ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಕ್ ಮಹೀಂದ್ರಾಗೆ ಶುಭ ಕಾಲ, Q2ನಲ್ಲಿ ಬಂಪರ್

By Mahesh
|
Google Oneindia Kannada News

Tech Mahindra
ಬೆಂಗಳೂರು, ನ.6: ಭಾರತ 6ನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟೆಕ್ ಮಹೀಂದ್ರಾ ತನ್ನ ಎರಡನೇ ತ್ರೈಮಾಸಿಕ ವರದಿಯಲ್ಲಿ ಭರ್ಜರಿ ಫಲಿತಾಂಶ ಪಡೆದಿದೆ.

ಸೆಪ್ಟೆಂಬರ್ 30,2012ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಟೆಕ್ ಮಹೀಂದ್ರ ಸಂಸ್ಥೆ ಶೇ 28 ರಷ್ಟು ನಿವ್ವಳ ಲಾಭ ದೊಂದಿಗೆ 178 ಕೋಟಿ ರು ಗಳಿಸಿದೆ.

ಸಂಸ್ಥೆಯ ಆದಾಯ Y-o-Yನಲ್ಲಿ ಶೇ 22 ರಷ್ಟು ಏರಿಕೆಯಾಗಿದ್ದು 1,631 ಕೋಟಿ ಬಂದಿದೆ.

ಮಂಗಳವಾರ ಬಿಎಸ್ ಇನಲ್ಲಿ ಟೆಕ್ ಮಹೀಂದ್ರಾ ಷೇರುಗಳು ಮೇಲ್ಮುಖವಾಗಿ ಚಲಿಸುತ್ತಿದೆ. ಮಧಾಹ್ನ12.35 ರ ವೇಳೆಗೆ 965.80 ರು ನಂತೆ ಶೇ 1.13 ರಷ್ಟು ಏರಿಕೆ ಕಂಡಿದೆ.

ಇದೇ ವೇಳೆ ಎನ್ ಎಸ್ ಇನಲ್ಲಿ 966.20 ರು ನಂತೆ ಶೇ 1.13 ರಷ್ಟು ಏರಿದೆ.

ಸೆಪ್ಟೆಂಬರ್ 30,2012ಕ್ಕೆ ಅನ್ವಯವಾಗುವಂತೆ ಟೆಕ್ ಮಹೀಂದ್ರಾ EPS ಮೌಲ್ಯ 23.2 ರು ನಷ್ಟಿತ್ತು. ಪ್ರಸಕ್ತ ತ್ರೈಮಾಸಿಕದಲ್ಲಿ ಹಚಿಸನ್ ಗ್ಲೋಬಲ ಸರ್ವೀಸರ್(HGS) ಸಂಸ್ಥೆಯನ್ನು 87.1 ಮಿಲಿಯನ್ ಡಾಲರ್ ಮೊತ್ತಕ್ಕೆ ಟೆಕ್ ಮಹೀಂದ್ರಾ ಖರೀದಿಸಿದ್ದನ್ನು ಘೋಷಿಸಿತು.

ಇದೇ ತ್ರೈಮಾಸಿಕ ಅವಧಿಯಲ್ಲಿ ಭಾರ್ತಿ ಗ್ರೂಪ್ ಕಂಪನಿಗೆ ಸೇರಿದ ಕಮ್ ವೀವಾ ಟೆಕ್ನಾಲಜೀಸ್ ಲಿಮಿಟೆಡ್ ನ ಶೇ 51 ರಷ್ಟು ಷೇರನ್ನು ಟೆಕ್ ಮಹೀಂದ್ರಾ ತನ್ನದಾಗಿಸಿಕೊಂಡಿದೆ.

'ಯುಕೆ, ಐರ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿನ ಗ್ರಾಹಕರ ಮೇಲೆ ಹಿಡಿತ ಸಾಧಿಸಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಸೇವೆ ಒದಗಿಸುವುದು ನಮ್ಮ ಮೊದಲ ಆದ್ಯತೆ, ಇದರಿಂದ ಮಾರುಕಟ್ಟೆ ವಿಸ್ತರಣೆಯೂ ಸಾಧ್ಯ' ಎಂದು ಕಾರ್ಯಕಾರಿ ಉಪಾಧ್ಯಕ್ಷ ವಿನೀತ್ ನಾಯರ್ ಹೇಳಿದ್ದಾರೆ.

'ನಮ್ಮಲ್ಲಿರುವ ಮಾನವ ಸಂಪನ್ಮೂಲ ಸಮರ್ಥವಾಗಿ ಬಳಕೆ ಮಾಡಲು ಯೋಜನೆ ಸಿದ್ಧವಾಗಿದೆ. ಜೊತೆಗೆ 5 ರಿಂದ 10 ಸಾವಿರ ಉದ್ಯೋಗಿಗಳ ನೇಮಕಾತಿ ಸಾಧ್ಯತೆ ಇದೆ' ಎಂದು ನಾಯರ್ ಹೇಳಿದ್ದಾರೆ. ಸದ್ಯಕ್ಕೆ ಎರಡು ಕಂಪನಿಗಳನ್ನು ಸೇರಿಸಿ 75,000 ಉದ್ಯೋಗಿಗಳಿದ್ದಾರೆ.

ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆಯ ಭಾಗವಾಗಿರುವ ಟೆಕ್ ಮಹೀಂದ್ರಾ ಸಂಸ್ಥೆ ಸರ್ಕಾರಿ ಹರಾಜಿನಲ್ಲಿ ಸತ್ಯಂ ಸಂಸ್ಥೆಯನ್ನು 2009ರಲ್ಲಿ ಖರೀದಿಸಿತ್ತು. ಸತ್ಯಂನ ಸ್ಥಾಪಕ ಸಿಇಒ ರಾಮಲಿಂಗರಾಜು ಐಟಿ ಲೋಕ ಬೆರಗಾಗುವಂಥ ಹಗರಣಕ್ಕೆ ಸಂಸ್ಥೆಯನ್ನು ದೂಡಿದ್ದರು.

English summary
Tech Mahindra, India's sixth largest software exporter reported its audited consolidated financial results for the second quarter ended September 30th, 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X