ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಅಧಿನಾಯಕ ರಾಹುಲ್ ಅತ್ಯಾಚಾರ ಮಾಡಿಲ್ಲ

By Srinath
|
Google Oneindia Kannada News

aicc-gs-rahul-gandhi-absolved-in-molestation-case-sc
ನವದೆಹಲಿ, ಅ.18: ರಾಹುಲ್ ಗಾಂಧಿ ವಿರುದ್ಧದ ಅತ್ಯಾಚಾರ ದೂರು ಆಧಾರರಹಿತ ಎಂದು ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ಇಂದು ಕ್ಲೀನ್ ಚಿಟ್ ನೀಡಿದೆ. ಇದೇ ವೇಳೆ, ರಾಹುಲ್ ವಿರುದ್ಧ ದೂರು ಸಲ್ಲಿಸಿದ್ದ ಮಧ್ಯಪ್ರದೇಶದ ಕಿಶೋರ್ ಸಮ್ರಿತ್ ಎಂಬ ಮಾಜಿ ಶಾಸಕಗೆ ಕೋರ್ಟ್ 20 ಲಕ್ಷ ರೂ. ದಂಡ ವಿಧಿಸಿದೆ.

ರಾಹುಲ್ ತಾನು ಪ್ರತಿನಿಧಿಸುವ ಅಮೇಠಿ ಕ್ಷೇತ್ರದಲ್ಲಿ ಒಬ್ಬ ಯುವತಿಯನ್ನು ಅಪಹರಿಸಿ, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಸದರಿ ಸಮಾಜವಾದಿ ಪಕ್ಷದ ಶಾಸಕ ದೂರಿದ್ದರು. 20 ಲಕ್ಷ ರೂ. ದಂಡದ ಮೊತ್ತದಲ್ಲಿ 5 ಲಕ್ಷ ಬಾಧಿತ ಯುವತಿಗೆ, 5 ಲಕ್ಷ ರಾಹುಲ್ ಗಾಂಧಿಗೆ, 10 ಕೋರ್ಟಿಗೆ ದಂಡ ಪಾವತಿಸುವಂತೆ ಕೋರ್ಟ್ ಆಜ್ಞಾಪಿಸಿದೆ.

ರಾಹುಲ್ ಗಾಂಧಿ ಮತ್ತು ಆತನ ಕೆಲವು ವಿದೇಶಿ ಗೆಳೆಯರು ಸುಕನ್ಯ ಸಿಂಗ್ ಎಂಬ 24 ವರ್ಷದ ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ. ಆನಂತರ ಕೆಲವು ವಾರಗಳ ಬಳಿಕ ಸುಕನ್ಯ ಮತ್ತು ಆಕೆಯ ಪೋಷಕರು ಕಾಣೆಯಾಗಿದ್ದಾರೆ ಎಂದು ವೆಬ್ ಸೈಟ್ ಒಂದು 2006ರ ಡಿಸೆಂಬರಿನಲ್ಲಿ ಪ್ರಕಟಿಸಿತ್ತು. ಈ ಸುದ್ದಿಯನ್ನು ಆಧರಿಸಿ, ಅಲಹಾಬಾದ್ ಹೈಕೋರ್ಟಿನಲ್ಲಿ ಮಧ್ಯಪ್ರದೇಶದ ಕಿಶೋರ್ ಸಮ್ರಿತ್ ರಾಹುಲ್ ವಿರುದ್ಧ ದೂರು ನೀಡಿದ್ದರು.

ಆದರೆ 2011ರ ಮಾರ್ಚ್ ತಿಂಗಳಲ್ಲಿ ಅಲಹಾಬಾದ್ ಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿತ್ತು. ಜತೆಗೆ, ಅರ್ಜಿದಾರನಿಗೆ (ಮಾಜಿ ಶಾಸಕ ಕಿಶೋರ್) 50 ಲಕ್ಷ ರುಪಾಯಿ ದಂಡವನ್ನು ವಿಧಿಸಿ, ರಾಹುಲ್ ಗಾಂಧಿಯ ಹೆಸರಿಗೆ ಕಳಂಕ ತರಲು ಉದ್ದೇಶಪೂರ್ವಕವಾಗಿ ಈ ದೂರು ಸಲ್ಲಿಸಲಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿತ್ತು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120B, 181, 211 ಮತ್ತು 499-500 ಅನುಸಾರ ದೂರುದಾರ ಮಾಜಿ ಶಾಸಕ ಕಿಶೋರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಬಿಐ ತನಿಖೆಗೆ ಮುಂದಾಯಿತು. ತಕ್ಷಣ ದೂರುದಾರ ಮಾಜಿ ಶಾಸಕ ಕಿಶೋರ್ ಸುಪ್ರೀಂ ಕೋರ್ಟಿನ ಮೊರೆಹೋದರು.

ಮಾಜಿ ಶಾಸಕ ಕಿಶೋರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಸಿಬಿಐ ತನಿಖೆ ನಡೆಸುವುದಕ್ಕೆ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರಕಾರ ಮತ್ತು ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿತ್ತು.

ಇದಕ್ಕೆ ಉತ್ತರವಾಗಿ, 'ನನ್ನ ವಿರುದ್ಧದ ಅತ್ಯಾಚಾರ ಮತ್ತು ಅಪಹರಣದ ದೂರು ಆಧಾರರಹಿತ. ಮತ್ತು ಅದರಿಂದ ನನ್ನ ತೇಜೋವಧೆಯಾಗುತ್ತಿದೆ' ಎಂದು ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ಅವರು ಕೌಂಟರ್ ಅಫಿಡವಿಟ್ ಸಲ್ಲಿಸಿದರು.

English summary
Supreme Court today absolved AICC GS Rahul Gandhi in molestation case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X