ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ಕೋಟಿ ಡೀಲ್ ಆರೋಪ, 150 ಕೋಟಿ ಮಾನನಷ್ಟ

By Mahesh
|
Google Oneindia Kannada News

Naveen Jindal
ನವದೆಹಲಿ, ಅ.28: ಕಾಂಗ್ರೆಸ್ ಸಂಸದ ನವೀನ್ ಕುಮಾರ್ ಜಿಂದಾಲ್ ಅವರು ಜೀ ಟಿವಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ ಬೆನ್ನಲ್ಲೇ ಜೀ ಟಿವಿ ಕೂಡಾ ಕಾನೂನು ಸಮರಕ್ಕೆ ಸಜ್ಜಾಗಿದೆ.

ಜಿಂದಾಲ್ ಕಂಪನಿ ವಿರುದ್ಧ ಸುದ್ದಿ ಪ್ರಸಾರ ಮಾಡದಿರಲು ಜೀ ನ್ಯೂಸ್ ವರದಿಗಾರರು 100 ಕೋಟಿ ರು ಕೇಳಿದ್ದರು ಎಂದು ನವೀನ್ ಜಿಂದಾಲ್ ಆರೋಪಿಸಿದ್ದರು,. ಜಿಂದಾಲ್ ಅವರ ಹೇಳಿಕೆ ಸುಳ್ಳು. ಇದರಿಂದ ನಮ್ಮ ಜೀ ಟಿವಿ ಬ್ರ್ಯಾಂಡ್ ಗೆ ಹೊಡೆತ ಬಿದ್ದಿದೆ ಎಂದು ಹೇಳಿ ಜೀ ಸಮೂಹ ಸಂಸ್ಥೆ ಜಿಂದಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದೆ.

ಜೀ ಟಿವಿ ತಂಡ ಒಡ್ಡಿದ್ದ ಡೀಲ್ ಕುರಿತಂತೆ ಗುರುವಾರ (ಅ.25) ಸುದ್ದಿಗೋಷ್ಠಿ ನಡೆಸಿದ ನವೀನ್, ಅವರು ತೋರಿಸಿದ ವಿಡಿಯೋ ಕ್ಲಿಪ್ಪಿಂಗ್ ನಕಲಿಯಾಗಿದೆ ಎಂದು ಜೀ ನ್ಯೂಸ್ ಹೇಳಿದೆ.

ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಜಿಂದಾಲ್ ಕಂಪನಿ ವಿರುದ್ಧ ಸ್ಟಿಂಗ್ ಆಪರೇಷನ್ ಜೀ ಟಿವಿ ನಡೆಸಿತ್ತು. ಈ ವಿಡಿಯೋ ಪ್ರಸಾರವಾಗಬಾರದು ಎಂದರೆ ಕೋಟ್ಯಂತರ ರುಪಾಯಿ ನೀಡುವಂತೆ ಬೆದರಿಕೆ ಒಡ್ಡಿತ್ತು ಎಂದು ನವೀನ್ ಜಿಂದಾಲ್ ಆರೋಪಿಸಿದ್ದರು.ವಿಡಿಯೋದಲ್ಲಿ ಜೀ ನ್ಯೂಸ್ ವರದಿಗಾರ ಹಾಗೂ ಜಿಂದಾಲ್ ಸಂಸ್ಥೆ ಸಿಬ್ಬಂದಿ ಜೊತೆ ಡೀಲ್ ಮಾಡುತ್ತಿರುವ ದೃಶ್ಯಗಳಿದೆ.

ಅದರೆ, ನೆವೀನ್ ಜಿಂದಾಲ್ ಮಾಡಿದ ಆರೋಪಗಳನ್ನು ಜೀ ಟಿವಿ ಸಂಸ್ಥೆ ನಿರಾಕರಿಸಿತ್ತು. ಈ ರೀತಿ ಆರೋಪಗಳು ಈ ಹಿಂದೆ ಕೂಡಾ ಕೇಳಿ ಬಂದಿತ್ತು. ನಾವು ಇದಕ್ಕೆಲ್ಲ ಹೆದರುವುದಿಲ್ಲ ಎಂದು ಜೀ ಎಂಟರ್ ಪ್ರೈಸರ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಪುನೀತ್ ಗೋಯಾಂಕ ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ನವೀನ್ ಜಿಂದಾಲ್ ಅವರು ಪುರಾವೆ ಸಮೇತ ಜೀ ಟಿವಿ ಡೀಲ್ ಬಯಲು ಮಾಡಿದ್ದಾರೆ. ಕಲ್ಲಿದ್ದಲು ಹಗರಣದಲ್ಲಿ ಜಿಂದಾಲ್ ಸಂಸ್ಥೆ ಪಾತ್ರ ಇದೆ ಎಂದು ಜೀ ನ್ಯೂಸ್ ವರದಿ ಮಾಡಿತ್ತು.

English summary
Zee News sent a defamation notice of Rs 150 crore to Congress MP Naveen Jindal. Zee TV accusing his press conference on a sting operation conducted by his company, Jindal Steel and Power Ltd, on the TV channel,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X