ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: ಎಸ್‌ಎಸ್‌ಎಲ್‌ಸಿ 2013 ಪರೀಕ್ಷೆ ವೇಳಾಪಟ್ಟಿ

By Srinath
|
Google Oneindia Kannada News

karnataka-kseeb-sslc-exam-2013-time-table-announced
ಬೆಂಗಳೂರು, ಅ.31 : ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. 2012-13ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಏಪ್ರಿಲ್ 1 ರಿಂದ 10ವರೆಗೂ ನಡೆಯಲಿವೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಡಿ. ವೆಂಕಟೇಶಯ್ಯ ಅವರು ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಪ್ರಶ್ನೆ ಪತ್ರಿಕೆ ಓದಲು ಪರೀಕ್ಷೆ ಆರಂಭಕ್ಕೆ ಮುನ್ನ 15 ನಿಮಿಷ ಕಾಲಾವಕಾಶವಿದೆ. ವೇಳಾಪಟ್ಟಿ ಹೀಗಿದೆ:

* ಏ. 1 : ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಹಿಂದಿ, ಉರ್ದು, ಸಂಸ್ಕೃತ, ಇಂಗ್ಲಿಷ್‌ ಹಾಗೂ ಮರಾಠಿ.
* ಏ. 3 : ಭಾರತೀಯ ರಾಜ್ಯಶಾಸ್ತ್ರ ಮತ್ತು ಪೌರನೀತಿ (ಬೆಳಗ್ಗೆ) , ಕರ್ನಾಟಕ ಸಂಗೀತ/ ಹಿಂದೂಸ್ತಾನಿ ಸಂಗೀತ (ಮಧ್ಯಾಹ್ನ)
* ಏ. 5 : ದ್ವಿತೀಯ ಭಾಷೆಗಳಾದ ಇಂಗ್ಲಿಷ್‌ ಹಾಗೂ ಕನ್ನಡ.
* ಏ. 6 : ಎಲಿಮೆಂಟ್ಸ್‌ ಆಫ್ ಇಂಜಿನಿಯರಿಂಗ್‌, ಎಲಿಮೆಂಟ್ಸ್‌ ಆಫ್ ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್‌, ಎಲಿಮೆಂಟ್ಸ್‌ ಆಫ್ ಕಂಪ್ಯೂಟರ್‌ ಸೈನ್ಸ್‌ ಹಾಗೂ ಭಾರತೀಯ ಅರ್ಥಶಾಸ್ತ್ರ (ಬೆಳಗ್ಗೆ) ಹಾಗೂ ಇಂಜಿನಿಯರಿಂಗ್‌ ಡ್ರಾಯಿಂಗ್‌ (ಮಧ್ಯಾಹ್ನ)
* ಏ. 8 : ಗಣಿತ ಹಾಗೂ ಭಾರತೀಯ ಸಮಾಜಶಾಸ್ತ್ರ.
* ಏ. 9 : ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್‌, ಅರೇಬಿಕ್‌, ಪರ್ಷಿಯನ್‌, ಉರ್ದು, ಸಂಸ್ಕೃತ ಹಾಗೂ ಕೊಂಕಣಿ.
* ಏ. 10 : ಸಮಾಜ ವಿಜ್ಞಾನ.

English summary
Karnataka KSEEB SSLC Exam-2013 Time table announced. SSLC Exams will begin on April 1, 2013 and ends on April 10th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X