ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀ ಟಿವಿ ವಿರುದ್ಧ ಜಿಂದಾಲ್ ಕ್ರಿಮಿನಲ್ ದೂರು

By Mahesh
|
Google Oneindia Kannada News

Naveen Jindal
ನವದೆಹಲಿ, ಅ.25: ಕಾಂಗ್ರೆಸ್ ಸಂಸದ ನವೀನ್ ಕುಮಾರ್ ಜಿಂದಾಲ್ ಅವರು ಜೀ ಟಿವಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.

ಜಿಂದಾಲ್ ಕಂಪನಿ ವಿರುದ್ಧ ಸುದ್ದಿ ಪ್ರಸಾರ ಮಾಡದಿರಲು ಜೀ ನ್ಯೂಸ್ ವರದಿಗಾರರು 100 ಕೋಟಿ ರು ಕೇಳಿದ್ದರು ಎಂದು ನವೀನ್ ಜಿಂದಾಲ್ ಆರೋಪಿಸಿದ್ದಾರೆ.

ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಜಿಂದಾಲ್ ಕಂಪನಿ ವಿರುದ್ಧ ಸ್ಟಿಂಗ್ ಆಪರೇಷನ್ ಜೀ ಟಿವಿ ನಡೆಸಿತ್ತು. ಈ ವಿಡಿಯೋ ಪ್ರಸಾರವಾಗಬಾರದು ಎಂದರೆ ಕೋಟ್ಯಂತರ ರುಪಾಯಿ ನೀಡುವಂತೆ ಬೆದರಿಕೆ ಒಡ್ಡಿತ್ತು ಎಂದು ನವೀನ್ ಜಿಂದಾಲ್ ಆರೋಪಿಸಿದ್ದಾರೆ.

ಜೀ ಟಿವಿ ತಂಡ ಒಡ್ಡಿದ್ದ ಡೀಲ್ ಕುರಿತಂತೆ ಗುರುವಾರ (ಅ.25) ಸುದ್ದಿಗೋಷ್ಠಿ ನಡೆಸಿದ ನವೀನ್, ವಿಡಿಯೋ ಕ್ಲಿಪ್ಪಿಂಗ್ ಅನ್ನು ಬಿಡುಗಡೆ ಮಾಡಿದರು.

ನಮ್ಮ ದೇಶದಲ್ಲಿ ಮಾಧ್ಯಮಗಳು ತಮ್ಮ ಪಾವಿತ್ರ್ಯತೆ ಕಳೆದುಕೊಳ್ಳುತ್ತಿದೆ. ಮಾಧ್ಯಮಗಳು ಸುದ್ದಿ ಪ್ರಸಾರಕ್ಕಿಂತ ಸುದ್ದಿ ಮಾರಾಟದಲ್ಲೇ ಕಾಲ ಕಳೆಯುತ್ತಿದೆ.

ಜಿಂದಾಲ್ ಸ್ಟೀಲ್ ಕಂಪನಿ ಬಗ್ಗೆ ಜೀ ನ್ಯೂಸ್ ಪ್ರಸಾರ ಮಾಡಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿದ್ದು, ಈ ಬಗ್ಗೆ ಸ್ಪಷ್ಟೀಕರಣ ನೀಡಲೇಬೇಕಾದ ಪರಿಸ್ಥಿತಿ ಒದಗಿ ಬಂದಿದೆ.

ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಜಿಂದಾಲ್ ಕಂಪನಿ ವಿರುದ್ಧ ಸ್ಟಿಂಗ್ ಆಪರೇಷನ್ ಜೀ ಟಿವಿ ನಡೆಸಿತ್ತು. ಈ ವಿಡಿಯೋ ಪ್ರಸಾರವಾಗಬಾರದು ಎಂದರೆ ಕೋಟ್ಯಂತರ ರುಪಾಯಿ ನೀಡುವಂತೆ ಬೆದರಿಕೆ ಒಡ್ಡಿತ್ತು ಎಂದು ನವೀನ್ ಜಿಂದಾಲ್ ಆರೋಪಿಸಿದರು.

ವಿಡಿಯೋದಲ್ಲಿ ಜೀ ನ್ಯೂಸ್ ವರದಿಗಾರ ಹಾಗೂ ಜಿಂದಾಲ್ ಸಂಸ್ಥೆ ಸಿಬ್ಬಂದಿ ಜೊತೆ ಡೀಲ್ ಮಾಡುತ್ತಿರುವ ದೃಶ್ಯಗಳಿದೆ. ಅದರೆ, ನೆವೀನ್ ಜಿಂದಾಲ್ ಮಾಡಿದ ಆರೋಪಗಳನ್ನು ಜೀ ಟಿವಿ ಸಂಸ್ಥೆ ನಿರಾಕರಿಸಿತ್ತು. ಈ ರೀತಿ ಆರೋಪಗಳು ಈ ಹಿಂದೆ ಕೂಡಾ ಕೇಳಿ ಬಂದಿತ್ತು. ನಾವು ಇದಕ್ಕೆಲ್ಲ ಹೆದರುವುದಿಲ್ಲ ಎಂದು ಜೀ ಎಂಟರ್ ಪ್ರೈಸರ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಪುನೀತ್ ಗೋಯಾಂಕ ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ನವೀನ್ ಜಿಂದಾಲ್ ಅವರು ಪುರಾವೆ ಸಮೇತ ಜೀ ಟಿವಿ ಡೀಲ್ ಬಯಲು ಮಾಡಿದ್ದಾರೆ. ಕಲ್ಲಿದ್ದಲು ಹಗರಣದಲ್ಲಿ ಜಿಂದಾಲ್ ಸಂಸ್ಥೆ ಪಾತ್ರ ಇದೆ ಎಂದು ಜೀ ನ್ಯೂಸ್ ವರದಿ ಮಾಡಿತ್ತು.

ಜೀ ಸಂಸ್ಥೆ ಮಾಲೀಕ ಸತೀಶ್ ಚಂದ್ರ ಕೂಡಾ ನವೀನ್ ಜಿಂದಾಲ್ ಆರೋಪವನ್ನು ಅಲ್ಲಗೆಳೆದಿದ್ದು, ಜಿಂದಾಲ್ ಸಂಸ್ಥೆ ಜೊತೆ ಯಾವುದೇ ಅಕ್ರಮ ಡೀಲ್ ಕುದುರಿಸಿಲ್ಲ. ನಮ್ಮ ವರದಿಗಾರರನ್ನು ಜಿಂದಾಲ್ ಸಂಸ್ಥೆ ನಡೆಸಿಕೊಂಡ ರೀತಿ ಬಗ್ಗೆ ಮೊದಲು ಮಾತನಾಡಲಿ. ಈ ರೀತಿ ಡೀಲ್ ಮಾಡಿ ಬೆಳೆಯಬೇಕಾಗಿಲ್ಲ ಎಂದಿದ್ದಾರೆ.

English summary
MP Naveen Jindal filed a criminal case against the news TV channel accusing the reporters of demanding Rs 100 crore for not airing a video tape which allegedly had showed involvement of Jindal's company in a coal allocation scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X