ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಂದಾಲ್ ಸ್ಟೀಲ್ ನಿವ್ವಳ ಲಾಭ ಪ್ರತಿಶತ 547 ಏರಿಕೆ

By Mahesh
|
Google Oneindia Kannada News

Sajjan Jindal
ಬೆಂಗಳೂರು, ಅ.29 : ಜಿಂದಾಲ್ ಉಕ್ಕು ಸಂಸ್ಥೆ ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಸೋಮವಾರ (ಅ.29) ಪ್ರಕಟಿಸಿದೆ. Q2ನಲ್ಲಿ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಶೇ 547 ರಂತೆ ಏರಿಕೆ ಕಂಡು 822 ಕೋಟಿ ರು ದಾಖಲಿಸಿದೆ. ರುಪಾಯಿ vs ಡಾಲರ್ ಸಮರದಲ್ಲಿ ರುಪಾಯಿ ಮೌಲ್ಯ ಏರಿಳಿತ ಜಿಂದಾಲ್ ಗೆ ಈ ಪರಿ ಲಾಭ ತಂದುಕೊಟ್ಟಿದೆ.

ಕರ್ನಾಟಕದಲ್ಲಿ ಗಣಿಗಾರಿಕೆ ನಿಷೇಧ, ಅದಿರು ರಫ್ತು ನಿರ್ಬಂಧ, ಸುಪ್ರೀಂಕೋರ್ಟ್ ನಲ್ಲಿ ಮೊಕದ್ದಮೆ ಎಲ್ಲಾ ಜಂಜಾಟದ ನಡುವೆ ಜಿಂದಾಲ್ ಸ್ಟೀಲ್ ಉತ್ತಮ ಫಲಿತಾಂಶ ಹೊರ ಹಾಕಿದೆ.

2012-13ರ ಎರಡನೇ ತ್ರೈಮಾಸಿಕದಲ್ಲಿ ಯುಎಸ್ ಡಾಲರ್ ಎದುರು ರುಪಾಯಿ ಮೌಲ್ಯ 6.4 ರಷ್ಟು ಏರಿಕೆ ಕಂಡಿರುವುದು ಜಿಂದಾಲ್ ಗೆ ವರದಾನವಾಗಿದೆ. ವಿದೇಶಿ ಕರೆನ್ಸಿ ವಿನಿಮಯ ಬದಲಾವಣೆ ಪರಿಣಾಮ ಕಂಪನಿಗೆ ಸುಮಾರು 422 ಕೋಟಿ ರು ಹೆಚ್ಚುವರಿ ಲಾಭ ಬಂದಿದೆ.

ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ ಕೇವಲ 127.12 ಕೋಟಿ ನಿವ್ವಳ ಲಾಭ ಮಾತ್ರ ದಾಖಲಾಗಿತ್ತು.

ಈ ತ್ರೈಮಾಸಿಕದಲ್ಲಿ ಜಿಂದಾಲ್ ಕಂಪನಿ ನಿವ್ವಳ ಮಾರಾಟ 8,834 ಕೋಟಿ ರು ನಷ್ಟಿದ್ದು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ 16 ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ 7,625.06 ಕೋಟಿ ರು ದಾಖಲಾಗಿತ್ತು.

JSWIL ಹಾಗೂ JSW ಸ್ಟೀಲ್ ವಿಲೀನಕ್ಕೆ ಬಿಎಸ್ ಇ ಹಾಗೂ ಎನ್ ಎಸ್ ಇ ಒಪ್ಪಿಗೆ ಸೂಚಿಸಿದ್ದು, ಕಂಪನಿಗೆ ಇನ್ನಷ್ಟು ಬಲ ತಂದಿದೆ.

ಎರಡನೇ ತ್ರೈಮಾಸಿಕದಲ್ಲಿ ಸುಮಾರು 2.17 ದಶಲಕ್ಷ ಟನ್ ಗಳಷ್ಟು ಉಕ್ಕು ಮಾರಾಟ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟ ಮತ್ತು ಉತ್ಪಾದನೆ ಕ್ರಮವಾಗಿ ಶೇ 15 ಹಾಗೂ ಶೇ 25 ರಷ್ಟು ಏರಿಕೆ ಕಂಡಿದೆ.

English summary
JSW Steel reported a net profit of Rs 822 crores up by 547% over the corresponding quarter of previous year mainly due to higher volumes and rupee appreciation impact.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X