ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಮೌಲ್ಯ ಕುಸಿತ, ಟಿಸಿಎಸ್ ಮೌಲ್ಯ ಏರಿಕೆ

By Mahesh
|
Google Oneindia Kannada News

M-cap of top five cos down by Rs 23,009 cr
ಬೆಂಗಳೂರು, ಅ.28 : ದೇಶದ ಅಗ್ರಗಣ್ಯ 5 ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ಕುಸಿತ ಕಂಡಿದೆ. ಕಳೆದ ವಾರದ ಲೆಕ್ಕಾಚಾರದಂತೆ ಐಟಿಸಿ, ಎಸ್ ಬಿಐ ಕುಸಿತದೊಂದಿಗೆ ಟಾಪ್ 5 ಕಂಪನಿಗಳ ಮೌಲ್ಯ ನಷ್ಟ ಮೊತ್ತ 23,009 ಕೋಟಿ ರು ದಾಟಿದೆ.

ಕಂಪನಿಗಳು ತ್ರೈಮಾಸಿಕದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದರೂ ಕಂಪನಿ ಷೇರು ಮೌಲ್ಯ ಕುಸಿತ ಕಂಡಿದ್ದರಿಂದ ಟಾಪ್ ಕಂಪನಿಗೆತಲೆನೋವಾಗಲಿದೆ. ರಿಯಲನ್ಸ್ ಇಂಡಸ್ಟ್ರಿ, ಒಎನ್ ಜಿಸಿ, ಐಟಿಸಿ, ಎಸ್ ಬಿಐ ಹಾಗೂ ಇನ್ಫೋಸಿಸ್ ಮೌಲ್ಯ ಕುಸಿದಿದೆ. ಟಿಸಿಎಸ್, ಸಿಐಎಲ್, ಎಚ್ ಡಿಎಫ್ ಸಿ, ಎನ್ ಟಿಪಿಸಿ ಹಾಗೂ ಐಸಿಐಸಿಐ ಬ್ಯಾಂಕ್ ಮಾರುಕಟ್ಟೆ ಮೌಲ್ಯ ಸುಧಾರಿಸಿದೆ.

* ಐಟಿಸಿ ಸಂಸ್ಥೆ ಮಾರುಕಟ್ಟೆ ಮೌಲ್ಯ 9,074 ಕೋಟಿ ಕುಸಿದಿದ್ದು 2,24,650 ಕೋಟಿ ರು. ಗೆ ನಿಂತಿದೆ. ಎಫ್ ಎಂಸಿಜಿ ಪ್ರಮುಖ ಕಂಪನಿ ಷೇರುಗಳು ಶೇ 4 ರಷ್ಟು ಕುಸಿತ ಕಂಡಿದೆ.
* ಸೆಪ್ಟೆಂಬರ್ 30,2012ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ನಿವ್ವಳ ಲಾಭದಲ್ಲಿ ಶೇ 21.27 ರಷ್ಟು ಏರಿಕೆ ಕಂಡಿದ್ದ ಐಟಿಸಿ ಕಂಪನಿ 1,836.42 ಕೋಟಿ ರು ದಾಖಲಿಸಿತ್ತು.
* ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಇಂಡಿಯಾ ಮಾರುಕಟ್ಟೆ ಮೌಲ್ಯ 5,600 ಕೋಟಿ ಇಳಿದಿದ್ದು, ಮೌಲ್ಯ 1,45,831 ಕೋಟಿ ರು ದಾಖಲಿಸಿದೆ.
* ಒನ್ ಜಿಸಿ ಮೌಲ್ಯದಲ್ಲಿ 3,850 ಕೋಟಿ ರು ಕಮ್ಮಿಯಾಗಿದ್ದು 2,34,890 ಕೋಟಿ ರು ನಷ್ಟಿದೆ.

* ಇನ್ಫೋಸಿಸ್ 3,126 ಕೋಟಿ ರು ನಷ್ಟು ಮೌಲ್ಯ ಕಳೆದುಕೊಂಡು 1,33,730 ಕೋಟಿ ರು ಹೊಂದಿದೆ.
* ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 1,359 ಕೋಟಿ ರು ಮೌಲ್ಯ ನಷ್ಟ ಅನುಭವಿಸಿ 2,58,518 ಕೋಟಿ ರು ಮೊತ್ತ ಹೊಂದಿದೆ.

ಗಳಿಕೆ ಹೊಂದಿದ ಕಂಪನಿಗಳು: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಂಸ್ಥೆ ತನ್ನ ಮೊತ್ತಕ್ಕೆ 4,560 ಕೋಟಿ ರು ಸೇರಿಸಿ ಒಟ್ಟಾರೆ 2,57,100 ಕೋಟಿ ರು ಹೊಂದಿದೆ.
* ಐಸಿಐಸಿಐ ಬ್ಯಾಂಕು ಉತ್ತಮ ತ್ರೈಮಾಸಿಕ ಫಲಿತಾಂಶದ ಫಲವಾಗಿ ತನ್ನ ಮೌಲ್ಯವನ್ನು 2,598 ಕೋಟಿ ರು ಹೆಚ್ಚಿಸಿಕೊಂಡು 1,24,328 ಕೋಟಿ ರು ಗಳಿಸಿದೆ.
* ಎನ್ ಟಿಪಿಸಿ ಪ್ರಗತಿ ಸಾಧಿಸಿದ್ದು, 2,226 ಕೋಟಿ ರು ಹೆಚ್ಚುವರಿ ಮೊತ್ತದೊಂದಿಗೆ 1,39,348 ಕೋಟಿ ರು ಹೊಂದಿದೆ.
* ಎಚ್ ಡಿಎಫ್ ಸಿ ಬ್ಯಾಂಕ್ 2,101 ಕೋಟಿ ರು ಸೇರಿಸಿಕೊಂಡು 1,50,377 ಕೋಟಿ ರು ಮಾರುಕಟ್ಟೆ ಮೌಲ್ಯ ಹೊಂದಿದೆ.
* ಕೋಲ್ ಇಂಡಿಯಾ 758 ಕೋಟಿ ರು ಹೆಚ್ಚಿಸಿಕೊಂಡು 2,24,167 ಕೋಟಿ ರು ಹೊಂದಿದೆ.

ಟಾಪ್ 10 ಕಂಪನಿಗಳು ಹೀಗಿದೆ: ರಿಲಯನ್ಸ್ ಇಂಡಸ್ಟ್ರೀ ಲಿಮಿಟೆಡ್, ಟಿಸಿಎಸ್, ಒಎನ್ ಜಿಸಿ, ಐಟಿಸಿ, ಕೋಲ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್, ಎಸ್ ಬಿಐ, ಎನ್ ಟಿಪಿಸಿ, ಇನ್ಫೋಸಿಸ್ ಹಾಗೂ ಐಸಿಐಸಿಐ ಬ್ಯಾಂಕ್

ಬಿಎಸ್ ಇನಲ್ಲಿ ನೋಂದಾಯಿತ ಸಂಸ್ಥೆಯ ಮಾರುಕಟ್ಟೆ ಮೌಲ್ಯವು ಪ್ರತಿದಿನದ ಮಾರುಕಟ್ಟೆ ಏರಿಳಿತ ಹಾಗೂ ಷೇರು ಮೌಲ್ಯದ ಮೇಲೆ ಬದಲಾವಣೆಗೆ ಒಳಪಟ್ಟಿರುತ್ತದೆ. ಇಲ್ಲಿ ನೀಡಿರುವ ಅಂಕಿ ಅಂಶಗಳು ಭಾನುವಾರ, 18 ಅಕ್ಟೋಬರ್ 2012ಕ್ಕೆ ಅನ್ವಯವಾಗುವಂತೆ ಮಾತ್ರ ಇದೆ ಎಂದು ಓದಿಕೊಳ್ಳತಕ್ಕದ್ದು.

English summary
Dragged down by ITC and SBI, the combined market capitalisation (m-cap) of top five Sensex companies declined by Rs 23,009 crore last week. RIL, ONGC, ITC, SBI and Infosys saw dip in their market capitalisation (m-cap), while on the other hand, TCS, CIL, HDFC Bank, NTPC and ICICI Bank's valuation moved up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X