ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುರ್ಖಾ ಬ್ರಿಗೇಡ್ ಬರುತ್ತಿದೆ ಎಚ್ಚರ, ಎಚ್ಚರಾ!

By Mahesh
|
Google Oneindia Kannada News

Al-Qaeda's all-female 'Burkha Brigade' to hit Western targets
ಲಂಡನ್, ಅ.29: ಉಗ್ರಗಾಮಿ ಸಂಘಟನೆ ಮಹಿಳಾ ಉಗ್ರರನ್ನು ಮಾತ್ರ ಒಳಗೊಂಡ 'ಬುರ್ಖಾ ಬ್ರಿಗೇಡ್' ತಂಡವನ್ನು ಕಟ್ಟಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ಬುರ್ಖಾ ಬ್ರಿಗೇಡ್ ನುಸುಳಿಕೊಂಡು ಭಯೋತ್ಪಾದನಾ ಚಟುವಟಿಕೆ ಮುಂದುವರೆಸಲಿದ್ದು, ಪುರುಷ ಉಗ್ರರಿಗಿಂತ ಹೆಚ್ಚಿನ ದುಷ್ಪರಿಣಾಮ ಬೀರಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಮೆಷಿನ್ ಗನ್, ಗ್ರೇನೆಡ್, ರಾಕೆಟ್ ಲಾಂಚರ್ಸ್, ಸ್ಟನ್ ಗನ್ ಹಿಡಿದ ಆಲ್ ಖೈದಾ ಮಹಿಳಾ ಉಗ್ರ ತಂಡ 'ಬುರ್ಖಾ ಬ್ರಿಗೇಡ್' ಚಿತ್ರಗಳು ಈಗಾಗಲೇ ಅಂತರ್ಜಾಲ ಪ್ರವೇಶಿಸಿದೆ. ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಗುಪ್ತ ಸ್ಥಳಗಳಲ್ಲಿ ಈ ವಿಶೇಷ ತಂಡಕ್ಕೆ ತರಬೇತಿ ನೀಡಲಾಗಿದೆ ಎಂಬ ಮಾಹಿತಿ ಹೊರಹಾಕಲಾಗಿದೆ.

ಯುದ್ಧಪೀಡಿತ ಚೆಚೆನ್ಯಾ ಕಡೆಯಿಂದ ನಿರಾಶ್ರಿತರಾಗಿ ಬಂದ ಮಹಿಳೆಯರನ್ನು ಆಘ್ಘಾನ್ ಗಡಿಯಲ್ಲೇ ತರಬೇತಿಗೊಳಿಸಲಾಗಿದೆ ಎಂದು ಬ್ರಿಟೀಷ್ ಟ್ಯಾಬ್ಲಾಯ್ಡ್ 'ದಿ ಸನ್' ವರದಿ ಮಾಡಿದೆ.

ರಷ್ಯಾದ ಕಾಕಾಸ್ ಪ್ರದೇಶದ ಉಗ್ರರೊಡನೆ ಸಂಪರ್ಕ ಹೊಂದಿರುವ ಅಲ್ ಖೈದಾ ಉಗ್ರ ಸಂಘಟನೆ ಇಸ್ಲಾಂ ಅವಾಜಿ ಅಥವಾ ವಾಯ್ಸ್ ಆಫ್ ಇಸ್ಲಾಂ ಎಂಬ ಚಿನ್ಹೆ ಹೊಂದಿದೆ ಎಂದು ಸನ್ ಹೇಳಿದೆ.

ಹಲವು ದೇಶಗಳ ಸುರಕ್ಷಿತಾ ಬೇಲಿಯನ್ನು ದಾಟಲು ಅಲ್ ಖೈದಾ ವಿವಿಧ ತಂತ್ರಗಳನ್ನು ಹೂಡುತ್ತಿದ್ದು, ಅದರಲ್ಲಿ ಬುರ್ಖಾ ಬ್ರಿಗೇಡ್ ಕೂಡಾ ಒಂದಾಗಿದೆ. ಜಾಗತಿಕ ಉಗ್ರರ ಜಾಲದಲ್ಲಿ ಮಹಿಳಾ ಉಗ್ರರ ಪಡೆ ತನ್ನದೆ ಆದ ಸ್ಥಾನವನ್ನು ಪಡೆಯುತ್ತಿದೆ.

ಇತ್ತೀಚೆಗೆ ಹಲವು ದೇಶಗಳಲ್ಲಿ ಕಂಡು ಬಂದ ಆತ್ಮಾಹುತಿ ಬಾಂಬ್ ದಾಳಿ ಪ್ರಕರಣಗಳಲ್ಲಿ ಮಹಿಳೆಯರ ಬಳಕೆಯಾಗಿರುವ ಬಗ್ಗೆ ಪತ್ತೆಯಾಗಿದೆ. ಬುರ್ಖಾ ಧರಿಸಿರುವುದರಿಂದ ಮಹಿಳೆಯರು ಶಸ್ತ್ರಾಸ್ತ್ರ ರವಾನಿಸಲು ಸುಲಭವಾಗಿದೆ.

ಅಮೆರಿಕದಲ್ಲಿ ಕಾಲೆನ್ ಲಾ ರೋಸ್ ಅಲಿಯಾಸ್ ಜಿಹಾದ್ ಜೇನ್ ಹಾಗೂ ಜರ್ಮನಿಯ ಫಿಲಿಜ್ ಗೆಲೊವಿಕ್ಜ್ ಬಂಧನದಿಂದ ಈ ಸುದ್ದಿಗೆ ಇನ್ನಷ್ಟು ಪುಷ್ಟಿ ಸಿಕ್ಕಿದೆ ಎನ್ನಬಹುದು.

ಆಗಸ್ಟ್ ನಲ್ಲಿ 30 ವರ್ಷದ ರಷ್ಯಾದ ನಟಿಯೊಬ್ಬಳು ಇಸ್ಲಾಂಗೆ ಮತಾಂತರಗೊಂಡು ದಾಗೇಸ್ತಾನದ ಮುಸ್ಲಿಂ ಆಧ್ಯಾತ್ಮ ಗುರು ಶೇಖ್ ಸಯೀದ್ ಅಫಿಂದಿ ಹಾಗೂ 6 ಜನರನ್ನು ಆತ್ಮಾಹುತಿ ದಾಳಿ ಮೂಲಕ ಕೊಂದು ಸಾವನ್ನಪ್ಪಿದ್ದಳು.

ಸೆಪ್ಟೆಂಬರ್ ತಿಂಗಳಿನಲ್ಲಿ ಕಾಬೂಲ್ ವಿಮಾನನಿಲ್ದಾಣದ ಬಳಿ ನಡೆದ ಬಾಂಬ್ ಸ್ಫೋಟವನ್ನು ಇದೇ ಬುರ್ಖಾ ಬ್ರಿಗೇಡ್ ನಿರ್ವಹಿಸಿದೆ ಎಂಬ ಸುದ್ದಿ ಇದೆ. ಈ ದುರ್ಘಟನೆಯಲ್ಲಿ 12 ಜನ ಅಮಾಯಕರು ಸಾವನ್ನಪ್ಪಿದ್ದರು.

ಪರಿಸ್ಥಿತಿ ಕೈಮೀರುವ ಮೊದಲು ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸನ್ ವರದಿ ಹೇಳಿದೆ.

English summary
The women are thought to have been recruited from the war-torn Russian republic of Chechnya by an al-Qaeda-linked group, with bases in Pakistan and Afghanistan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X