ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲಿ ನಿಮ್ಮ ಶೂಗಳನ್ನು ಡ್ರೈಕ್ಲೀನ್ ಮಾಡಿಕೊಡಲಾಗುತ್ತದೆ

By Prasad
|
Google Oneindia Kannada News

Shoevival - dry clean your shoes here
ಪ್ರತಿದಿನ ನಿಮ್ಮ ಪಾದರಕ್ಷೆ(ಬೂಟು)ಗೆ ಪಾಲಿಶ್ ಹಾಕ್ತೀರಾ? ಎಷ್ಟು ದಿನಗಳಿಗೊಮ್ಮೆ, ತಿಂಗಳಿಗಳಿಗೊಮ್ಮೆ, ವರ್ಷಗಳಿಗೊಮ್ಮೆ ಬೂಟನ್ನು ಸ್ವಚ್ಛ ಮಾಡುತ್ತೀರಿ? ಅಥವಾ ಮಾಡೋದೆ ಇಲ್ವಾ? ಶೂ ತೆಗೆದ್ರೆ ಸಾಕು ಗಬ್ಬು ನಾರುತ್ತಿದೆಯಾ? ಸಾವಿರಗಟ್ಟಲೆ ಬೆಲೆತೆತ್ತು ತಂದ ಪಾದರಕ್ಷೆ ಆರೈಕೆಯಿಲ್ಲದೆ ಕಳೆಗುಂದುತ್ತಿದೆಯಾ? ಸೋಲ್ ಕಿತ್ತುಬಂದಿದ್ರೂ ಹಾಗೇ ಅಡ್ಡಾಡ್ತಾ ಇದ್ದೀರಾ? ಅಯ್ಯೋ ಪಾಪ!

ಇಂದಿನ ಜಮಾನಾದಲ್ಲಿ ನಮ್ಮ ಭಾರತದಲ್ಲಿ ಇಂಥ ಪ್ರಶ್ನೆಗಳನ್ನು ಕೇಳುವುದೇ ಪಾಪ. ಕೇಳಿದ್ರೂ ಬೇಜಾರು ಮಾಡ್ಕೋಬೇಡಿ. ಯಾಕಂದ್ರೆ, ಇಂಥ ಪ್ರಶ್ನೆಗಳನ್ನು ಕೇಳಿಕೊಂಡು ಅದಕ್ಕೆ ಪರಿಹಾರಗಳನ್ನೂ ಕಂಡುಕೊಳ್ಳುವ ಸಂದರ್ಭ ಈಗ ಬಂದಿದೆ. ಹೊಲಸು ನಾರುತ್ತಿರುವ ಬೂಟನ್ನು ಸ್ವಚ್ಛವಾಗಿ ತೊಳೆದು ಕ್ಲೀನ್ ಮಾಡಿ, ಪಾಲಿಶ್ ಹಚ್ಚಿ, ಹೊಸದರಂತೆ ಮತ್ತೆ ಲಕಲಕ ಹೊಳೆಯುವಂತೆ ಮಾಡುವ 'ಶೂವೈವಲ್' ಎಂಬ ಶೂ ಲಾಂಡ್ರಿ ನಮ್ಮ ಬೆಂಗಳೂರಿನಲ್ಲಿಯೇ ಆರಂಭವಾಗಿದೆ.

ಇಂಥದೊಂದು ವಿಚಿತ್ರ ಬಿಸಿನೆಸ್ಸಿಗೆ ಕೈಹಾಕಿದ್ದು ನಮ್ಮ ಬೆಂಗಳೂರಿನ ಕನ್ನಡದ ಹುಡುಗ ಶಶಾಂಕ್ ಭಾರದ್ವಾಜ್. ಒಂದು ಸಿಎನ್‌ಬಿಸಿ ಖಾಸಗಿ ಟಿವಿ ಚಾನಲ್ಲಿನಲ್ಲಿ ಪ್ರೋಗ್ರಾಂ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದ ಅವರು ಕೆಲಸಕ್ಕೆ ಜೈ ಎಂದು ಹೇಳಿ ಈ ಉದ್ಯಮ ಆರಂಭಿಸಿದ್ದಾರೆ. ಬೆಂಗಳೂರಿನ ಜಯನಗರ 4ನೇ ಬ್ಲಾಕಿನಲ್ಲಿರುವ ಪೊಲೀಸ್ ಠಾಣೆ ಎದುರು (ಮಯ್ಯಾಸ್ ಬಳಿ) ಶೂವೈವಲ್ ಶಾಪನ್ನು ತೆರೆದಿದ್ದಾರೆ.

2011ರ ಅಕ್ಟೋಬರ್ 1ರಂದು ಕುಂಬಳಕಾಯಿ ಒಡೆಯುವುದರ ಮುಖಾಂತರ ವಿದ್ಯಾರಣ್ಯಪುರದ ಬಿಇಎಲ್ ಲೇಔಟಲ್ಲಿರುವ ಮನೆಯಲ್ಲಿ ಆರಂಭಿಸಿದ್ದರು. ಚಿತ್ರಾ ಅಂಬರೀಶ್ ಎಂಬುವವರೊಂದಿಗೆ ಶೂ ಲಾಂಡ್ರಿ ಆರಂಭಿಸಿದ್ದಾಗಿ ಶಶಾಂಕ್ ಭಾರದ್ವಾಜ್ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು. ಶಶಾಂಕ್ ಇದಕ್ಕಾಗಿ ಬಂಡವಾಳ ಹೂಡಿದ್ದು ಬರೀ 6 ಲಕ್ಷ ರು.ಗಳು ಮಾತ್ರ. ಶೂ ಇರಲಿ, ಚಪ್ಪಲಿ ಇರಲಿ, 500 ರು. ನೀಡಿರಲಿ, 35 ಸಾವಿರ ರು. ತೆತ್ತಿರಲಿ ಸ್ವಚ್ಛಗೊಳಿಸಲು ಮತ್ತು ರಿಪೇರಿಗೆ ಗ್ರಾಹಕರು ನೀಡಬೇಕಾಗಿರುವುದು ಕೇವಲ 160 ರು. ಮಾತ್ರ.

ತಮ್ಮ ಪಾದರಕ್ಷೆಯನ್ನು ನೀಟಾಗಿ ಇಟ್ಟುಕೊಳ್ಳದಷ್ಟು ಸೊಂಬೇರಿಗಳಾ ನಮ್ಮ ಬೆಂಗಳೂರಿನವರು ಎಂದು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳಬೇಡಿ. ಈಗಾಗಲೆ ಸಾವಿರಾರುಗಟ್ಟಲೆ ದುಡ್ಡು ಸುರಿದು ತಂದಿರುವ ಅನೇಕರು ಇಷ್ಟೇಇಷ್ಟು ಕೊಳಕೂ ಇರದಂತೆ ಕ್ಲೀನ್ ಮಾಡಿಸಿಕೊಳ್ಳಲು, ಶೂ ಪಾಲಿಶ್ ಮಾಡಿಸಿಕೊಳ್ಳಲು ಸಾಲುಸಾಲು ನಿಂತಿದ್ದಾರೆ. ಇವರಿಗೇನು ಹುಚ್ಚೆ ಎಂದು ಹಣೆಹಣೆ ಜಜ್ಜಿಕೊಳ್ಳಬೇಡಿ.

ಶಶಾಂಕ್ ಏನು ಹೇಳ್ತಾರಂದ್ರೆ, ಪಾದರಕ್ಷೆಯನ್ನು ಶೂ ಲಾಂಡ್ರಿಗೆ ನೀಡಲು ಜನರು ಸೊಂಬೇರಿಗಳೂ ಅಲ್ಲ ಅವರಿಗೆ ಹುಚ್ಚೂ ಹಿಡಿದಿಲ್ಲ. ಆದರೆ, ತಮ್ಮ ಬೂಟನ್ನು ತಾವೇ ಕ್ಲೀನಾಗಿ ಇಷ್ಟುಕೊಳ್ಳದಷ್ಟು ಬಿಜಿಯಾಗಿಬಿಟ್ಟಿದ್ದಾರೆ. ಅಸಲಿಗೆ, ತಾವೇ ತಮ್ಮ ಪಾದರಕ್ಷೆಗಾಗಿ ಶೂ ಲಾಂಡ್ರಿ ಹುಡುಕುತ್ತಿದ್ದಾಗ, ಬೆಂಗಳೂರಿನಲ್ಲಿ ಯಾವುದೇ ಲಾಂಡ್ರಿ ಇರದಿದ್ದರಿಂದ ತಾವೇ ಇದನ್ನು ಆರಂಭಿಸಬೇಕಾಯಿತು ಎಂದು ಅವರು ಹೇಳುತ್ತಾರೆ.

ಶೂ ಕ್ಲೀನಿಂಗ್ ಹೇಗೆ? : ಶೂ ಕ್ಲೀನ್ ಮಾಡಲೆಂದು 10 ಉದ್ಯೋಗಿಗಳಿಗೆ ಮುಂಬೈನಲ್ಲಿ ತರಬೇತಿ ಕೊಡಿಸಿದ್ದಾರೆ. ವಿದೇಶದಿಂದ ತರಿಸಲಾಗುವ ಮತ್ತು ಮುಂಬೈನಲ್ಲಿ ಮಾತ್ರ ಸಿಗುವ ವಿಶೇಷ ದ್ರಾವಣವನ್ನು ಪಾದರಕ್ಷೆ ಸ್ವಚ್ಛಗೊಳಿಸಲು ಉಪಯೋಗಿಸುತ್ತಾರೆ. ಶೂ ಲೇಸ್ ತೆಗೆದು, ದ್ರಾವಣದಲ್ಲಿ ನೆನೆಸಿಟ್ಟು, ವಿಶೇಷವಾದ ವಾಷಿಂಗ್ ಮಷೀನಿನಲ್ಲಿ ಹಾಕಿ ಸ್ವಚ್ಛಗೊಳಿಸುತ್ತಾರೆ. ನಂತರ ಹೊಲಸು ವಾಸನೆ ಮತ್ತು ಬ್ಯಾಕ್ಟೀರಿಯಾಗಳನ್ನು ತೊಲಗಿಸಲು ದ್ರಾವಣವನ್ನು ಬಳಸಲಾಗುತ್ತದೆ. ಇದಾದನಂತರ ನೈಸರ್ಗಿಕವಾಗಿ ಒಣಗಿಸಲಾಗುತ್ತದೆ.

ಜಯನಗರದಲ್ಲಿ ವಾಸಿಸುವವರಾಗಿದ್ದರೆ ತಾವೇ ಸ್ವತಃ ಬಂದು ಕೊಡಬೇಕು. ಬೇರೆ ಬಡಾವಣೆಯಲ್ಲಿ ವಾಸಿಸುವವರಾಗಿದ್ದರೆ ಆನ್‌ಲೈನ್ ಮುಖಾಂತರ ಮನೆಯ ವಿಳಾಸ ನೀಡಿದರೆ ಕಂಪನಿಯ ನೌಕರರೇ ಬಂದು ತೆಗೆದುಕೊಂಡು ಹೋಗಿ ಸ್ವಚ್ಛಗೊಳಿಸಿ ವಾಪಸ್ ಬಂದು ನೀಡುತ್ತಾರೆ. ಶೂ ನೋಡುತ್ತಿದ್ದಂತೆ ನಿಮ್ಮ ಮುಖದಲ್ಲೂ ಶೂ ಮೇಲಿರುವ ಕಾಂತಿ ಮೂಡಿರುತ್ತದೆ. ನೆನಪಿನಲ್ಲಿಡಿ, ನಾವು ತೊಡುವ ದಿರಿಸಿನ ತರಹ ನಾವು ಹಾಕಿಕೊಳ್ಳುವ ಪಾದರಕ್ಷೆಯೂ ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ.

English summary
Is you shoe stinking? Don't you get time to keep your footwear clean? Don't worry Shoevival, the shoe laundry is at your service. Kannadiga Shashank Bharadwar has started Bangalore's first ever shoe laundry in Jayanagar 4th block in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X