• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಿಂಗಳ ಮಗು ನಡೆಯುತ್ತಂತೆ, ಬೆಂಕಿ ಉಗುಳುತ್ತಂತೆ!

By Prasad
|

ಲಂಡನ್, ಅ. 30 : ಹುಟ್ಟಿ ಇನ್ನೂ ತಿಂಗಳು ಆಗಿದೆ ಅಷ್ಟೆ. ಆದರೆ ಈ ಗಂಡುಮಗು ಎಲ್ಲರಂತೆ ಎದ್ದು ಅಡ್ಡಾಡುತ್ತದಂತೆ, ದೊಡ್ಡವರಂತೆ ಮಾತನಾಡಲು ಯತ್ನಿಸುತ್ತದಂತೆ. ಭಯಾನಕವಾದ ಎರಡು ಕಣ್ಣು ಹೊಂದಿರುವುದು ಮಾತ್ರವಲ್ಲ, ಬೆಂಕಿಯನ್ನು ಕೂಡ ಉಗುಳುತ್ತದೆಯಂತೆ!

ಹೀಗೆಂದು ಆ ಮಗುವನ್ನು ಹುಟ್ಟಿಸಿದ ಕಾಂಬೋಡಿಯಾದ ಅನಾ ಫರಿಯಾ ಸ್ಯಾಂಟೋಸ್ ಎಂಬ ತಾಯಿಯೇ ಹೇಳಿಕೊಂಡಿದ್ದಾಳೆ. ಈ ಮಗು ಜನ್ಮ ತಾಳಿದ್ದು ಸೆಪ್ಟೆಂಬರ್ 28ರಂದು ಕೆರಿಬಿಯನ್ ಕರಾವಳಿ ಬಳಿಯ ಲೋರಿಕಾ ಎಂಬ ಊರಿನಲ್ಲಿ. ಮಗುವಿನ ಹುಟ್ಟು ಆಕೆಗೆ ಸಂತಸವೇನೂ ತರಲಿಲ್ಲ. ವಿಚಿತ್ರವಾಗಿದ್ದ ಮಗು 'ಮಾರುವೇಶದಲ್ಲಿ ಬಂದ ಭೂತ' ಎಂದೆಲ್ಲ ಜನರು ಹಂಗಿಸುತ್ತಾರೆ ಎಂದು ಐದು ಮಕ್ಕಳ ತಾಯಿಯಾಗಿರುವ ಆಕೆ ಆತಂಕಗೊಂಡಿದ್ದಳು.

1976ರಲ್ಲಿ ಬಿಡುಗಡೆಯಾಗಿದ್ದ 'ದಿ ಓಮೆನ್' ಚಿತ್ರದಲ್ಲಿನ ಮಗುವಿನಂತೆ ಈ ಮಗು ಕೂಡ ಎದ್ದುನಿಂತು ಮಗು ನಡೆಯುತ್ತದೆ. ದೊಡ್ಡವರ ಹಾಗೆ ತನ್ನ ಭಾಷೆಯಲ್ಲಿ ಹರಟೆ ಹೊಡೆಯುತ್ತದೆ. ಮನೆಯ ಹಿಂದೆ, ಮಂಚದ ಕೆಳಗಡೆ, ವಾಷಿಂಗ್ ಮಷೀನ್, ಫ್ರಿಜ್, ಸೂಟ್ಕೇಸ್ ಒಳಗಡೆ ಹೋಗಿ ಬಚ್ಚಿಟ್ಟುಕೊಳ್ಳುತ್ತದೆ ಎಂದು ಮಗುವಿನ ತಾಯಿ ಹೇಳಿರುವುದಾಗಿ ಆರ್‌ಸಿಎನ್ ರೇಡಿಯೋ ಬಿತ್ತರಿಸಿರುವುದಾಗಿ ಡೇಲಿ ಮೇಲ್ ಪ್ರಕಟಿಸಿದೆ.

ಅಕ್ಕಪಕ್ಕದ ಮನೆಯವರು ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ. ಕೆಟ್ಟ ಭೂತದಂತಿರುವ ಮಗು ಆಗಾಗ ಬೆಂಕಿ ಉಗುಳುತ್ತದೆ ಎಂದು ಹೇಳಿದ್ದಾರೆ. ಮಗು ಹಾಕಿಕೊಂಡಿರುವ ಬಟ್ಟೆಯ ಮೇಲೆ, ಅಡಗಿಕೊಳ್ಳುತ್ತಿದ್ದ ಹಾಸಿಗೆ ಸುಟ್ಟಿರುತ್ತದೆ ಎಂದೂ ಅವರು ಹೇಳಿದ್ದಾರೆ.

ಈ ಎಲ್ಲ ಬೆಳವಣಿಗೆಗಳು ಸ್ಯಾಂಟೋಸ್ ಮತ್ತು ಆಕೆಯ ಗಂಡ ಟ್ಯಾಕ್ಸಿ ಡ್ರೈವರ್ ಆಗಿರುವ ಆಸ್ಕರ್ ಪೆಲೆಸಿಯಾ ಲೋಪೆಜ್‌ರನ್ನು ಸಂಕಷ್ಟಕ್ಕೆ ದೂಡಿವೆ. ಅವರ ಮೇಲೆ ಹಲ್ಲೆಗಳಾಗಿವೆ, ಅವರ ಮನೆ ಮೇಲೆ ಕಲ್ಲುಗಳನ್ನು ತೂರಲಾಗಿದೆ. ತಮಗೂ ಆ ಮಗುವಿನಿಂದ ಕೆಡಕಾಗಬಹುದು ಎಂದು ನೆರೆಹೊರೆಯವರು ಆ ದಂಪತಿಗಳನ್ನು ಮನೆಬಿಟ್ಟು ತೊಲಗುವಂತೆ ಪೀಡಿಸುತ್ತಿದ್ದಾರೆ.

ಆದರೆ, ವೈದ್ಯರು ಈ ವಿದ್ಯಮಾನವನ್ನು ನಂಬಲು ತಯಾರಿಲ್ಲ. ಯಾರಾದರೂ ಮಾಟಮಂತ್ರಿ ಮಾಡಿಸಿರಬಹುದು ಎಂಬ ವ್ಯಾಖ್ಯಾನವನ್ನು ನಂಬಲು ಕಾಂಬೋಡಿಯನ್ ಕುಟುಂಬ ಕಲ್ಯಾಣ ಇನ್‌ಸ್ಟಿಟ್ಯೂಟ್, ನ್ಯಾಷನಲ್ ಪೊಲೀಸರು ಮತ್ತು ಕ್ಯಾಥೋಲಿಕ್ ಚರ್ಚ್ ಪಾದ್ರಿಗಳು ಕೂಡ ತಯಾರಿಲ್ಲ. ಬದಲಾಗಿ ಮಗುವಿನ ಮೇಲೆ ಹಲ್ಲೆ ಮಾಡಿದ್ದರಿಂದ ಈ ವಿಪರೀತಗಳು ಕಾಣಿಸಿಕೊಂಡಿರಬಹುದು ಎಂದು ಹೇಳಲಾಗಿದೆ.

ಈ ವಿಸ್ಮಯದ ರಹಸ್ಯವನ್ನು ಭೇದಿಸಲು ಮನಶ್ಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು, ನರರೋಗ ತಜ್ಞರು, ವಕೀಲರು, ವೈದ್ಯರು ಮತ್ತು ಪೊಲೀಸರ ತಂಡವನ್ನು ರಚಿಸಲಾಗಿದ್ದು, ಮಗುವಿನ ರಕ್ಷಣೆ ಪ್ರಥಮ ಆದ್ಯತೆ ನೀಡಲಾಗುವುದು ಎನ್ನಲಾಗಿದೆ. ಮಗು ಅಸಾಮಾನ್ಯ ಬೆಳವಣಿಗೆ ಮತ್ತು ವಿಚಿತ್ರ ಲಕ್ಷಣಗಳನ್ನು ಹೊಂದಿರಬಹುದು, ಆದರೆ ಆ ಮಗುವನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದು ಸರಿಯೆ? (ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A one-month-old 'devil' baby is said to have started walking, talk like adult, as claimed by mother of the baby. Not only this, few people say the 'ghost' child is breathing fire like wicked spirit. Can a normal child do like this?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more