ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಪ್ರಧಾನಿ ಅಭ್ಯರ್ಥಿಯಾಗಲು ಆರೆಸ್ಸೆಸ್ ಒಪ್ಪಿಗೆ?

By Mahesh
|
Google Oneindia Kannada News

Narendra Modi
ನಾಗಪುರ, ಅ.21: ಭಾರತೀಯ ಜನತಾ ಪಕ್ಷ ಮುಂಬರುವ ಲೋಕಸಭಾ ಚುನಾವಣೆಗೆ ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಈ ರೇಸ್ ನಲ್ಲಿ ಎಲ್ಲರಿಗಿಂತ ಮುಂದಿರುವ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್) ಬೆಂಬಲ ಸಿಕ್ಕಿದೆ ಎಂದು ಮೂಲಗಳು ಹೇಳಿದೆ.

ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ(ಅ.21) ನಾಗಪುರಕ್ಕೆ ತೆರಳಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವರ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಸಂಜೆ ವೇಳೆಗೆ ಮೋದಿ ಅವರು ಸಿಹಿ ಸುದ್ದಿಯೊಂದಿಗೆ ವಾಪಸ್ ಆಗಲಿದ್ದಾರೆ ಎಂದು ಮೋದಿ ಅವರ ಆಪ್ತ ವಲಯ ಹೇಳಿದೆ.

ಗುಜರಾತ್ ನಲ್ಲಿ ಡಿಸೆಂಬರ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಲು ಮೋದಿ ಅವರು ಸಕಲ ಸಿದ್ಧತೆ ನಡೆಸಿದ್ದಾರೆ.

ಚುನಾವಣೆ ಪ್ರಚಾರಕ್ಕೆ ಮುಸ್ಲಿಂ ನಾಯಕರು ಹಾಗೂ ಬಿಹಾರಿಗಳನ್ನು ಬಳಸಿಕೊಳ್ಳದೆ ಮೋದಿ ಕಣಕ್ಕಿಳಿದಿರುವುದು ಬಿಜೆಪಿಗೆ ಅಚ್ಚರಿ ತಂದಿತ್ತು, ಈ ವಿಷಯ ಆರೆಸ್ಸೆಸ್ ಹಿರಿ ತಲೆಗಳ ಕಿವಿಗೂ ಮುಟ್ಟಿತ್ತು.

ಅಲ್ಲದೆ, ಇತ್ತೀಚೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಯೊಬ್ಬ ಮೋಸಗಾರ, ಭ್ರಷ್ಟ ಎಂದು ಹಿರಿಯ ಮುಖಂಡ ರಾಮ್ ಜೇಠ್ಮಲಾನಿ ಅವರು ಟೀಕಿಸಿದ್ದರು. ಅದೇ ಉಸಿರಿನಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಬಿಜೆಪಿಗೆ ಕಿವಿಮಾತು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಹಾಗೂ ಮೋಹನ್ ಭಾಗವತ್ ಅವರ ಭೇಟಿ ಕುತೂಹಲ ಕೆರಳಿಸಿದೆ. ಸೂರಜ್ ಕಂಡ್ ನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಯಲ್ಲಿ ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಒಮ್ಮತ ಮೂಡಿರಲಿಲ್ಲ. ಹೀಗಾಗಿ ಬಿಜೆಪಿ ನಾಯಕರು ಆರೆಸ್ಸೆಸ್ ಕೈಗೆ ಆಯ್ಕೆ ಜವಾಬ್ದಾರಿ ವಹಿಸಿರುವ ಸಾಧ್ಯತೆ ಹೆಚ್ಚಾಗಿದೆ.

English summary
Gujarat CM Narendra Modi on Sunday(Oct.21) met Rashtriya Swayamsevak Sangh (RSS ) chief Mohan Bhagwat in Nagpur. BJP and RSS are busy in selecting Prime Ministerial candidate for the Lok Sabha Election 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X