿಡ ಪ್ರದೇಶದ ಅಂಗಡಿಗಳಲ್ಲಿ ಅನುಮತಿ ನೀಡಲಾಗದು ಎಂದು ಕೋರ್ಟ್ ಸಲಹೆ ನೀಡಿತು.

ನಗರದ ಈ ಐದು ಪ್ರದೇಶಗಳು ಕಿರಿದಾದ ರಸ್ತೆಗಳನ್ನು ಹೊಂದಿದೆ. ಪಟಾಕಿ ಸಂಗ್ರಹಿಸಿ ಒಂದು ವೇಳೆ ದುರಂತ ಸಂಭವಿಸಿದರೆ ಅಗ್ನಿಶಾಮಕ ದಳದ ವಾಹನಗಳಾಗಲಿ ಅಥವಾ ಅಂಬುಲೆನ್ಸ್ ಗಳಾಗಲಿ ಒಳಗೆ ಬರುವುದೇ ಕಷ್ಟ.

ಹೀಗಾಗಿ ಪೊಲೀಸರು ನೀಡಿದ NOCಗೆ ನಾವು ತಡೆಯಾಜ್ಞೆ ನೀಡುವುದಿಲ್ಲ ಎಂದು ಕೋರ್ಟ್ ಸ್ಪಷ್ಟ ಪಡಿಸಿದೆ.

ಪೋಲೀಸ್ ಆಯುಕ್ತರು ಯಾವುದೇ ಮಾಹಿತಿ ನೀಡದೆ ಪರವಾನಿಗೆ ರದ್ದು ಪಡಿಸುವ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ರದ್ದು ಪಡಿಸುವ ಮುನ್ನ ತನಿಖೆ ಕೂಡ ನಡೆಸಿಲ್ಲ ಎಂದು ವರ್ತಕರು ದೂರಿದ್ದಾರೆ.

English summary
Karnataka High Court refused to stay the order of cancellation of licences for selling crackers to shop owners in Sultanpet, Avenue Road, Shivaji Nagar, Mamoolpet and Chickpet areas in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X