ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವದೆಹಲಿಯ ಬಿಜೆಪಿ ಕನ್ನಡ ಮಣ್ಣಿನ ಋಣ ಅಪಾರ

|
Google Oneindia Kannada News

 Advani close aid Sudheendra Kulkarni in TV9 Chakravyuha
ಬೆಂಗಳೂರು, ಅ 29: ಎಲ್ಲಾ ಮುಸ್ಲಿಮರನ್ನು ಒಂದೇ ಕನ್ನಡಕದಲ್ಲಿ ನೋಡಲಾಗದು. 'ನಾವು' ಮಾಡುವ ಮೊದಲ ತಪ್ಪೆಂದರೆ 'ಅವರನ್ನು' ಪೂರ್ವಾಗ್ರಹದಿಂದ ನೋಡೋದೇ ಆಗಿದೆ ಎಂದು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಮತ್ತು ಆಡ್ವಾಣಿ ಆಪ್ತ ಸುಧೀಂದ್ರ ಕುಲಕರ್ಣಿ ಅಭಿಪ್ರಾಯ ಪಟ್ಟಿದ್ದಾರೆ.

ಎಲ್ಲರನ್ನೂ ಸಮಾನತೆ ಮತ್ತು ಭಾವೈಕ್ಯತೆಯಿಂದ ನೋಡಬೇಕಾಗುತ್ತದೆ. ದೇಶ ಅಭಿವೃದ್ದಿ ಹೊಂದಲು ಅವರ ಸಹಕಾರವೂ ಬಹಳಷ್ಟಿದೆ ಎಂದು ಹೇಳಿದ ಅವರು, ನಾನು ಬಿಜೆಪಿಯ ಸದಸ್ಯ ಮಾತ್ರ ಆರ್ ಎಸ್ ಎಸ್ ಸದಸ್ಯನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದಿನ ದೇಶದ ರಾಜಕಾರಣದಲ್ಲಿ ಮುತ್ಸದ್ದಿ ಎಂದು ಕರೆಯಬಹುದಾದರೆ ಅದು ಆಡ್ವಾಣಿ ಮಾತ್ರ. ನಾನು ಅವರ ಆಪ್ತನೆಂದು ಈ ಮಾತನ್ನು ಹೇಳುತ್ತಿಲ್ಲ. ಅವರಿಗಿರುವ ದೂರದೃಷ್ಟಿ, ದೇಶಾಭಿಮಾನದಿಂದಾಗಿ ದೇಶದ ಪ್ರಧಾನಿಯಾಗಲು ಅವರೇ ಸೂಕ್ತ ಆಯ್ಕೆ ಎನ್ನಬಹುದೆಂದು ಕುಲಕರ್ಣಿ ಅಭಿಪ್ರಾಯಪಟ್ಟಿದ್ದಾರೆ.

ಬಲ ಪಂಥೀಯ ಮತ್ತು ಎಡ ಪಂಥೀಯ ವಿಚಾರದಲ್ಲಿ ನನಗೆ ಸಂಪೂರ್ಣ ನಂಬಿಕೆ ಇಲ್ಲದಿದ್ದರೂ ಕೆಲವೊಂದು ಕಮ್ಯೂನಿಸ್ಟ್ ತತ್ವದಲ್ಲಿ ನನಗೆ ನಂಬಿಕೆಯಿದೆ. ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಬೇಕೆನ್ನುವ ಕೆಲ ಬಿಜೆಪಿ ನಾಯಕರುಗಳ ಹೇಳಿಕೆಗೆ ನಾನು ಪ್ರತಿಕ್ರಯಿಸುವುದಿಲ್ಲ. ಅದನ್ನು ಪಕ್ಷ ನಿರ್ಧರಿಸುತ್ತದೆ ಎಂದು ಸುಧೀಂದ್ರ ಕುಲಕರ್ಣಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಇಷ್ಟು ಪ್ರಬಲವಾಗಲು ಮತ್ತು ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರ ಕೊಡುಗೆ ಅಪಾರ. ಅವರು ಬಿಜೆಪಿ ತೊರೆಯಬಾರದು ಎನ್ನುವುದು ನನ್ನ ವೈಯಕ್ತಿಕ ನಿಲುವು.

ಇನ್ನೂ ಯಡಿಯೂರಪ್ಪ ಅವರಿಗೆ ಸಮಯ ಮೀರಿಲ್ಲ. ಕರ್ನಾಟಕದಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಯಡಿಯೂರಪ್ಪ ಅವರ ನಾಯಕತ್ವ ಪಕ್ಷಕ್ಕೆ ಬೇಕೆಂದು ಕುಲಕರ್ಣಿ ಅಭಿಪ್ರಾಯ ಪಟ್ಟಿದ್ದಾರೆ.

ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಮೊದಲು ಪಕ್ಷ ನಂತರ ನಾಯಕ. ಇದು ಆಡ್ವಾಣಿ ವಿಚಾರದಲ್ಲಾಗಲಿ ಅಥವಾ ಯಡಿಯೂರಪ್ಪ ವಿಚಾರದಲ್ಲಾಗಲಿ ನನ್ನ ನಿಲುವು ಬದಲಿಲ್ಲ.

ಕರ್ನಾಟಕದಲ್ಲಿನ ಬಿಜೆಪಿ ಭಿನ್ನಾಭಿಪ್ರಾಯದ ವಿಚಾರದಲ್ಲಿ ನಾನು ಮೂಗು ತೂರಿಸುವುದಿಲ್ಲ. ಪಕ್ಷ ತೆಗೆದುಕೊಳ್ಳುವ ನಿರ್ಣಯವೇ ಅಂತಿಮ ಎಂದು ಕುಲಕರ್ಣಿ ಟಿವಿ9 ಚಕ್ರವ್ಯೂಹ (ಅ28 ಸಂಚಿಕೆ) ಕಾರ್ಯಕ್ರಮದಲ್ಲಿ ಲಕ್ಷ್ಮಣ್ ಹೂಗಾರ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ನಾನು ಕನ್ನಡಿಗ ಎನ್ನಲು ನನಗೆ ಹೆಮ್ಮೆಯಿದೆ. ಭಾಷಾಭಿಮಾನ, ಸಂಸ್ಕಾರ, ಜನರ ಜೊತೆ ನಡೆದುಕೊಳ್ಳುವ ರೀತಿಯನ್ನು ನನಗೆ ಈ ಭಾಷೆ ಮತ್ತು ಕರ್ನಾಟಕ ಕಲಿಸಿ ಕೊಟ್ಟಿದೆ. "ಈ ಮಣ್ಣಿನ ಋಣವನ್ನು ನಾನೆಂದೂ ಮರೆಯುವುದಿಲ್ಲ" ಎಂದು ಸುಧೀಂದ್ರ ಕುಲಕರ್ಣಿ ಸಂದರ್ಶನದಲ್ಲಿ ಹೇಳಿದರು.

English summary
L K Advanis close aid and member of BJP Parliamentary board Sudheendra Kulkarni said, 'we should not see all muslims in same eyes". He was also of the view, former Karnataka CM Yeddyurappa should stay back in BJP. Mr. Kulkarni was speaking to local TV channel TV9 Kannada on Sunday 28th Oct.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X