ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ನೀರು ಬೇಕಾ? ಇಲ್ಲಿಗೆ ಅರ್ಜಿ ಸಲ್ಲಿಸಿ

By Srinath
|
Google Oneindia Kannada News

bwssb-water-supply-sanitary-connection-apply-procedure
ಬೆಂಗಳೂರು, ಅ.26: ಬೆಂಗಳೂರು ನಿವಾಸಿಗಳಿಗೆ ಕಾವೇರಿ ನೀರು ಬೇಕೇ ಬೇಕು, ಅಲ್ವಾ? ಅದಕ್ಕಾಗಿ ಇಲ್ಲಿಗೆ ಅರ್ಜಿ ಸಲ್ಲಿಸಿದರೆ ಕಾವೇರಿ ತಂತಾನೇ ಹರಿದು ಬರುತಾಳೆ. ಇನ್ನೇನು ಕಾವೇರಿ ನಾಲ್ಕನೆಯ ಹಂತದಿಂದಲೂ ನೀರು ಹರಿದುಬರಲಿದೆ. ಸುಮಾರು 26 ಲಕ್ಷ ಮಂದಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ. ಈ ಸಂದರ್ಭದಲ್ಲಿ ಹೊಸದಾಗಿ ಕನೆಕ್ಷನ್ ಪಡೆಯುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

* ಯಾವ ಪ್ರದೇಶಗಳಿಗೆ? ಬೆಂಗಳೂರಿನ ಹೊರವಲಯದಲ್ಲಿ ಸಿಟಿ ಮುನ್ಸಿಪಲ್ ಕೌನ್ಸಿಲ್/ಟಿಎಂಸಿ ವ್ಯಾಪ್ತಿಯ 2 ಲಕ್ಷ ಮನೆಗಳಿಗೆ ಕಾವೇರಿ ನೀರು ಹರಿಯಲಿದೆ. ಯಲಹಂಕ, ಬ್ಯಾಟರಾಯನಪುರ, ಕೆಆರ್ ಪುರಂ, ಮಹದೇವಪಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ಕೆಂಗೇರಿ ಅಥವಾ ದಾಸರಹಳ್ಳಿ ವ್ಯಾಪ್ತಿಯಲ್ಲಿ ವಾಸವಾಗಿದ್ದರೆ BWSSB ಸೇವಾ ವಿಸ್ತರಣೆ ಯೋಜನೆಯಡಿ ಕಾವೇರಿ ನೀರಿನ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

* ಎಲ್ಲ ಸರ್ವಿಸ್ ಸ್ಟೇಷನ್ ಗಳಲ್ಲಿ SAJALA ಅರ್ಜಿ ಲಭ್ಯ.
* ಸಜಲ ಅರ್ಜಿ ಫಾರಂಗಾಗಿ 100 ರೂ. ಶುಲ್ಕ ಪಾವತಿಸಿ.
* ಭರ್ತಿ ಮಾಡಿದ ಅರ್ಜಿಯನ್ನು ಅರ್ಜಿದಾರರ ಭಾವಚಿತ್ರದೊಂದಿಗೆ ಆಸ್ತಿ ಹಕ್ಕು ಪತ್ರ/ ಖಾತೆ ಪತ್ರ/ ಕಂದಾಯ ಪಾವತಿ ರಸೀತಿ/ ಬೆಸ್ಕಾಂ ಆರ್ ಆರ್ ಬಿಲ್ -ಇವುಗಳ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು.
* ಇನ್ನೂ ಹೆಚ್ಚು ವಿವರ ಬೇಕೆಂದರೆ BWSSB ವೆಬ್ ಸೈಟ್ ಗೆ ಭೇಡಿ ನೀಡಿ. http://bwssb.org/water-connection/

English summary
Bangalore BWSSB Water Supply and Sanitary Connection Apply Procedure. Web site: http://bwssb.org/water-connection/
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X