ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವತಿಯ MMS, ಬಂಟ್ವಾಳ ಯುವಕನ ಬಂಧನ

By Srinath
|
Google Oneindia Kannada News

blue-film-mms-blackmail-bantwal-youth-arrested
ಬಂಟ್ವಾಳ,, ಅ.18: ಯುವತಿಯೊಬ್ಬಳ ಅಶ್ಲೀಲ ವಿಡಿಯೋ ತಯಾರಿಸಿ, ಮದುವೆ ಮಾಡಿಕೊಳ್ಳುವಂತೆ ಬ್ಲಾಕ್‌ಮೇಲ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಸದರಿ ಯುವತಿಯ MMS ತೆಗೆದು, ತನಗೆ ದೈಹಿಕ ಸುಖ ನೀಡಲು ಒತ್ತಾಯಿಸುವ ಮೂಲಕ ಬ್ಲಾಕ್‌ಮೇಲ್ ಮಾಡಿದ ಆರೋಪದಲ್ಲಿ ಯುವಕನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅರೋಪಿಯನ್ನು ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ಎರ್ಕುಳ ನಿವಾಸಿ ಅನಿಲ್ ಪಿಂಟೊ ಎಂದು ಗುರುತಿಸಲಾಗಿದೆ.

ಬಾಧಿತ ಯುವತಿಯು ನಲ್ಕೆಮಾರ್‌ ನಿವಾಸಿ. ಈಕೆ ಸ್ವಸಹಾಯ ಗುಂಪೊಂದರ ಸದಸ್ಯೆ. ಭಾದಿತ ಯುವತಿ ಹಾಗೂ ಆರೋಪಿ ಅನಿಲ್ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ. ಸಂಘದ ಸಭೆಯ ಬಳಿಕ ಪಿಂಟೋ ಆಕೆಯನ್ನು ತನ್ನ ಮನೆಗೆ ಕರೆದೊಯ್ಯುತ್ತಿದ್ದ.

ಆತ ತನ್ನ ಮನೆಯಲ್ಲಿ ಆಕೆಯ ಬ್ಲೂಫಿಲಂ ತಯಾರಿಸಿ, ಬ್ಲಾಕ್‌ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಈಕೆಯನ್ನು ಮದುವೆಯಾಗುತ್ತೇನೆಂದು ನಂಬಿಸಿದ್ದ ಅನಿಲ್ ಆಕೆಯ ಅಶ್ಲೀಲ ಚಿತ್ರಗಳನ್ನು ಮೊಬೈಲ್ ಮೂಲಕ ಸೆರೆ ಹಿಡಿದಿದ್ದ ಎನ್ನಲಾಗಿದೆ.

ಇದನ್ನು ಆಕೆಗೆ ತೋರಿಸಿ ತನ್ನ ಮನೆಗೆ ಬಂದು ದೈಹಿಕ ಸುಖ ನೀಡುವಂತೆ ಒತ್ತಾಯಿಸುತ್ತಿದ್ದ. ಇಲ್ಲದಿದ್ದರೆ ಈ ವಿಡಿಯೋವನ್ನು ಸ್ನೇಹಿತರಿಗೆ ರವಾನೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. ಈ ಬಗ್ಗೆ ಯುವತಿಯು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

English summary
Blue film MMS Blackmail Bantwal youth arrested
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X