• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಕ್ರೀದ್ ಪ್ರಾರ್ಥನೆ ವೇಳೆ ಹೆಜ್ಜೇನು ಹಠಾತ್ ದಾಳಿ

By Prasad
|

ಚಿಕ್ಕಬಳ್ಳಾಪುರ, ಅ. 27 : ಕರ್ನಾಟಕದ ಎಲ್ಲೆಡೆ ತ್ಯಾಗದ ಸಂಕೇತವಾಗಿರುವ 'ಬಕ್ರೀದ್' ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿರುವ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಗ್ರಾಮವೊಂದರಲ್ಲಿ ಕರಾಳ ಛಾಯೆ ಮೂಡಿದೆ.

ತಾಲೂಕಿನ ಗಂಜಿಗುಂಟೆ ಗ್ರಾಮದ ಈದ್ಗಾ ಮೈದಾನದಲ್ಲಿ ಶನಿವಾರ ಬೆಳಿಗ್ಗೆ ಅಲ್ಲಾಹುವಿಗೆ ಸಾರ್ವಜನಿಕ ಪ್ರಾರ್ಥನೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಹೆಜ್ಜೇನುಗಳು ದಾಳಿ ನಡೆಸಿದ್ದರಿಂದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಪ್ರಾರ್ಥನೆ ನಡೆಯುತ್ತಿದ್ದಾಗ ಹಠಾತ್ತನೆ 150ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನುಗಳು ದಾಳಿ ನಡೆಸಿವೆ. ದಾಳಿಗೆ ಹೆದರಿ ಮುಸ್ಲಿಂ ಬಾಂಧವರು ಪ್ರಾರ್ಥನೆಯನ್ನು ಅರ್ಧಕ್ಕೆ ಬಿಟ್ಟು ಎದ್ದುಬಿದ್ದು ಓಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಚಿಂತಾಮಣಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಮಾನ ಹಾರಾಟಕ್ಕೂ ಜೇನು ಕಾಟ : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈಗೆ ಹಾರಲೆಂದು ನಿಂತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ರೆಕ್ಕೆಗೆ ಜೇನು ಗೂಡು ಕಟ್ಟಿದ್ದರಿಂದ ವಿಮಾನ ಆಗಸಕ್ಕೆ ನೆಗೆಯುವುದು 45 ನಿಮಿಷ ವಿಳಂಬವಾಯಿತು. ಈ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದ್ದು ಗೂಡನ್ನು ತೆಗೆದ ನಂತರ ವಿಮಾನ ಹಾರಿದೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಗುರುವಾರ ಸಂಜೆಯೇ ದುಬೈನಿಂದ ವಿಮಾನ ಬಂದು ನಿಂತಿತ್ತು. 14 ಗಂಟೆಗಳ ಕಾಲ ಇಡೀ ರಾತ್ರಿ ಅಲ್ಲೇ ನಿಂತಿದ್ದರಿಂದ ಒಂದು ರೆಕ್ಕೆಯ ಮೇಲೆ ಜೇನು ಮನೆ ಕಟ್ಟಿ ಸಂಸಾರ ಹೂಡಿದ್ದವು. ಇದು ವಿಮಾನ ಹಾರಾಟಕ್ಕೆ ಕೆಲವೇ ನಿಮಿಷಗಳಿರುವಾಗ ಗಮನಕ್ಕೆ ಬಂದಿದೆ. ಗೂಡನ್ನು ನಿವಾರಿಸಿದ ನಂತರ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bees attack muslims during Bakrid prayer at Ganjigunte idgah ground in Shidlaghatta taluk in Chikkaballapur district on Saturday, October 27, 2012. Four people have been injured seriously. In another case, bees have delayed the flight in Mangalore airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more