ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪಗೆ ಮತ್ತೆ ಜಯ: ಜಾರಿದ ಜಾರಕಿಹೊಳಿ

By Srinath
|
Google Oneindia Kannada News

Yeddyurappa loyalist win Belgaum ZP
ಬೆಳಗಾವಿ, ಅ.18: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ. ಮೈಸೂರು, ಬೆಂಗಳೂರು, ಧಾರವಾಡ ಆಯ್ತು ಈಗ ಬೆಳಗಾವಿ ಜಿಲ್ಲಾ ಪಂಚಾಯಿತಿಯನ್ನೂ ತಮ್ಮ ಕಬ್ಜಾಗೆ ತೆಗೆದುಕೊಂಡಿದ್ದಾರೆ. ಇನ್ನು, ಶಿವಮೊಗ್ಗ ಸುಭ್ರದವಾಗಿ ಅವರ ಹಿಡಿತದಲ್ಲೇ ಇದೆ.

ಹೌದು ಇಂದು ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಮ್ಮವರೇ ಗೆಲ್ಲುವಂತೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಅವರು ಅತ್ತ ಗುಲ್ಬರ್ಗಾದಲ್ಲಿ ನಡೆಯುತ್ತಿರುವ ಸಂಪುಟ ಸಭೆಗೆ ಗೈರು ಹಾಜರಾಗಿ, ಇತ್ತ ತಮ್ಮ ನಾಯಕ ಯಡಿಯೂರಪ್ಪ ಸೂಚಿತ ಅಭ್ಯರ್ಥಿಗೆ ಗೆಲುವು ದಕ್ಕುವಂತೆ ನೋಡಿಕೊಂಡಿದ್ದಾರೆ. ಇದರಿಂದ ಯಡಿಯೂರಪ್ಪ ಅವರ ಕಡು ವಿರೋಧಿ ಸಚಿವ ಬಾಲಚಂದ್ರ ಜಾರಕಿಹೊಳಿಗೆ ಸೋಲುಣಿಸಿದ್ದಾರೆ.

ಪ್ರಮೀಳಾ ರಾಜ್ಯ: ರಾಯಭಾಗ ತಾಲೂಕಿನ ಕುಡಚಿಯ ಶಾಂತ ಕೃಷ್ಣ ಕಳ್ಳೋಲಿಕಾರ್ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 86 ಸದಸ್ಯರ ಜಿಪಂನಲ್ಲಿ 63 ಮಂದಿ ಬಿಜೆಪಿಯವರಿದ್ದಾರೆ. ಶಾಂತ ಅವರು ಮಾನವಶಾಸ್ತ್ರದಲ್ಲಿ (Anthropology) ಸ್ನಾತಕೋತ್ತರ ಪದವೀಧರೆ. ಜತೆಗೆ ಬಿ.ಎಡ್ ಸಹ ಮಾಡಿದ್ದಾರೆ.

ಶಾಂತ ಅವರ ಸೋದರರ ಪೈಕಿ ಒಬ್ಬರು ತಮಿಳುನಾಡಿನಲ್ಲಿ IAS ಅಧಿಕಾರಿಯಾಗಿದ್ದರೆ ಮತ್ತೊಬ್ಬರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದಾರೆ.

ಬಾಗೇವಾಡಿ ತಾಲೂನಿಕ ಉಷಾ ಕಲ್ಲಪ್ಪ ಶ್ರಿತ್ರಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಗಮನಾರ್ಹವೆಂದರೆ ಬೆ.ಜಿ.ಪಂ ನಲ್ಲಿ 35 ಮಹಿಳಾ ಸದಸ್ಯರಿದ್ದಾರೆ. ಸುವರ್ಣ ವಿಧಾನ ಸೌಧ ಉದ್ಘಾಟನೆ ನಿಮಿತ್ತ ಚುನಾವಣೆಗಳು ಸುಮಾರು 1 ತಿಂಗಳು ತಡವಾಗಿ ನಡೆಯಿತು.

English summary
After Mysore, Bangalore and Dharwad Zilla Panchayats BS Yeddyurappa takes into his hold the Belgaum ZP. Yeddyurappa loyalists won the elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X