ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ಯತ್ವ ಹರಾಜು, ಜಪಾನ್ ಯುವಕನಿಗೆ ಸೋತ ಇಂಡಿಯನ್

By Mahesh
|
Google Oneindia Kannada News

Brazilian Student Virginity Auction
ನ್ಯೂಯಾರ್ಕ್, ಅ.26: 20 ವರ್ಷದ ಬ್ರೆಜಿಲ್ ಯುವತಿ ತನ್ನ ಕನ್ಯತ್ವವನ್ನು ಆನ್ ಲೈನ್ ಮೂಲಕ ಹರಾಜಿಗಿಟ್ಟಿದ್ದಳು. ನಾ ಮುಂದು ತಾ ಮುಂದು ಎಂದು ಪುರುಷ ಪುಂಗವರು ಮುಗಿಬಿದ್ದು ಪೈಪೋಟಿಯಲ್ಲಿ ತಮ್ಮ ಬಿಡ್ಡಿಂಗ್ ಸಲ್ಲಿಸಿದರು. ತೀವ್ರ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಜಪಾನಿನ ಯುವಕನಿಗೆ ಭಾರತೀಯ ಮೂಲದ ಯುವಕ ಸೋಲೊಪ್ಪಿಕೊಂಡಿರುವ ಘಟನೆ ನಡೆದಿದೆ.

ದಾನ ಧರ್ಮ ಮಾಡಲು ಇಚ್ಛಿಸಿದ್ದ 20 ವರ್ಷದ ಬ್ರೆಜಿಲ್ ಮೂಲದ ವಿದ್ಯಾರ್ಥಿನಿ ಕಟಾರಿನ ಮಿಗ್ಲಿರಿನಿ ಕನ್ಯತ್ವ ಈಗ ಜಪಾನಿನ ನಟ್ಸು ಪಾಲಾಗಿದೆ. ಸ್ಪರ್ಧೆಯಲ್ಲಿ ಹಿಂದೆ ಬಿದ್ದ ಭಾರತೀಯ ರುದ್ರ ಚಟರ್ಜಿ ಕೈ ಕೈ ಹಿಸುಕಿಕೊಳ್ಳುತ್ತಾ ಹೊರ ನಡೆದಿದ್ದಾನೆ. ಅಮೆರಿಕದ ಜಾಕ್ ಮಿಲ್ಲರ್ ಹಾಗೂ ಜಾಕ್ ರೈಟ್ ನಂತರದ ಸ್ಥಾನ ಪಡೆದಿದ್ದಾರೆ.

ಅಂದ ಹಾಗೆ ಬ್ರೆಜಿಲ್ ವಿದ್ಯಾರ್ಥಿನಿ ಕನ್ಯತ್ವದ ಬೆಲೆ 780,000ಯುಎಸ್ ಡಾಲರ್ ಮಾತ್ರ. [ರೇಟ್ ಕೇಳಿ ಮೂರ್ಛೆ ಹೋಗಬೇಡಿ] ಈ ಹಣವನ್ನು ಏನು ಮಾಡುತ್ತೀಯ ಎಂದು ಕಟಾರಿನಳನ್ನು ಕೇಳಿದರೆ, 15 ಬಡ ಮಕ್ಕಳಿಗೆ ಆಗುವಂಥ ಮನೆ ಕಟ್ಟಿ ಕೊಡುತ್ತೇನೆ. ಕಟಾರಿನಾ ಆನ್ ಲೈನ್ ಹರಾಜು ಪ್ರಕ್ರಿಯೆ ಇಡೀ ಜಗತ್ತಿನ ಗಮನ ಸೆಳೆದಿತ್ತು. ಆಸ್ಟ್ರೇಲಿಯಾ ತಂಡವೊಂಡು 'ವರ್ಜಿನ್ಸ್ ವಾಂಟೆಂಡ್' ಎಂದು ಕಿರುಚಿತ್ರ ನಿರ್ಮಿಸಲು ಆಕೆ ಹಿಂದೆ ಮುಂದೆ ಸುತ್ತಾಡುತ್ತಿತ್ತು.

ಭಾರತೀಯರ ಪಾಲಿಗೆ 'ಕನ್ಯತ್ವ ಹರಾಜು' ಹುಬ್ಬೇರಿಸುವಂಥ ಸುದ್ದಿಯಾದರೂ, ವಿದೇಶದಲ್ಲಿ ಆಗಾಗ್ಗೆ ನಡೆಯುವ ಸಹಜ ಪ್ರಕ್ರಿಯೆಯಾಗಿದೆ.

ಈ ಹಿಂದೆ ನ್ಯೂಜಿಲೆಂಡ್ ಮೂಲದ ಯುವತಿಯೊಬ್ಬಳು 'ದುಡ್ಡಿಗೋಸ್ಕರ ನನ್ನ ಕನ್ಯತ್ವವನ್ನು ಹರಾಜಿಗೆ ಇಟ್ಟಿದ್ದೇನೆ. ಅಪರಿಚತರೊಂದಿಗೆ ಮಲಗುವುದಕ್ಕೆ ತಯಾರಿದ್ದೇನೆ, ಆಸಕ್ತಿಯುಳ್ಳವರು ಹರಾಜು ಕೂಗಬಹುದು' ಎಂದು ವೆಬ್ ಸೈಟ್ ನಲ್ಲಿ ಹಾಕಿದ್ದಳು. ಅಂತಿಮವಾಗಿ 32,190 ಅಮೆರಿಕನ್ ಡಾಲರುಗಳಿಗೆ ಕನ್ಯತ್ವ ಹರಾಜು ಹಾಕಿಕೊಂಡಿದ್ದಳು.

ಆಸ್ಟ್ರೇಲಿಯಾ ಮಾರ್ಗದ ವಿಮಾನದಲ್ಲಿ ಕಟಾರಿನ ಹಾಗೂ ಆಕೆಯನ್ನು ಕೊಂಡುಕೊಂಡ ಜಪಾನಿ ಯುವಕನ ನಡುವೆ ಭೇಟಿ ಕಾರ್ಯಕ್ರಮ ಆಗಲಿದೆ. ರಹಸ್ಯ ಸ್ಥಳದಲ್ಲಿ ಕಟಾರಿನಾ ತನ್ನ ಕನ್ಯತ್ವ ಕಳೆದುಕೊಳ್ಳಲಿದ್ದಾರೆ. ಮಾಧ್ಯಮಗಳಲ್ಲಿ ನಟ್ಸು ಚಿತ್ರವನ್ನು ಪ್ರಕಟಿಸಲು ಬಿಡುವುದಿಲ್ಲ ಎಂದು ಕಟಾರಿನಾ ಪರ ಆಯೋಜಕರು ಹೇಳಿದ್ದಾರೆ.

ಸುಮಾರು 2 ವರ್ಷಗಳಿಂದ ಬಡವರಿಗೆ ಮನೆ ಕಟ್ಟುವ ಬಗ್ಗೆ ಯೋಚಿಸುತ್ತಲೇ ಇದ್ದೆ. ಎಲ್ಲ ರೀತಿಯ ನಿಧಿ ಸಂಗ್ರಹ ಕಾರ್ಯ ಕೈಕೊಟ್ಟ ಮೇಲೆ ಈ ನಿರ್ಧಾರಕ್ಕೆ ಬಂದಿದ್ದೇನೆ. ಥಾಮಸ್ ವಿಲಿಯನ್ಸ್ ಪ್ರೊಡೆಕ್ಷನ್ಸ್ ಸಿನಿಮಾಕ್ಕೆ ವರ್ಜಿನ್ಸ್ ಬೇಕಿದ್ದಾರೆ ಎಂಬ ಜಾಹೀರಾತು ನೋಡಿದೆ ಥಟ್ಟನೆ ಈ ಐಡಿಯಾ ಹೊಳೆಯಿತು ಎಂದು ಕಟಾರಿನಾ ಹೇಳಿದ್ದಾಳೆ.

English summary
A 20-year-old Brazilian student, Catarina Migliorini, who sold her virginity for a USD 780,000 after putting it up for on-line auction for "charity". A Japanese man Natsu won the competition against Rudra Chatterjee and American bidders Jack Miller.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X