ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡ್‌ಟಿಇ ಟೆಕ್ಕಿಗಳ ಪಾಲಿಗೆ ಅ.29 ಕರಾಳ ದಿನ

By Prasad
|
Google Oneindia Kannada News

ZTE India to send techies home
ಬೆಂಗಳೂರು, ಅ. 29 : ಜೆಡ್‌ಟಿಇ ಇಂಡಿಯಾ ಕಂಪನಿ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದಲ್ಲಿ ಕೆಲಸ ಮಾಡುತ್ತಿರುವ ನೌಕರರ ಸಂಖ್ಯೆಯನ್ನು ಗಣನೀಯವಾಗಿ ಇಳಿಸಲು ನಿರ್ಧರಿಸಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಅನೇಕ ಯುವ ಸಾಫ್ಟ್ ವೇರ್ ಇಂಜಿನಿಯರುಗಳು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಚೀನಾದಲ್ಲಿ ಟೆಲಿಕಾಂ ಸಾಧನಗಳನ್ನು ನಿರ್ಮಿಸುವ ಎರಡನೇ ಅತಿದೊಡ್ಡ ಕಂಪನಿಯಾಗಿರುವ ZTE Corp ಭಾರತದಲ್ಲಿ ತನ್ನ ಖರ್ಚುವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಈ ಕ್ರಮಕ್ಕೆ ಕೈಹಾಕಲಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಲು ಕಂಪನಿ ನಿರಾಕರಿಸಿದೆ.

ಭಾರತದಲ್ಲಿ ಅತ್ಯುತ್ತಮ ಬೆಳವಣಿಗೆ ಮತ್ತು ಗಳಿಕೆ ಕಂಡಿದ್ದರೂ ಉದ್ಯೋಗಿಗಳನ್ನು ಕಡಿಮೆ ಮಾಡಲು ಚೀನಾ ಕಂಪನಿ ನಿರ್ಧರಿಸಿರುವುದು ಉದ್ಯೋಗಿಗಳ ಪಾಲಿಗೆ ಬರಸಿಡಿಲಿನಂತೆ ಬಂದೆರಗಿದೆ. ಭಾರತದಲ್ಲಿ 1,600 ನೌಕರರನ್ನು ಹೊಂದಿದ್ದು, ಸಾವಿರ ಉದ್ಯೋಗಿಗಳನ್ನು ನೇರವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಉಳಿದವರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿರುವ ಆರ್ ಅಂಡ್ ಡಿ ಘಟಕವನ್ನು ಇಂಡಿಯನ್ ಇಂಜಿನಿಯರಿಂಗ್ ಅಂಡ್ ಸರ್ವೀಸ್ ಸೆಂಟರ್ (IESC) ಜೊತೆ ಕೂಡಿಸಲು ನಿರ್ಧರಿಸಿರುವುದಾಗಿ ಕಂಪನಿ ಹೇಳಿಕೆ ನೀಡಿತ್ತು. ಇದರ ಭಾಗವಾಗಿಯೇ ಕೆಲ ನೌಕರರನ್ನು ಪಿಂಕ್ ಸ್ಲಿಪ್ ನೀಡಿ ಮನೆಗೆ ಕಳಿಸಿಲು ಕಂಪನಿ ತೀರ್ಮಾನಿಸಿದೆ.

ಜೆಡ್‌ಟಿಇ ಇಂಡಿಯಾದ ಆರ್ ಅಂಡ್ ಡಿ ಘಟಕದಲ್ಲಿ ಮೊಬೈಲ್ VAS ಸ್ಪೇಸ್‌ನಲ್ಲಿ ಕಾಲರ್ ರಿಂಗ್ ಬ್ಯಾಕ್ ಟೋನ್, ಕಾಲ್ ಸೆಂಟರ್ ಅಪ್ಲೇಕೇಷನ್, ಬಿಲ್ಲಿಂಗ್ ಸಲ್ಯೂಷನ್ಸ್ ಸೇರಿದಂತೆ ಅನೇಕ ಟೆಲಿಕಾಂ ಸಾಫ್ಟ್‌ವೇರ್ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಕಂಪನಿಯ ಪ್ರಮುಖ ಗ್ರಾಹಕರು ವೊಡಾಫೋನ್ ಮತ್ತು ಯುನಿನಾರ್.

ಅಂದುಕೊಂಡಂತೆ ನಡೆದರೆ ಅನೇಕ ಉದ್ಯೋಗಿಗಳ ಪಾಲಿಗೆ ಅಕ್ಟೋಬರ್ 29, ಸೋಮವಾರ ಅಂತಿಮ ದಿನವಾಗಲಿದೆ. ಕಂಪನಿ ಕೆಲಸಕ್ಕೆ ರಾಜೀನಾಮೆ ಸಲ್ಲಿಸಲು ಅ.29ರ ಡೆಡ್ ಲೈನ್ ನೀಡಲಾಗಿತ್ತು ಎಂದು ಹೆಸರು ಹೇಳಲಿಚ್ಛಿಸದ ಉದ್ಯೋಗಿಯೊಬ್ಬರು ಮಾಹಿತಿ ನೀಡಿದ್ದಾರೆ.

English summary
Many young software engineers may lose their source of earning bread and butter for themselves and their family members as ZTE India may scale down it Research and Development (R&D) unit as part of a cost-cutting drive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X