ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಯಾಣ: ರಾಹುಲ್ ಗಾಂಧಿಯಿಂದಲೂ ಭೂವಶೀಕರಣ

By Srinath
|
Google Oneindia Kannada News

aicc-gs-rahul-gandhi-also-in-land-scam-haryana-chautala
ಜಲಂಧರ್, ಅ.18: ಕಾಂಗ್ರೆಸ್ ಕಾರ್ಯಕರ್ತರಿಗೆ ಯುವ ರಾಹುಲ್ ಗಾಂಧಿಗಿಂತ ಮತ್ಯಾರಿದ್ದಾರೆ role model ಎಂದು ಕೆಪಿಸಿಸಿ ಮಂದಿ ಕರಾವಳಿಯಲ್ಲಿ ಅಲೆಅಲೆಯಾಗಿ ಹೇಳುತ್ತಿರುವ ಹೊತ್ತಿನಲ್ಲೇ ರಾಹುಲ್ ಗಾಂಧಿಯಿಂದಲೂ ಭೂವಶೀಕರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಕಾಂಗ್ರೆಸ್ ಆಡಳಿತಾರೂಢ ಪಕ್ಷವಾಗಿದ್ದೇ ಬಂತು ಹರಿಯಾಣಾದಲ್ಲಿ ಗಾಂಧಿ ಕುಟುಂಬದ ಭೂವಶೀಕರಣ ತಾರಕಕ್ಕೇರಿದೆ. ಸೋನಿಯಾ ಅಳಿಯ,ಖಾಸಗಿ ವ್ಯಕ್ತಿ ರಾಬರ್ಟ್ ವಾದ್ರಾ ಒಬ್ಬರೇ ಅಲ್ಲ, ಎಐಸಿಸಿ ಮಹಾಕಾರ್ಯದರ್ಶಿ ರಾಹುಲ್ ಗಾಂಧಿ ಸಹ ನಮ್ಮ ರಾಜ್ಯದಲ್ಲಿ ಅಕ್ರಮವಾಗಿ ಭೂ ಖರೀದಿ ಮಾಡಿದ್ದಾರೆ.

ಮಾರುಕಟ್ಟೆ ದರಗಳಿಗಿಂತ ಕಡಿಮೆ ದರದಲ್ಲಿ ಅವುಗಳ ಮೌಲ್ಯ ಮಾಡಿ, ಸರಿಯಾಗಿ ಸ್ಟಾಂಪ್ ಡ್ಯೂಟಿ ಪಾವತಿಸದೆ ಖರೀದಿ ಮಾಡಿದ್ದಾರೆ ಎಂದು ಭಾರತೀಯ ರಾಷ್ಟ್ರೀಯ ಲೋಕ ದಳದ (INLD) ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಅವರು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಭೂವಶೀಕರಣಕ್ಕೆ ಸ್ಥಳೀಯ ಕಂದಾಯ ಅಧಿಕಾರಿಗಳು ನೆರವಿನ 'ಹಸ್ತ' ನೀಡಿದ್ದಾರೆ. ವಾದ್ರಾ 1.64 ಕೋಟಿ ತೆತ್ತು 74 ಎಕರೆ ಜಮೀನನ್ನು ಖರೀದಿಸಿದರೆ ಅವರ ಬಾವಮೈದುನ ರಾಹುಲ್ 6.5 ಎಕರೆ ಭೂಮಿಯನ್ನು 2008-2009ರಲ್ಲಿ ಪಲವಾಲ ಜಿಲ್ಲೆಯಲ್ಲಿ ಖರೀದಿಸಿದ್ದಾರೆ ಎಂಬುದು ಚೌತಾಲಾ ಆರೋಪದ ತಿರುಳು.

ಈ ಸಂಬಂಧ sale deeds ದಾಖಲೆಗಳನ್ನು ಸಾದರಪಡಿಸಿದ ಚೌತಾಲಾ, ರಾಹುಲ್ ಅವರು DLF Gurgaon ಮುಖ್ಯಸ್ಥ ಎಚ್ಎಲ್ ಪಹುವಾ ಅವರಿಂದ 2008ರ ಮಾರ್ಚಿನಲ್ಲಿ 26.47 ಲಕ್ಷ ರೂ. ನೀಡಿ ಖರೀದಿ ನಡೆಸಿದ್ದಾರೆ.

English summary
Indian National Lok Dal (INLD) chief and former Haryana Chief Minister Om Prakash Chautala said on Wednesday that besides Robert Vadra, the son-in-law of Congress chief Sonia Gandhi, the latter's son, Rahul Gandhi, had also bought land in Haryana at prices much lower than market prices during 2008.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X