ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ ಡಿಎಫ್ ಸಿ ನಿವ್ವಳ ಲಾಭ ಶೇ 19 ರಷ್ಟು ಏರಿಕೆ

By Mahesh
|
Google Oneindia Kannada News

HDFC
ಮುಂಬೈ, ಅ.22: ಎಚ್ ಡಿಎಫ್ ಸಿ (Housing Development Finance Corporation (HDFC)) ಸೆ.30,2012ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಶೇ 19ರಂತೆ 1,151 ಕೋಟಿ ನಿವ್ವಳ ಲಾಭ ದಾಖಲಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 970.70 ಕೋಟಿ ರು ಲಾಭ ಗಳಿಸಿತ್ತು. ಸಂಸ್ಥೆಯ ನಿವ್ವಳ ಆದಾಯ 5,277.2 ಕೋಟಿ ರು ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4,169.14 ಕೋಟಿ ರು ಗಳಿಸಿತ್ತು.

ಎಚ್ ಡಿಎಫ್ ಸಿ ಆಸ್ತಿ ಮೌಲ್ಯ ಶೇ 20 ರಷ್ಟು ಏರಿಕೆ ಕಂಡು 1,80,637 ಕೋಟಿ ರು.ಗೆ ಏರಿದೆ. ಕಳೆದ ತ್ರೈಮಾಸಿಕದ ಕೊನೆಗೆ ಸಂಸ್ಥೆ ಆಸ್ತಿ ಮೌಲ್ಯ 1,50,045 ಕೋಟಿ ರು ನಷ್ಟಿತ್ತು.

ಹೌಸಿಂಗ್ ಫೈನಾನ್ಸ್ ಕ್ಷೇತ್ರದ ಬೃಹತ್ ಸಂಸ್ಥೆ ಎಚ್ ಡಿಎಫ್ ಸಿಯ capital adequacy ratio ಶೇ 16.7 ನಷ್ಟಿತ್ತು.

ಬಿಎಸ್ಇನಲ್ಲಿ ಎಚ್ ಡಿಎಫ್ ಸಿ ಷೇರುಗಳು ಕೊಂಚ ಇಳಿಮುಖವಾಗಿತ್ತು. ದಿನದ ಅಂತ್ಯಕ್ಕೆ 750.50 ರು ನಂತೆ ಶೇ 0.21 ಕುಸಿತವಾಗಿತ್ತು. ಎನ್ ಎಸ್ ಇನಲ್ಲಿ 750.75 ರು ನಂತೆ ಶೇ 0.34 ರಷ್ಟು ಇಳಿಕೆಯಾಗಿತ್ತು.

ಯುಎಸ್ ಈಕ್ವಿಟಿ ಸಂಸ್ಥೆ ಕಾರ್ಲಿಲೆ ಸಮೂಹದ ಜೊತೆ ಎಚ್‌ ಡಿಎಫ್ ಸಿ ಒಪ್ಪಂದಕ್ಕೆ ಮುಂದಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಬಂದಿತ್ತು. ಅಕ್ಟೋಬರ್ ಮೊದಲ ವಾರ ಕಂಪನಿ ಷೇರುಗಳು ಇಳಿಮುಖವಾಗಿ ಚಲಿಸಿತ್ತು.

ಈ ಒಪ್ಪಂದದ ಮೊತ್ತ ಸುಮಾರು 861 ಮಿಲಿಯನ್ ಯುಎಸ್ ಡಾಲರ್ ನಷ್ಟಿದ್ದು, ಭಾರತದ ನಾಲ್ಕನೇ ಅತಿದೊಡ್ಡ ಈಕ್ವಿಟಿ ಒಪ್ಪಂದ ಇದಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಜೂನ್ 2012ರಲ್ಲಿ ಎಚ್ ಡಿಎಫ್ ಸಿ ಸಂಸ್ಥೆ ಶೇ 25.1 ರಷ್ಟು ಏರಿಕೆಯಾಗಿ 1275.86 ಕೋಟಿ ನಿವ್ವಳ ಲಾಭ ಗಳಿಸಿತ್ತು. ಒಟ್ಟು ಆದಾಯದಲ್ಲಿ 7276.51 ಕೋಟಿ ರು ದಾಖಲಾಗಿತ್ತು.

English summary
HDFC today(Oct.22) reported a rise in its net profit by 19% to Rs 1,151.12 crore for the second quarter ended September 30. 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X