ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋಗೆ ನಿರೀಕ್ಷೆ ಮೀರಿ 1611 ಕೋಟಿ ಲಾಭ

By Mahesh
|
Google Oneindia Kannada News

Wipro Q2 numbers beats estimates; net profit at Rs 1611 crores
ಬೆಂಗಳೂರು,ನ.2: ವಿಪ್ರೋ ಸಂಸ್ಥೆ ತನ್ನ ಎರಡನೇ ತ್ರೈಮಾಸಿಕ ವರದಿಯಲ್ಲಿ ಭರ್ಜರಿ ಇಳುವರಿ ಕಂಡಿದೆ. ಶುಕ್ರವಾರ(ನ.2) ಪ್ರಕಟವಾದ ತ್ರೈಮಾಸಿಕ ವರದಿಯಲ್ಲಿ ವರ್ಷದಿಂದ ವರ್ಷಕ್ಕೆ ನಿವ್ವಳ ಆದಾಯದಲ್ಲಿ ಶೇ 24 ರಷ್ಟು ಏರಿಕೆ ಕಂಡು 1,610.6 ಕೋಟಿ ರು ಗಳಿಸಿದೆ.

ಎರಡನೇ ತ್ರೈಮಾಸಿಕದಲ್ಲಿ ಒಟ್ಟು ಆದಾಯ ಶೇ 17 ರಷ್ಟು ಏರಿಕೆ ಕಂಡು 1,094.37 ಕೋಟಿ ರು ಗಳಿಸಿದೆ. ದೇಶದ ಮೂರನೇ ಅತಿದೊಡ್ಡ ಐಟಿ ಕಂಪನಿ ವಿಪ್ರೋ ತನ್ನ ಐಟಿ ಸರ್ವೀಸಸ್ ವ್ಯವಹಾರದಿಂದ ಸುಮಾರು 1,560 ಮಿಲಿಯನ್ ಡಾಲರ್ ನಿಂದ 1,590 ಮಿಲಿಯನ್ ಡಾಲರ್ ಆದಾಯ ಗಳಿಸುವ ನಿರೀಕ್ಷೆ ಹೊಂದಿದೆ.

ನಿರೀಕ್ಷೆಗೆ ತಕ್ಕ ಪ್ರತಿಫಲ ಸಿಕ್ಕಿದೆ. ಗ್ರಾಹಕರು ಹಾಗೂ ಉದ್ಯೋಗಿಗಳ ನಡುವೆ ನಿರಂತರ ಸಂಪರ್ಕ ಈ ಸಾಧನೆಗೆ ಪೂರಕವಾಗಿದೆ. ಕ್ಲೌಡ್, ಮೊಬಿಲಿಟಿ, ಅನಾಲಿಟಿಕ್ಸ್ ಹಾಗೂ ಸಾಮಾಜಿಕ ಮಾಧ್ಯಮ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮುಂದುವರೆಯಲಿದೆ ಎಂದು ವಿಪ್ರೋ ಸಂಸ್ಥೆಯ ಸಿಎಫ್ ಒ ಸುರೇಶ್ ಸೇನಾಪತಿ ಹೇಳಿದ್ದಾರೆ.

ಎರಡನೇ ತ್ರೈಮಾಸಿಕದಲ್ಲಿ ಐಟಿ ಸರ್ವೀಸಸ್ ವಿಭಾಗದಲ್ಲಿ ಸುಮಾರು 2,017 ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ, ಸೆಪ್ಟೆಂಬರ್ 30,2012ರ ಗಣತಿಯಂತೆ ವಿಪ್ರೋ ಸಂಸ್ಥೆ ಒಟು ಉದ್ಯೋಗಿಗಳ ಸಂಖ್ಯೆ 1,40,569 ನಷ್ಟಿದೆ.

ವಿಪ್ರೋ ಸಂಸ್ಥೆ ತನ್ನ ಮೊದಲ ತ್ರೈಮಾಸಿಕ ವರದಿ ಮಂಗಳವಾರ(ಜು.24, 2012) ಪ್ರಕಟಿಸಿದ ಬೆನ್ನಲ್ಲೇ ತನ್ನ ಉದ್ಯೋಗಿಗಳಿಗೆ ಶೇ 8ರಷ್ಟು ಸಂಬಳ ಏರಿಕೆ ಘೋಷಿಸಿದೆ.

ಜೂನ್ ತಿಂಗಳಿನಿಂದ ಅನ್ವಯವಾಗುವಂತೆ ಆನ್ ಸೈಟ್ ಉದ್ಯೋಗಿಗಳಿಗೆ ಶೇ 3 ರಷ್ಟು ಹಾಗೂ ಆಫ್ ಶೋರ್ ಉದ್ಯೋಗಿಗಳಿಗೆ ಶೇ 8 ರಷ್ಟು ಸಂಬಳ ಏರಿಕೆಯಾಗಲಿದೆ. ಮೊದಲ ಹಂತದ ಪ್ರಮೋಷನ್ ಹಾಗೂ ಇಂಕ್ರೀಮೆಂಟ್ ಗಳನ್ನು ನೀಡಲು ವಿಪ್ರೋ ಅರಂಭಿಸಿತ್ತು.

ಮುಂಬರುವ ಯುಎಸ್ ಚುನಾವಣೆ ಮೇಲೆ ಕಣ್ಣಿಟ್ಟಿರುವ ವಿಪ್ರೋ ಸಂಸ್ಥೆ, ಚುನಾವಣೆ ನಂತರ ಹೊರ ಗುತ್ತಿಗೆ ಕ್ಷೇತ್ರದಲ್ಲಿ ಉಂಟಾಗುವ ಬದಲಾವಣೆ ಬಗ್ಗೆ ನಿಗಾವಹಿಸಲಾಗುವುದು ಉದ್ಯೋಗ ಕೊರತೆ ಅನುಭವಿಸದಂತೆ ನೋಡಿಕೊಳ್ಳಲಾಗುವುದು ಎಂದು ಸಂಸ್ಥೆ ಉಪಾಧ್ಯಕ್ಷ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ ಪ್ರತೀಕ್ ಕುಮಾರ್ ಹೇಳಿದ್ದಾರೆ.

ಸ್ಥಳೀಯ ಉದ್ಯೋಗಿಗಳಿಗೆ ಆದ್ಯತೆ ಮೇರೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಆನ್ ಸೈಟ್ ಉದ್ಯೋಗಿಗಳಲ್ಲಿ ಶೇ 38 ರಷ್ಟು ಸ್ಥಳೀಯರಿದ್ದಾರೆ. H1B ಉದ್ಯೋಗಿಗಳಲ್ಲಿರುವ ಗೊಂದಲ ನಿವಾರಿಸಿ, ಕಾರ್ಯಕ್ಷಮತೆ ಹೆಚ್ಚಿಸಲಾಗುವುದು ಎಂದು ಕುಮಾರ್ ತಿಳಿಸಿದರು.

English summary
Wipro Ltd's Q2 numbers have come in ahead of expectations, with Q2 total revenues at Rs 106.57 billion, an increase of 17% YoY. The net income was placed at Rs 16.11 billion ($304 million), an increase of 24% YoY.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X