ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲ್ಬರ್ಗಾ: ಜಗದೀಶ್ ಶೆಟ್ಟರ್ ಸಚಿವ ಸಂಪುಟ ಸಭೆ ಮುಖ್ಯಾಂಶ

By Mahesh
|
Google Oneindia Kannada News

ಕಲ್ಬುರ್ಗಿ, ಅ.18: ಇಲ್ಲಿನ ಮಿನಿ ವಿಧಾನಸೌಧದಲ್ಲಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ (ಅ.18) ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಉತ್ತರ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ರೀತಿ ಸಚಿವ ಸಂಪುಟದ ಸಭೆಯನ್ನು ನಡೆಸಲಾಗುತ್ತದೆ. ಅ.4 ರಂದು ನಡೆಯಬೇಕಿದ್ದ ಸಚಿವ ಸಂಪುಟ ಕಾವೇರಿ ನದಿ ನೀರು ಹಂಚಿಕೆ ವಿವಾದ ಹಿನ್ನೆಲೆಯಲ್ಲಿ ಅ.18ಕ್ಕೆ ಮುಂದೂಡಲಾಗಿತ್ತು.

ಗುಲ್ಬರ್ಗಾ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಗುರುವಾರ ಚಾಲನೆ ನೀಡಿದರು.

Shettar Cabinet meet in Gulbarga

ಗುಲ್ಬರ್ಗಾ ಹೈಕೋರ್ಟ್ ಎದುರಿಗಿರುವ ಗುಲ್ಬರ್ಗಾ ಐಟಿ ಪಾರ್ಕ್ ಅನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಗುರುವಾರ (ಅ.18) ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಚಿವ ರೇವೂನಾಯಕ್ ಬೆಳಮಗಿ, ಸುನಿಲ್ ವ್ಯಾಲೇಪುರ್, ಅರುಣಾ ಚಂದ್ರಶೇಖರ್ ಪಾಟೀಲ್, ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಗುಲ್ಬರ್ಗಾ ಸಚಿವ ಸಂಪುಟ ಸಭೆ ತೀರ್ಮಾನಗಳ ಮುಖ್ಯಾಂಶಗಳು:
* ಪ್ರಸಕ್ತ ಸರ್ಕಾರದ ಅವಧಿಯಲ್ಲಿ ಇದು ಗುಲಬರ್ಗಾದಲ್ಲಿ ನಡೆಸಲಾದ ನಾಲ್ಕನೆಯ ಸಚಿವ ಸಂಪುಟ ಸಭೆ
* ಈ ಹಿಂದೆ 2008ರ ಸೆಪ್ಟೆಂಬರ್ 26, 2009ರ ಅಗಸ್ಟ್ 27 ಮತ್ತು 2010ರ ಅಕ್ಟೋಬರ್ 4ರಂದು ಸಚಿವ ಸಂಪುಟ ಸಭೆಗಳು ನಡೆದಿದ್ದವು.
* ಕಳೆದ 3 ಸಚಿವ ಸಂಪುಟ ಸಭೆಗಳಲ್ಲಿ ಒಟ್ಟು 119 ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
* ಇಂದಿನ ಸಭೆಯಲ್ಲಿ ಒಟ್ಟು 86 ವಿಷಯಗಳನ್ನು ಚರ್ಚಿಸಲಾಗಿದೆ.
*ರೈತ ಚಳವಳಿಗಾರರ ಮೇಲಿದ್ದ ಸುಮಾರು 20 ಕೇಸ್ ಗಳನ್ನು ಹಿಂದಕ್ಕೆ ಪಡೆಯಲಾಗಿದೆ.
* ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 7875 ಕೋಟಿ ರು ಮೀಸಲು.
* ಗುಲ್ಬರ್ಗಾ ವಿಭಾಗಕ್ಕೆ 5400 ಕೋಟಿ ರು ಅನುದಾನ
* ಗುಲ್ಬರ್ಗಾಕ್ಕೆ 8 ಕೈಗಾರಿಕೆಗಳು ಮಂಜೂರು
* 7 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ
* ಕೊಡಗು, ಚಿತ್ರದುರ್ಗ, ಹಾವೇರಿ, ಕೊಪ್ಪಳ, ತುಮಕೂರು, ಗದಗ, ಚಾಮರಾಜನಗರ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳು.
* ರಾಯಚೂರಿನಲ್ಲಿ ಐಐಟಿ ಸ್ಥಾಪನೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು
* ಚಿಂಚೋಳಿ, ಹುಬ್ಬಳ್ಳಿಯಲ್ಲಿ ಸೋಲಾರ್ ಪಾರ್ಕ್
* ಬಸವ ವಸತಿ ಯೋಜನೆಯಡಿಯಲ್ಲಿ ಹೆಚ್ಚುವರಿ ಮನೆಗಳು
* ಹೆಚ್ಚುವರಿ ಮನೆಗಳ ನಿರ್ಮಾಣಕ್ಕೆ 1 ಸಾವಿರ ಕೋಟಿ
* 408 ಕೋಟಿ ರು ವೆಚ್ಚದಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ
* 13 ಪಟ್ಟಣಗಳಿಗೆ ಕುಡಿಯುವ ನೀರು ಯೋಜನೆಗೆ 197 ಕೋಟಿ ಮೀಸಲು
* ಕೃಷ್ಣಾ ಮೇಲ್ದಂಡೆ ಯೋಜನೆ ನಾರಾಯಣಪೂರ ಎಡದಂಡೆ ಕಾಲುವೆ, ಕಾಲುವೆ ಜಾಲದ ವಿಸ್ತರಣೆ ನವೀಕರಣ ಹಾಗೂ ಅಧುನೀಕರಣಕ್ಕೆ 4085 ಕೋಟಿ ರೂ.ಗಳು ಇತ್ಯಾದಿ.
* ಗುಲಬರ್ಗಾದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ಶರಣಬಸವ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಒಪ್ಪಿಗೆ.
* ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದ ಪ್ರಾದೇಶಿಕ ಅಭಿವೃದ್ದಿ ಮತ್ತು ಮೀಸಲಾತಿ ವಿಷಯಗಳಿಗಾಗಿ ಕ್ರಿಯಾ ಯೋಜನೆಯ ಮೇಲ್ವಿಚಾರಣೆ ಮತ್ತು ಮಾರ್ಗಸೂಚಿ ಸಿದ್ಧಪಡಿಸಲು ಸಚಿವ ಸಂಪುಟದ ಉಪ ಸಮಿತಿ ರಚನೆ.

English summary
Karnataka State Cabinet meeting held in Gulbarga on Thursday 18 Oct. Cabinet discussed over 76 issues mainly related to North Karnataka districts. Briefing newsmen CM Jagadish Shettar told that his Government has given nod to open 7 Medical Colleges in State (Koppal, Chitradurga, Tumkur, Gadag, Kodagu, Haveri, Chamarajanagar)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X