ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿಗೆ ಮೊಯ್ಲಿ ಕೊಡುಗೆ: ಸಿಲಿಂಡರ್ ಸಂಖ್ಯೆ ಹೆಚ್ಚಳ?

By Srinath
|
Google Oneindia Kannada News

lpg-cylinders-supply-may-be-increased-to-9-v-moily
ಬೆಂಗಳೂರು, ನ.3: ಅಡುಗೆ ಅನಿಲ ಸಿಲಿಂಡರ್ ಸಂಖ್ಯೆಯನ್ನು 6/12ಕ್ಕೆ ಸೀಮಿತಗೊಳಸಿರುವುದು ಮಹಿಳೆಯರಿಗೆ ಸಂಕಷ್ಟ ತಂದಿದೆ ಎಂಬುದನ್ನು ನೂತನ ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯ್ಲಿ ಒಪ್ಪಿಕೊಂಡಿದ್ದಾರೆ. ಹಾಗಾಗಿ, ಸಿಲಿಂಡರುಗಳ ಮಿತಿಯನ್ನು ಹಾಲಿ 6ರಿಂದ 9ಕ್ಕೆ ಏರಿಸಲು ಕೇಂದ್ರ ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಅವರು ಶುಕ್ರವಾರ ಹೇಳಿದ್ದಾರೆ.

'ಇದು ತೈಲ ಕಂಪನಿಗಳ ಅಂಕ ತಪ್ಪಿದ ಅಂಕಗಣಿತ. ವರ್ಷಕ್ಕೆ ಸರಾಸರಿ 6 ಸಾಕಾದೀತು ಎಂದು ತಪ್ಪು ಲೆಕ್ಕಾಚಾರ ಹಾಕಿರಬಹುದು. ಇಲ್ಲಿ ರಸಾಯನ ಶಾಸ್ತ್ರ ಕೆಲಸ ಮಾಡಿಲ್ಲ' ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಮೊಯ್ಲಿ ವಿಶ್ಲೇಷಿಸಿದ್ದಾರೆ.

AICC ವಕ್ತಾರರೂ ಆದ ಮೊಯ್ಲಿ ಸುಳಿವು ನೀಡಿರುವಂತೆ LPG ಸಿಲಿಂಡರ್ ಮಿತಿಯನ್ನು 9ಕ್ಕೆ ಏರಿಸುವ ವಿಷಯವು ಇದೇ 9ರಂದು ಸೂರಜ್‌ಕುಂಡ್‌ನಲ್ಲಿ ನಡೆಯಲಿರುವ ಕಾಂಗ್ರೆಸ್ ಪ್ರಮುಖರ ಸಮಾವೇಶದಲ್ಲಿಯೂ ಚರ್ಚೆಯಾಗುವ ನಿರೀಕ್ಷೆ ಇದೆ.

'ವಾಸ್ತವವಾಗಿ, LPG ಮಿತಿ ಏರಿಕೆ ನಿರ್ಧಾರವು ಸಂಪೂರ್ಣವಾಗಿ ತೈಲ ಕಂಪನಿಗಳಿಗೆ ಬಿಟ್ಟಿದ್ದು. ಆದಾಗ್ಯೂ ಇದರಿಂದ ಕೇಂದ್ರ ಸರ್ಕಾರ ಭಾರಿ ಟೀಕೆಗೆ ಒಳಗಾಗಿದೆ. ಆದ್ದರಿಂದ ಸಬ್ಸಿಡಿಸಹಿತ ಗೃಹ ಬಳಕೆ LPG ಸಿಲಿಂಡರುಗಳ ಮಿತಿಯನ್ನು 9ಕ್ಕೆ ಹೆಚ್ಚಿಸಲು ಗಂಭೀರ ಚಿಂತನೆ ನಡೆಸಿದೆ' ಎಂದು ಅವರು ತಿಳಿಸಿದ್ದಾರೆ.

ಮುಖ್ಯವಾಗಿ, ಗುಜರಾತ್‌ ಚುನಾವಣೆಗಳೂ ಸೇರಿದಂತೆ ದೇಶದಲ್ಲಿ ಹಲವಾರು ವಿಧಾನಸಭೆಗಳಿಗೆ ಚುನಾವಣೆಗಳು ನಡೆಯಲಿದೆ. ಇದಲ್ಲದೆ, 2014ರ ಸಾರ್ವತ್ರಿಕ ಚುನಾವಣೆಯೂ ಎದುರಿಗೇ ಧುತ್ತನೆ ನಿಂತಿದೆ. ಈ ಸಂದರ್ಭದಲ್ಲಿ ಸಿಲಿಂಡರ್‌ ವಿಷಯ ಹೊಡೆತ ನೀಡಬಹುದು ಎಂದು ಕಾಂಗ್ರೆಸ್‌ ಪಕ್ಷದಲ್ಲೇ ಆತಂಕ ವ್ಯಕ್ತವಾಗುತ್ತಿದೆ. ದೆಹಲಿಯಲ್ಲಿ ಈ ಹಿಂದೆ ಈರುಳ್ಳಿ ಬೆಲೆಯೇರಿಕೆಯೇ ಚುನಾವಣೆಯಲ್ಲಿ ಪ್ರಧಾನ ವಿಷಯವಾಗಿ ಬಿಜೆಪಿ ಪೆಟ್ಟು ತಿಂದಿತ್ತು.

ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರೋರಾತ್ರಿ ಸಬ್ಸಿಡಿರಹಿತ ಸಿಲಿಂಡರಿನ ದರವನ್ನು 26 ರೂ. ಹೆಚ್ಚಿಸಲು ಮುಂದಾಗಿದ್ದ ಕೇಂದ್ರ ಸರ್ಕಾರ, ಈಗ ಸಿಲಿಂಡರ್ ಮಿತಿಯನ್ನು 9 ಕ್ಕೆ ಹೆಚ್ಚಿಸಿ, ಜನಪರ ಎನಿಸಿಕೊಳ್ಳಲು ಹವಣಿಸುತ್ತಿದೆ ಎಂದು ಹೇಳಲಾಗಿದೆ.

ಸೆಪ್ಟೆಂಬರ್‌ನಲ್ಲಿ ಸಬ್ಸಿಡಿ ದರದ ಸಿಲಿಂಡರ್‌ಗಳನ್ನು 2 ತಿಂಗಳಿಗೆ ಒಂದರಂತೆ ವರ್ಷಕ್ಕೆ ಆರು ಮಾತ್ರ ಪೂರೈಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿತ್ತು. ಹೆಚ್ಚುವರಿಯಾಗಿ ಸಿಲಿಂಡರ್ ಬೇಕಿದ್ದರೆ ಸಬ್ಸಿಡಿ ರಹಿತ ದರ ನೀಡಿ ಖರೀದಿಸುವಂತೆಯೂ ಹೇಳಿತ್ತು. ಸದ್ಯ ನವದೆಹಲಿಯಲ್ಲಿ ಸಬ್ಸಿಡಿ ದರದ ಸಿಲಿಂಡರ್ ದರ ರೂ 410.12 ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ದರ ರೂ 895.50 ರೂಪಾಯಿ ಇದೆ.

English summary
Domestic LPG Cylinders supply may be increased to 9 - Veerappa Moily. Admitting that the decision to limit supply of subsidised cooking gas (LPG) cylinders to six a year has caused hardships, Petroleum Minister M Veerappa Moily today said it is for the public sector oil firms to take a call on raising the cap.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X