ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಯೋಕಾನ್ ಆದಾಯ ಶೇ 19 ರಷ್ಟು ಏರಿಕೆ

By Mahesh
|
Google Oneindia Kannada News

Biocon Q2 net up 4.6%; stock trades higher
ಬೆಂಗಳೂರು, ಅ.31: ಬೆಂಗಳೂರು ಮೂಲದ ಪ್ರಮುಖ ಬಯೋ ಟೆಕ್ನಾಲಜಿ ಸಂಸ್ಥೆ ಬಯೋಕಾನ್ ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಬುಧವಾರ (ಅ.31) ಪ್ರಕಟಿಸಿದೆ.

ನಿರೀಕ್ಷೆಗೆ ತಕ್ಕ ಫಲ ಪಡೆದಿರುವ ಬಯೋಕಾನ್ ಸಂಸ್ಥೆ ಶೇ 4.6 ರಷ್ಟು ನಿವ್ವಳ ಲಾಭದಲ್ಲಿ ಏರಿಕೆ ಕಂಡಿದೆ.

ಸೆಪ್ಟೆಂಬರ್ 30, 2012ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಸುಮಾರು 90 ಕೋಟಿ ರು ನಷ್ಟು ನಿವ್ವಳ ಲಾಭ ಪಡೆದಿದೆ.

ಕಿರಣ್ ಮಜುಂದಾರ್ ಶಾ ಅವರ ಸಂಸ್ಥೆಯ ಆದಾಯ ಶೇ 19 ರಷ್ಟು ಏರಿಕೆ ಕಂಡು 642 ಕೋಟಿ ರು ಗಳಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 538 ಕೋಟಿ ರು ಮಾತ್ರ ಗಳಿಸಿತ್ತು.

ಬಯೋಕಾನ್ ಷೇರುಗಳು ಬಿಎಸ್ ನಲ್ಲಿ ಬುಧವಾರದ ಮಾರುಕಟ್ಟೆ ಮುಕ್ತಾಯದ ವೇಳೆಗೆ 266.70 ರು ನಂತೆ ಶೇ 2.99 ರಷ್ಟು ಏರಿಕೆ ಕಂಡಿತ್ತು.

ಎನ್ ಎಸ್ ಇನಲ್ಲಿ 265.50 ರು ನಂತೆ ಶೇ 2.43 ರಷ್ಟು ಏರಿತ್ತು.

ನಾವು ನಮ್ಮ ಸಂಸ್ಥೆಯಿಂದ ಈ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಿದ್ದೆವು. ಅರ್ಧ ಆರ್ಥಿಕ ವರ್ಷದ ಹೊತ್ತಿಗೆ ಶೇ 23 ರಷ್ಟು ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಕೈಗೂಡುತ್ತಿದೆ.

ರಫ್ತು ಹಾಗೂ ಕಂಪನಿ ವಿಸ್ತರಣೆ ಬಗ್ಗೆ ಹೆಚ್ಚಿನ ಗಮನಹರಿಸಲಾಗುವುದು ಎಂದು ಬಯೋಕಾನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಚೇರ್ಮನ್ ಕಿರಣ್ ಮಜುಂದಾರ್ ಶಾ ಅವರು ಹೇಳಿದ್ದಾರೆ.

ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಸಂಸ್ಥೆಯ ನಿವ್ವಳ ಮಾರಾಟ 59 ಕೋಟಿ ರು ನಂತೆ ಶೇ 17.22ರಷ್ಟು ಏರಿಕೆ ಕಂಡಿದೆ.

ಬಯೋಕಾನ್ ನ ಸಬ್ಸಿಡಿ ಸಂಸ್ಥೆ ಸಿಂಜಿನ್ ನಲ್ಲಿ 125 ಕೋಟಿ ರು ಹೂಡಲು ಜಿಇ ಕ್ಯಾಪಿಟಲ್ ಮುಂದೆ ಬಂದಿದೆ. 2012 ರ ಅರ್ಥಿಕ ವರ್ಷದಲ್ಲಿ ಸಿಂಜಿನ್ ಸಂಸ್ಥೆ ಸುಮಾರು 400 ಕೋಟಿ ರು ದಾಖಲಿಸಿದೆ. 250 ಕೋಟಿ ರು ಮಾರಾಟ ಕಂಡಿದೆ.

ಬಯೋಕಾನ್ ಸಂಸ್ಥೆಯ ಸಂಶೋಧನಾ ಸಬ್ಸಿಡಿ ಸಂಸ್ಥೆ ಸಿಂಜಿನ್ ನಲ್ಲಿ ಸುಮಾರು 1,500 ವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಹಮದಾಬಾದಿನಲ್ಲಿ ಬೃಹತ್ ಉತ್ಪಾದನಾ ಘಟಕ ಆರಂಭಿಸಲು ಕಿರಣ್ ಮುಜುಂದಾರ್ ಶಾ ಕಂಪನಿ ಮನಸ್ಸು ಮಾಡಿದೆ ಎಂದು ನರೇಂದ್ರ ಮೋದಿ ನಾಡಿನಿಂದ ಸುದ್ದಿ ಹಬ್ಬಿತ್ತು.

ಡಯಾಬಿಟಿಸ್, ಅಂಕಾಲಜಿ, ನೆಫ್ರಾಲಜಿ, ಕಾರ್ಡಿಯಾಲೊಜಿ, ಇನ್ಮೂನೊಥೆರಪಿ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 1555.85 ಕೋಟಿ ಮೌಲ್ಯದ ಬಯೋಕಾನ್ ಕಂಪನಿ ಮನವಿಗೆ ಸಿಎಂ ಮೋದಿ ಅವರು ಕೂಡಾ ಒಪ್ಪಿಗೆ ನೀಡುವ ಸಾಧ್ಯತೆ ಹೆಚ್ಚಿದೆ ಎಂಬ ಸುದ್ದಿಯಿದೆ.

English summary
Biocon Ltd, Bangalore based company reported a 4.6% increase in its net profit to Rs 90 crore for the quarter ended September 30, 2012. The company's revenue rose by 19% to Rs 642 crore against Rs 538 crore in the corresponding period of previous year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X